Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಕಾರ್ಯದರ್ಶಿ ತಿಮ್ಮಜ್ಜ ಮಾತನಾಡಿ 20ಕ್ಕೂ ಹೆಚ್ಚು ಜನರು ಪದಾಧಿಕಾರಿಗಳು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದಲ್ಲಿ ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಜೇಷ್ಠ ಹಾಗೂ ವಿಕಾಸ್ ಪುತ್ತೂರು ಅವರನ್ನು ಕ್ಷೇತ್ರದಲ್ಲಿ ಸಂಘಟನೆಗೆ ಕಳುಹಿಸಲಾಗಿದೆ. ಆದರೆ ಅವರು ಸಂಘಟನೆ ಮಾಡದೆ ಕಾರ್ಯಕರ್ತರ ಕಡೆಗಣನೆ ಮಾಡುತ್ತಿದ್ದು,ಪಕ್ಷದಲ್ಲಿ ಹಣ ಇರುವವರಿಗೆ ಮನ್ನಣೆ ನೀಡಲಾಗುತ್ತಿದೆ. ನಾವು ಪದಾಧಿಕಾರಿಗಳ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು ಪಕ್ಷದಲ್ಲಿ ಕಾರ್ಯಕರ್ತರಾಗಿ ಮುಂದುವರಿಯುತ್ತೇವೆ. ಮುಂದೆಯೂ ಇದೇ ರೀತಿ ಪಕ್ಷ ಕಾರ್ಯಕರ್ತರನ್ನು ಕಡೆಗಣಿಸಿದರೆ ರಾಜೀನಾಮೆ ಪರ್ವವೇ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರ ನಡೆಯಿಂದ ಬೇಸತ್ತು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು. ಕೊರಟಗೆರೆಯ ಕೆಲವು ತಮ್ಮ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಧುಗಿರಿ, ಪಾವಗಡದ ಇನ್ನೂ ಅನೇಕ ಜನ ಕಾರ್ಯಕರ್ತರು ಇಂದು ಮತ್ತು ನಾಳೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ನೊಂದ ಬಿಜೆಪಿ ಪದಾಧಿಕಾರಿಗಳು ತಿಳಿಸಿದರು.
Related Articles
Advertisement