ಕೊರಟಗೆರೆ: ಕಣ್ಣು ಆಪರೇಷನ್ ಮಾಡಿಸಿಕೊಂಡರೆ ಹತ್ತು ಸಾವಿರ ಉಚಿತ ಹಣ ನೀಡುತ್ತೇವೆ ಎಂದು ವೃದ್ದ ದಂಪತಿಯನ್ನು ನಂಬಿಸಿ 5 ಲಕ್ಷ ಬೆಲೆ ಬಾಳುವ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ದೊಡ್ಡಪೇಟೆಯ ಗಿರಿಜಮ್ಮ ರೇಣುಕಪ್ಪ ಎಂಬ ವೃದ್ಧ ದಂಪತಿ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿನ ಆಪರೇಶನ್ ಮಾಡಿಸಿದರೆ ಹತ್ತು ಸಾವಿರ ಉಚಿತ ಹಣವನ್ನು ಕೊಡುತ್ತಾರೆ ಎನ್ನುವ ನೆಪದಲ್ಲಿ ಮನೆಯೊಳಗೆ ಬಂದ ಆಸಾಮಿ ಅಜ್ಜಿ ಮತ್ತು ತಾತನನ್ನು ನಂಬಿಸಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಪೆನ್ಷನ್ ಕ್ಲಿಪ್ ಪಡೆದು ಅಧಿಕಾರಿಗಳಿಗೆ ಕಾಲ್ ಮಾಡುವಂತೆ ಮಾಡಿ ಅಜ್ಜಿ ತಾತನನ್ನು ಯಾಮಾರಿಸಿದ್ದಾನೆ.
ನಂತರ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಯ ಬಳಿ ಹೋದಾಗ ಆಪರೇಷನ್ ಮಾಡುತ್ತಾರೆ ಯಾರಾದರೂ ಒಡವೆಗಳನ್ನು ಕೇಳುತ್ತಾರೆ ಆದ್ದರಿಂದ ನನ್ನ ಬಳಿ ಕೊಡಿ ಎಂದು ನಂಬಿಸಿ ಒಡವೆಗಳನ್ನೆಲ್ಲ ತೆಗೆದುಕೊಂಡ ವ್ಯಕ್ತಿ ಅಜ್ಜಿ ತಿರುಗಿ ನೋಡುವಷ್ಟರಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ : ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್
Related Articles
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಐಪಿಸಿ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಿಎಸ್ಐ ನಾಗರಾಜು.ಎಎಸ್ ಐ ಗೋವಿಂದ ನಾಯ್ಕ್ ಭೇಟಿ ನೀಡಿ ಹೆಚ್ವಿನ ತನಿಖೆ ಕೈ ಗೊಂಡಿದ್ದಾರೆ.