Advertisement
ಕೊರಟಗೆರೆ ಪಟ್ಟಣದ ಕಾಮಧೇನು ಸಭಾಂಗಣದಲ್ಲಿ ಕೊರಟಗೆರೆ ಜಾತ್ಯತೀತ ಜನತಾದಳ ಪಕ್ಷದ ವತಿದಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿಯ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಪಂಚರತ್ನ ರಥಯಾತ್ರೆಯ ಪ್ರಮುಖ ಅಂಶವಾಗಿದೆ. ಕರ್ನಾಟಕ ರಾಜ್ಯದ ಪ್ರತಿಮನೆಗೂ ಸರಕಾರದ ಸೌಲಭ್ಯ ಕಲ್ಪಿಸುವುದು ಮತ್ತು ದುರ್ಬಲ ಸಮುಧಾಯದ ಒಳಿತು ಕಲ್ಪಿಸುವ ಮೂಲಕ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಪರಿಪೂರ್ಣ ಪರಿಹಾರ ನೀಡುವುದೇ ಕುಮಾರಣ್ಣನ ಬಹುದೊಡ್ಡ ಕನಸಾಗಿದೆ ಎಂದರು.
Related Articles
Advertisement
ತೋವಿನಕೆರೆ ಗ್ರಾಮದಲ್ಲಿ ಗ್ರಾಮವಾಸ್ತವ್ಯಕೊರಟಗೆರೆ ಕ್ಷೇತ್ರದ ಪುರವರಕ್ಕೆ ಪಂಚರತ್ನ ರಥಯಾತ್ರೆ ಡಿ.೩ರ ಶನಿವಾರ ಬೆ.೧೦ಗಂಟೆಗೆ ಆಗಮಿಸಲಿದೆ. ಪುರವರದಿಂದ ಬೈರೇನಹಳ್ಳಿ, ಹೊಳವನಹಳ್ಳಿ, ಕೋಳಾಲ ಮಾರ್ಗವಾಗಿ ಕೊರಟಗೆರೆ ಪಟ್ಟಣದ ಮೂಲಕ ತೋವಿನಕೆರೆ ತಲುಪಲಿದೆ. ತೋವಿನಕೆರೆ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕೊರಟಗೆರೆ ಕ್ಷೇತ್ರದ ಜನತೆಯ ಜೊತೆ ಸಮಾಲೋಚನೆ ನಡೆಸುತ್ತಾರೆ. ಡಿ.1ರಿಂದ ಡಿ.6 ರವರೇಗೆ ತುಮಕೂರು ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಅದ್ದೂರಿಯಾಗಿ ಸಂಚಾರ ನಡೆಸಲಿದೆ. ಮೊದಲ ಹಂತದಲ್ಲಿ ತುಮಕೂರು ನಗರ, ಮಧುಗಿರಿ, ಕೊರಟಗೆರೆ, ಪಾವಗಡ, ಶಿರಾ ಮತ್ತು ಗುಬ್ಬಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಗ್ರಾಮವಾಸ್ತವ್ಯ ಮಾಡಲಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ನವ ಕರ್ನಾಟಕ ನಿರ್ಮಾಣದ ಪಂಚರತ್ನ ರಥಯಾತ್ರೆಯು ದಿಕ್ಸೂಚಿ ಆಗಲಿದೆ ಎಂದು
ತುಮಕೂರು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಕ್ಯಾತರಾಯ, ಕೊರಟಗೆರೆ ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಯುವಾಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯರಾದ ಪ್ರಕಾಶ್, ಸಾಕರಾಜು, ರಾಮಣ್ಣ, ಮುಖಂಡರಾದ ಕಾಂತರಾಜು, ಕಾಮರಾಜು, ಸಿದ್ದಮಲ್ಲಪ್ಪ, ಲಕ್ಷ್ಮೀನಾರಾಯಣ್, ರಮೇಶ್, ಸಂತೋಷಗೌಡ, ಲಕ್ಷ್ಮೀನರಸಯ್ಯ, ಬಸವರಾಜು, ಕಾಳಿಚರಣ್, ಅಮರ್ ಸೇರಿದಂತೆ ಇತರರು ಇದ್ದರು.