Advertisement

ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ 1 ಸಾವಿರ ಕೋಟಿ ಅನುದಾನ

08:41 PM Nov 22, 2022 | Team Udayavani |

ಕೊರಟಗೆರೆ: ಮನೆಯಲ್ಲಿ ಕುಳಿತು ಪೋಸ್ಟ್ ಮಾಡಿದರೆ ಕೊರಟಗೆರೆಗೆ ಅನುದಾನ ಬರುವುದಿಲ್ಲ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ನಾನು 1 ಸಾವಿರ ಕೋಟಿ ಅನುದಾನ ತಂದಿದ್ದೇನೆ, 36 ಗ್ರಾ.ಪಂ.ಗಳ 450 ಗ್ರಾಮಗಳಿಗೂ ದಾಖಲೆ ಸಮೇತವಾಗಿ ಅಂಕಿ-ಅಂಶದ ಉತ್ತರ ನೀಡುತ್ತೇನೆ. ನಿಮ್ಮೆಲ್ಲರ ಆರ್ಶಿವಾದವೇ ನನಗೆ ಕೆಲಸ ಮಾಡಲು ಶ್ರೀರಕ್ಷೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದರು.

Advertisement

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾ.ಪಂ. ವ್ಯಾಪ್ತಿಯ ಪುಟ್ಟನರಸಮ್ಮನ ಪಾಳ್ಯ ಮತ್ತು ಮರಚರಹಳ್ಳಿ ಗ್ರಾಮದಲ್ಲಿ ಜಿ.ಪಂ. ಇಲಾಖೆಯಿಂದ ಏರ್ಪಡಿಸಲಾಗಿದ್ದ 1 ಕೋಟಿ 75 ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.

ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದಿಂದ ಕೊರಟಗೆರೆಗೆ 10 ಸಾವಿರ ಮನೆ ಕಟ್ಟಿಸುವ ಯೋಜನೆ ತಂದು ಕೊಟ್ಟಿದ್ದೇನೆ. 1 ವರ್ಷದಲ್ಲಿ ಕೊರಟಗೆರೆ ಕ್ಷೇತ್ರದ 109 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಮರಚರಹಳ್ಳಿ ಗ್ರಾಮದ ಅಭಿವೃದ್ದಿಗೆ ಈಗ 1 ಕೋಟಿ 75 ಲಕ್ಷ ಮತ್ತು 20 ಲಕ್ಷ ವೆಚ್ಚದ ಸಿಸಿರಸ್ತೆ-ಚರಂಡಿಗೆ ಅನುದಾನ ನೀಡಿದ್ದೇನೆ.  ನಿಮ್ಮೆಲ್ಲರ ಪ್ರತಿ ಮನೆಗೂ ಅಂಕಿ-ಅಂಶ ಮತ್ತು ಪೋಟೊ ಸಮೇತ ದಾಖಲೆಯ ಉತ್ತರ ನೀಡುತ್ತೇನೆ ಎಂದು ಭರವಸೆ ನೀಡಿದರು.

ತೀತಾ ಸೇತುವೆ ಕಾಮಗಾರಿಗೆ 10 ಕೋಟಿ ರೂಪುರೇಷೆ ಸಿದ್ದವಾಗಿದೆ. ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಅಧಿವೇಶನದ ವೇಳೆ ಒತ್ತಾಯ ಮಾಡುತ್ತೇನೆ. ಚುನಾವಣೆ ಬಂದಾಗ ಅಣಬೆಯಂತೆ ಎಲ್ಲರೂ ಬರುತ್ತಾರೆ.   ನಾನು ಚುನಾವಣೆ ಪ್ರಾರಂಭದ ವೇಳೆ ಬರುವ ನಾಯಕನಲ್ಲ. ಕೊರಟಗೆರೆ ಕ್ಷೇತ್ರದ ಜನರ ಮನವಿಗೆ ಪೂರಕವಾಗಿ ಕೆಲಸ ಮಾಡುವ ನಿಮ್ಮೆಲ್ಲರ ಜನಸೇವಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ, ತಹಶೀಲ್ದಾರ್ ನಾಹಿದಾ ಜಮ್ ಜಮ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥ ನಾರಾಯಣ್, ಯುವಾಧ್ಯಕ್ಷ ವಿನಯ ಕುಮಾರ್, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ ಸೇರಿದಂತೆ ಇತರರು ಇದ್ದರು.

Advertisement

ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ಸಿದ್ದರಬೆಟ್ಟ, ನೇಗಲಾಲ, ಮಾರಿಪಾಳ್ಯ ಮತ್ತು ಮರೇನಾಯಕನಹಳ್ಳಿ ಕೆರೆಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ಗಂಗಾಪೂಜೆ ನೇರವೇರಿಸಿದ ನಂತರ 600ಕ್ಕೂ ಅಧಿಕ ಮಹಿಳೆಯರಿಗೆ ಬಾಗೀನ ನೀಡಿದರು. ನಂತರ ಜೆಟ್ಟಿ ಅಗ್ರಹಾರ ಮತ್ತು ವಡ್ಡಗೆರೆಯ ದೀಪೋತ್ಸವ ಹಾಗೂ ಗೊಡ್ರಹಳ್ಳಿಯ ಹೂವಿನ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

68 ಕೋಟಿ ವೆಚ್ಚದ ಹೈಟೇಕ್ ಕ್ರಿಡಾಂಗಣ

ಕಲ್ಪತರು ನಾಡಿನ ಗ್ರಾಮೀಣ ಪ್ರದೇಶದ ಉನ್ನತ ವ್ಯಾಸಂಗಕ್ಕೆ ವಿಶ್ವವಿದ್ಯಾನಿಲಯ ಮಂಜೂರು ಮತ್ತು 68 ಕೋಟಿ ವೆಚ್ಚದಲ್ಲಿ ತುಮಕೂರು ಜಿಲ್ಲಾ ಹೈಟೆಕ್‌ ಕ್ರಿಡಾಂಗಣ ಲೋಕಾರ್ಪಣೆಗೆ ಸಿದ್ದವಾಗಿದೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು ಶಿಕ್ಷಣಕ್ರಾಂತಿ ಮಾಡಿದ್ದೇನೆ. ಗ್ರಾಮೀಣ ಪ್ರದೇಶದ ಬಡವರ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಮಾಡುವುದೇ ನನ್ನ ಪ್ರಮುಖ ಧ್ಯೇಯವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಕೊರಟಗೆರೆಯಲ್ಲಿ ತಿಳಿಸಿದರು.

ಕೋಡ್ಲಹಳ್ಳಿಯ ಶಿಕ್ಷಕನ ನೀರಾವರಿಯ ಕನಸು ನನಸು ಆಗುವ ಕಾಲ ಹತ್ತಿರ ಬಂದಿದೆ. ಎತ್ತಿನಹೊಳೆ ಯೋಜನೆಯಿಂದ ಕೊರಟಗೆರೆ ಕ್ಷೇತ್ರದ 109 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ. ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದ ರೈತರಿಗೆ ಎತ್ತಿನಹೊಳೆ ಯೋಜನೆಯು ವರದಾನವಾಗಿ ಅಂರ್ತಜಲ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಶಾಶ್ವತ ನೀರಾವರಿಯ ಕನಸನ್ನು ನನಸು ಮಾಡಿದ್ದೇನೆ ಎಂಬ ವಿಶ್ವಾಸವಿದೆ.  -ಡಾ.ಜಿ.ಪರಮೇಶ್ವರ ಮಾಜಿ ಡಿಸಿಎಂ. ಕೊರಟಗೆರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next