ಕೊರಟಗೆರೆ : ಬಿರುಗಾಳಿಯ ಆರ್ಭಟಕ್ಕೆ ಬೃಹತ್ ಮರಗಳು ರಸ್ತೆಗೆ ಬಿದ್ದಿವೆ. ರೈತರ ಮನೆಯ ಶೀಟ್ ಗಳು ಕಿಲೋ ಮೀಟರ್ ವರೆಗೆ ಹಾರಿ ಹೋಗಿವೆ. ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತವಾಗಿ ಕತ್ತಲೆಯಲ್ಲಿಯೇ ರೈತರು ಕಾಲ ಕಳೆಯುವಂತಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮ ಪಂಚಾಯಿತಿಯ ಗೊಡ್ರಹಳ್ಳಿ, ಬಿ.ಡಿ.ಪುರ ಬೈಚಾಪುರ ತೋಗರಿಘಟ್ಟ ಬೈರೇನಹಳ್ಳಿ ವ್ಯಾಪ್ತಿಯಲ್ಲಿ ಬಿರುಗಾಳಿ ಆರ್ಭಟಕ್ಕೆ ನೂರಾರು ಮರಗಿಡಗಳು ನೆಲಕ್ಕುರುಳಿವೆ.
ಗೋಡ್ರಹಳ್ಳಿ ಗ್ರಾಮದಿಂದ ಬೈರೇನಹಳ್ಳಿ ಮತ್ತು ಹೊಳವನಹಳ್ಳಿ ಮಾರ್ಗದ ರಸ್ತೆಯಲ್ಲಿ ಬೃಹತ್ ಮರಗಳು ಬಿದ್ದಿರುವ ಪರಿಣಾಮ ಸಂಪರ್ಕ ಕಡಿತವಾಗಿವೆ.ಗೋಡ್ರಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂಬ ರೈತನ ತೋಟದ ಮನೆಯ ಶೀಟ್ ಗಳು ಪುಡಿ ಪುಡಿಯಾಗಿವೆ.ಇದೇಗ್ರಾಮದ ಶಂಕರಪ್ಪನ ಮನೆಯ ಶೀಟ್ ಗಳು ಗಾಳಿಗೆ ಹಾರಿ ಹೋಗಿವೆ.
ಇದನ್ನೂ ಓದಿ : ಕಡಲಾಮೆ ನಕ್ಷೆಯಲ್ಲಿ ಗೋವಾವನ್ನು ಅಗ್ರಸ್ಥಾನದಲ್ಲಿ ಇರಿಸಲು ನಿರ್ಧಾರ : ಸಚಿವ ರಾಣೆ
ಬಿರುಗಾಳಿಯ ಆರ್ಭಟಕ್ಕೆ ನೂರಾರು ಮರ ಗಿಡಗಳು ನೆಲ ಕಚ್ಚಿವೆ. ರೈತನ ಮನೆಯ ಚಾವಣಿ ಬಿರುಗಾಳಿಗೆ ಹಾರಿ ಹೋಗಿವೆ. ತಹಶಿಲ್ದಾರ್ ,ತೋಟಗಾರಿಕೆ ಮತ್ತು ಬೆಸ್ಕಾಂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.