Advertisement

ಅಪರಿಚಿತ ವಾಹನ ಢಿಕ್ಕಿ : ವೃದ್ಧೆ ಸಾವು

10:03 PM Aug 28, 2021 | Team Udayavani |

ಕೊರಟಗೆರೆ: ತಾಲೂಕಿನ ಕಂಬದಹಳ್ಳಿ ಸಮೀಪ ಅಪರಿಚಿತ ವಾಹನ  ಡಿಕ್ಕಿ ಹೊಡೆದ ಪರಿಣಾಮ ವೃದ್ದೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ 9:00 ಗಂಟೆಯಲ್ಲಿ ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಪೆಮ್ಮೆದೇವರಹಳ್ಳಿ ಮಜರೆ ವೀರನಗರದ ಗ್ರಾಮದ ಗಂಗಮ್ಮ (85) ಮೃತಪಟ್ಟ ದುರ್ದೈವಿ.

ಸಮೀಪದ ಕಂಬದಹಳ್ಳಿ ಗ್ರಾಮದಲ್ಲಿದ್ದ ತನ್ನ ಮಗಳನ್ನು ನೋಡಿಕೊಂಡು ಬರಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಅಪಘಾತಕ್ಕೀಡಾದ ವೃದ್ಧೆ ಗಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್ಐ ಮುತ್ತುರಾಜು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next