Advertisement

ಕೊರಟಗೆರೆ: ಬೂಸ್ಟರ್ ಡೋಸ್ ಗೆ ಚಾಲನೆ

05:19 PM Jan 11, 2022 | Team Udayavani |

ಕೊರಟಗೆರೆ: ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ದಾಟಿದವರಿಗೆ ಕೋವಿಡ್-19  ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ತಹಶಿಲ್ದಾರ್ ನಾಹಿದಾ ಜಮ್ ಜಮ್ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು ಕೊರೊನಾ ಮೂರನೇ ಅಲೆ ತಡೆಯಲು ಒಮಿಕ್ರಾನ್ ಹಿನ್ನಲೆಯಲ್ಲಿ ಸರ್ಕಾರ ಮಹತ್ವ ನಿರ್ದಾರ ಕೈಗೊಂಡಿದೆ. ತಾಲ್ಲೂಕಿನಲ್ಲಿ 60 ವರ್ಷ ದಾಟಿದ  ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಆರೋಗ್ಯ ಇಲಾಖೆ ಕೇಂದ್ರಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗುವುದು.ಈಗಾಗಲೇ ಲಸಿಕೆ ಪಡೆದಿರುವ ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಹೊಂದಿದ ಫಲಾನುಭವಿಗಳು ಕೋವಿಡ್ ಪೋರ್ಟಲ್ ನಲ್ಲಿ ನೊಂದಾಯಿಸಿದಂತೆ 2ನೇ ಡೋಸ್ ಪಡೆದ 9 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುತ್ತಾರೆ.

ತಾಲ್ಲೂಕು ವೈದ್ಯಾಧಿಕಾರಿಗಳಾದ ವಿಜಯ್ ಕುಮಾರ್ ಮಾತನಾಡಿ ಮುಂಚೂಣಿ ಕಾರ್ಯಕರ್ತರು ಹಾಗೂ60 ವರ್ಷ ದಾಟಿದ ಎರಡು ಡೋಸ್ ಪಡೆದ ಫಲಾನುಭವಿಗಳು, ಈ ಮುಂಚೆ ಮೊದಲನೆ ಹಾಗೂ ಎರಡನೇ ಡೋಸ್  ಕೋವಿಶೀಲ್ಡ್ ಪಡೆದಿದ್ದಲ್ಲಿ  ಈಗ ಬೂಸ್ಟರ್ ಡೋಸ್ ಕೂಡ ಕಡ್ಡಾಯವಾಗಿ ಕೋವಿಶೀಲ್ಡ್ ಪಡೆಯತಕ್ಕದ್ದು. ಇದೇ ಮಾದರಿ ಕೋವಾಕ್ಸಿನ್ ಲಸಿಕೆಗೂ ಅನ್ವಯಿಸುವಂತೆ ಫಲಾನುಭವಿಗಳು ಕೋವಾಕ್ಸಿನ್ ಲಸಿಕೆಯನ್ನೇ ಪಡೆಯಬೇಕು ಎಂದು ಆರೋಗ್ಯ ಕಾರ್ಯಕರ್ತರು ಇದರ ಬಗ್ಗೆ ಪರಿಶೀಲಿಸಿ ಲಸಿಕೆ ನೀಡುವಂತೆ ಸೂಚಿಸಿದರು.

ಕ್ಷೇತ್ರ ಆರೋಗ್ಯಾಧಿಕಾರಿ ಪದ್ಮಿನಿ ಮಾಹಿತಿ ನೀಡಿ ಕೋವಿಡ್19 ಮನ್ನೆಚ್ಚರಿಕೆ ಡೋಸ್ ಗಾಗಿ ಯಾವುದೇ ಹೊಸ ಫಲಾನುಭವಿಗಳನ್ನು ಕೋವಿಡ್ ಪೋರ್ಟಲ್ ನಲ್ಲಿ ನೋಂದಾಹಿಸುವಂತಿಲ್ಲ.ಜಲ್ಲಾ ಮಟ್ಟದಿಂದ ಕಳುಹಿಸಿದ ಪಟ್ಟಿ ಪ್ರಕಾರವೇ ಬೂಸ್ಟರ್ ಡೋಸ್ ನೀಡಲಾಗುವುದು.ಸದರಿ ವಿವರಗಳನ್ನು ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡಲಾಗುವುದು.ಎಲ್ಲಾ ಸರ್ಕಾರಿ ಆರೋಗ್ಯ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕಾಕರಣ ಮಾಡಲಾಗುತ್ತದೆ . ಎಲ್ಲಾ ಆರೋಗ್ಯ ಸಂಸ್ಥೆ ವೈದ್ಯಾಧಿಕಾರಿಗಳು  ತಮ್ಮ ಎಲ್ಲಾ ಫಲಾನುಭವಿಗಳು ಶೇ100 ರಷ್ಟು ಲಸಿಕೆನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಕಾರಣರಾಗುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ  ಡಾ.ಪುಷ್ಪಲತಾ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ದಂದಿ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next