Advertisement

Koratagere: ಗ್ರಾಮೀಣ ಬ್ಯಾಂಕಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

06:39 PM Feb 07, 2024 | Team Udayavani |

ಕೊರಟಗೆರೆ: ಕೃಷಿಗಾಗಿ ರೈತಾಪಿವರ್ಗ ಪಡೆದಿರುವ ಸಾಲವನ್ನು ದುಪ್ಪಟ್ಟು ಮಾಡಿ ಖಾಸಗಿ ಫೈನಾನ್ಸ್ ವ್ಯಕ್ತಿಗಳ ರೀತಿಯಲ್ಲಿ ವಸೂಲಿಗೆ ಮುಂದಾಗಿರುವ ಬ್ಯಾಂಕಿನ ವರ್ತನೆ ಖಂಡಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಕೊರಟಗೆರೆ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದ ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕಿನ ರಾಜ್ಯದ 1126 ಶಾಖೆಯ 76 ಸಾವಿರ ಕೋಟಿಯಲ್ಲಿ 50 ಸಾವಿರ ಕೋಟಿ ಉದ್ಯಮಿಗಳಿಗೆ ಮತ್ತು 26 ಸಾವಿರ ಕೋಟಿ ಮಾತ್ರ ರೈತರಿಗೆ ನೀಡಲಾಗಿದೆ. ಹೆಸರಿಗೆ ಮಾತ್ರ ರೈತರ ಬ್ಯಾಂಕು ಎಂದು ಹೇಳಿಕೊಂಡು ರೈತರ ವಿರೋಧಿಯಾಗಿ ಗ್ರಾಮೀಣ ಬ್ಯಾಂಕು ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಪಡೆದಿರುವ 6 ಲಕ್ಷ ಸಾಲಕ್ಕೆ18 ಲಕ್ಷ ಅಸಲು-ಬಡ್ಡಿ ಹಾಕಿರುವ ಕರ್ನಾಟಕ ಬ್ಯಾಂಕು ಪ್ರಶ್ನಿಸಿದರೇ ಕೋರ್ಟಿಗೆ ಹಾಕುತ್ತೇವೆ ಜಮೀನು ಮುಟ್ಟುಗೋಲು ಹಾಕಿಕೋಳ್ಳುತ್ತೇವೆ. ಟಿವಿ ಮಾಧ್ಯಮ ಅಥವಾ ಪತ್ರಿಕೆಗೆ ಮಾಹಿತಿ ನೀಡಿದರೇ ಪರಿಣಾಮ ಬೇರೆದೇ ಆಗಲಿದೆ ಎಂದು ಬ್ಯಾಂಕಿನ ಸಿಬಂದಿಗಳು ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ರೈತರ ನೇರವಾಗಿ ಆಗಮಿಸಬೇಕು ಎಂದು ರೈತರು ಒತ್ತಾಯ ಮಾಡಿದರು.

ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕು76 ಸಾವಿರ ಕೋಟಿಯಲ್ಲಿ 50 ಸಾವಿರ ಕೋಟಿ ಉದ್ಯಮಿಗಳಿಗೆ ಮತ್ತು ಕೇವಲ 26 ಸಾವಿರ ಕೋಟಿ ಮಾತ್ರ ರೈತರಿಗೆ ಸಾಲ ನೀಡಿದ್ದಾರೆ. ಹೆಸರಿಗೆ ಮಾತ್ರ ರೈತರ ಪರವಾಗಿ ಅಷ್ಠೆ ಹಣಕಾಸಿನ ವ್ಯವಹಾರ ಎಲ್ಲವೂ ಉದ್ಯಮಿಗಳ ಪರವಾಗಿಯೇ ಮಾಡ್ತಾರೇ. ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಮನ್ನಾ ಮಾಡಿದ ರೀತಿಯಲ್ಲಿಯೇ ಕರ್ನಾಟಕ ಗ್ರಾಮೀಣ ಬ್ಯಾಂಕು ಮಾಡಬೇಕಿದೆ ಇಲ್ಲವಾದ್ರೇ ರಾಜ್ಯದಲ್ಲಿ ಉಗ್ರ ಹೋರಾಟ ಮಾಡುತ್ತೀವಿ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ತುಮಕೂರು ಜಿಲ್ಲಾಧ್ಯಕ್ಷ ಶಿವಕುಮಾರ್, ರೈತ ಮುಖಂಡರಾದ ಬಸವನರೆಡ್ಡಿ, ದೀಲಿಪ್, ಶಿವಪ್ರಕಾಶ್, ಗಿರೀಶ್, ವಿರೇಶ್, ಬಸವನಗೌಡ, ಮಲ್ಲಿಕಾರ್ಜುನ, ವೀರಭದ್ರರೆಡ್ಡಿ, ಪಂಪನಗೌಡ ಸೇರಿದಂತೆ ರೈತರು ಇದ್ದರು.

10 ದಿನದಿಂದ ಸರ್ವರ್ ಸಮಸ್ಯೆ
ಕೊರಟಗೆರೆ ಪಟ್ಟಣ ಸೇರಿದಂತೆ ಗ್ರಾಮೀಣದ ೮ಕ್ಕೂ ಅಧಿಕ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಕಳೆದ 10 ದಿನದಿಂದ ಸರ್ವರ್ ಸಮಸ್ಯೆಯಿಂದ ವ್ಯವಹಾರ ಸ್ಥಗೀತವಾಗಿ ಚೆಕ್‌ಬುಕ್ ಪಾಸಾಗದೇ ನಗದಿಗೆ ಸಮಸ್ಯೆ ಎದುರಾಗಿದೆ. ಗ್ರಾಹಕರು ಬ್ಯಾಂಕಿನ ಸಿಬಂದಿಗಳ ಪ್ರಶ್ನಿಸಿದರೇ ತಾಂತ್ರಿಕ ಸಮಸ್ಯೆಯ ಕಾರಣ ಹೇಳ್ತಾರೇ ಮತ್ತೇ ಪ್ರಶ್ನಿಸಿದರೇ ನಾಳೆ ಬನ್ನಿ ಅಥವಾ ಹೊರಗಡೆ ಹೋಗಿ ಎಂಬ ಉಡಾಫೆಯ ಉತ್ತರವನ್ನು ನೀಡುತ್ತಾರೆ. ದಯವಿಟ್ಟು ಸರ್ವರ್ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಿ ಕೋಡಬೇಕಿದೆ ಎಂದು ನೂರಾರು ಗ್ರಾಹಕರು ಒತ್ತಾಯ ಮಾಡಿದರು.

Advertisement

ನಮ್ಮ ಶಾಖೆಯ ಮುಖ್ಯಸ್ಥರ ಸೂಚನೆಯಂತೆ ಓಟಿಎಸ್ ಪಾಲಿಸಿ ನೋಡಿಕೊಂಡೇ ನಾವು ರೈತರ ಸಾಲಮನ್ನಾ ಮಾಡ್ತೇವೆ. ರೈತರಿಗೆ ನಾವು ಯಾವುದೇ ರೀತಿಯ ಬೇದರಿಕೆ ಹಾಕಿಲ್ಲ. ಸರಕಾರದಿಂದ ರೈತರಿಗೆ ಬರುವ ಸಹಾಯಧನ ಮತ್ತು ಪರಿಹಾರ ಧನ ತಡೆಯದೇ ನೀಡುತ್ತೇವೆ. ಬ್ಯಾಂಕಿನ ಸರ್ವರ್ ತಾಂತ್ರಿಕ ಸಮಸ್ಯೆಯಿಂದ ತೊಂದರೇ ಇತ್ತು ಈಗ ಬಗೆಹರಿದಿದೆ.
ನಿಖಿಲ್-ವ್ಯವಸ್ಥಾಪಕ. ಕೆಜಿಬಿ ಬ್ಯಾಂಕ್

Advertisement

Udayavani is now on Telegram. Click here to join our channel and stay updated with the latest news.

Next