Advertisement

Koratagere:ಅದ್ಧೂರಿಯಾಗಿ ನಡೆದ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

08:39 PM Mar 09, 2024 | Team Udayavani |

ಕೊರಟಗೆರೆ: ಪಟ್ಟಣದ ಪ್ರಸಿದ್ದ ಗಂಗಾಧರೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾ ಶಿವರಾತ್ರಿಯೊಂದು ಗಿರಿಜಾ ಕಲ್ಯಾಣ, ಲಕ್ಷದೀಪೋತ್ಸವ ಹಾಗೂ ಶನಿವಾರದಂದು ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ನಡೆಯಿತು.

Advertisement

ತಾಲ್ಲೂಕಿನ ನಾಡ ಪ್ರಭು ರಣಬೈರೇಗೌಡ ಯುವ ಸೇವಾ ಸಂಘ ಮತ್ತು ಪ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ಇವರಿಂದ ಸತತ 24ನೇ ವರ್ಷದ ಏರ್ಪಡಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಹೋಮ, ಗಿರಿಜಾಕಲ್ಯಾಣ, ಸೇರಿದಂತೆ ವಿವಿಧಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಪಟ್ಟಣದ ತೇರಿನ ಬೀದಿಯಲ್ಲಿ ಶ್ರೀಗಂಗಾಧರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ತಹಶೀಲ್ದಾರ್ ಮಂಜುನಾಥ್ ಚಾಲನೆ ನೀಡಿದ ಬಳಿಕ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಶನಿವಾರ ನಡೆಯಿತು.

ಸಿದ್ಧರಬೆಟ್ಟದ ವೀರಭಧ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮಹಾಶಿವರಾತ್ರಿ ಹಬ್ಬವು ಪ್ರತಿಯೊಬ್ಬರಿಗೂ ಪ್ರಿಯವಾದ ಹಬ್ಬವಾಗಿದೆ. ಏಕೆಂದರೆ ನಾಡಿನೆಲ್ಲೆಡೆ ಭಕ್ತರು ಹಬ್ಬದಂದು ಉಪವಾಸ ವ್ರತವನ್ನು ಮಾಡುವುದರ ಜೊತೆಗೆ ಶಿವನ ಹತ್ತಿರವಿದ್ದು ಸ್ಮರಣೆಯನ್ನು ಮಾಡುವ ಹಬ್ಬವಾಗಿದೆ. ಗಂಗಾಧರೇಶ್ವರ ದೇವಲಾಯವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

Advertisement

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಣಭೈರೇಗೌಡರ ಯುವ ವೇದಿಕೆ ಮತ್ತು ಪ್ರೆಂಡ್ಸ್ ಗ್ರೂಪ್ ವತಿಯಿಂದ 24 ವರ್ಷಗಳಿಂದಲೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಈ ವರ್ಷವಾದರೂ ಸಹ ನಾಡಿನಲ್ಲಿ ಉತ್ತಮ ಮಳೆಯನ್ನು ಕರುಣಿಸಿ ಸಕಲ ಜೀವರಾಶಿಗಳನ್ನು ಕಾಪಾಡಿ ಭಕ್ತರ ಬೇಡಿಕೆಗಳನ್ನು ಈಡೇರಿಸಲಿ ಎಂದು ಹೇಳಿದರು.

ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ದಕ್ಷಿಣಕಾಶಿಯೆಂದೇ ಪ್ರಸಿದ್ದಿ ಪಡೆದಿರುವ ಪಟ್ಟಣದ ಗಂಗಾಧರೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಈ ದೇವಾಲಯವು ಮುಜುರಾಯಿ ಇಲಾಖೆಗೆ ಸೇರಿದ್ದು ರಣಬೈರೇಗೌಡರ ಯುವ ವೇದಿಕೆ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಸುಮಾರು ೨೪ ವರ್ಷಗಳಿಂದ ಮಹಾಶಿವರಾತ್ರಿ ಹಬ್ಬದಂದು ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ಗಿರಿಜಾ ಕಲ್ಯಾಣ ಮತ್ತು ಲಕ್ಷದಿಪೋತ್ಸವ ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಭಕ್ತರು ಹಬ್ಬದಂದು ಉಪವಾಸ ವ್ರತವನ್ನು ಮಾಡಿ ಸ್ವಾಮಿ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಹಬ್ಬದ ಮುಂದಿನ ದಿನ ಪಟ್ಟಣದ ತೇರಿನ ಬೀದಿಯಲ್ಲಿ ಹೆಚ್ಚಿನ ಭಕ್ತರ ಸಮೂಹದಲ್ಲಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವವು ಅದ್ದೂರಿಯಾಗಿ ನಡೆಯಿತು ಎಂದರು.

ಈ ಸಂದರ್ಭದಲ್ಲಿ ರಣಭೈರೇಗೌಡರ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್, ಕೆ.ವಿ ಪುರುಷೋತ್ತಮ್, ಲೋಕೇಶ್, ಸಿಪಿಐ ಅನಿಲ್, ಪಿಎಸ್‌ಐ ಮಂಜುನಾಥ್, ಕಂದಾಯ ಇಲಾಖೆಯ ಆರ್‌ಐ ಬಸವರಾಜು, ಡಾ.ಮಲ್ಲಿಕಾರ್ಜುನ್, ರೇಣುಕಾ ಮಲ್ಲಿಕಾರ್ಜುನ್, ಪ್ರೆಂಡ್ಸ್ ಗ್ರೂಪ್‌ನ ರವಿಕುಮಾರ್, ಮಲ್ಲಣ್ಣ, ರುದ್ರಪ್ರಸಾದ್, ಅರುಣ್, ನಾಗರಾಜು, ಪ್ರದೀಪ್, ರಮೇಶ್, ಕುದುರೆ ಸತೀಶ್, ಗೋಪಿನಾಥ್, ರವಿಕುಮಾರ್ ಸೇರಿದಂತೆ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next