ಕೊರಟಗೆರೆ : ಕುರಿ ಮೇಯಿಸಲು ಹೋದ ಮಹಿಳೆ ಅಕ್ಕಿರಾಂಪುರ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ಪುಟ್ಟನಂಜಪ್ಪನ ಹೆಂಡತಿ ಲಕ್ಷ್ಮಮ್ಮ ( 55 ವರ್ಷ) ಅಕ್ಕಿ ರಾಂಪುರ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ದುರ್ದೈವಿ ಯಾಗಿದ್ದು, ಈಕೆ ಮಧ್ಯಾಹ್ನ ಕುರಿಗೆ ನೀರು ಕುಡಿಸಲೂ ಅಥವಾ ಬಹಿರ್ದೆಸೆಗೆ ಹೋಗಿರುವ ಸಂದರ್ಭದಲ್ಲಿಯೋ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆ ಎನ್ನಲಾಗಿದೆ.
ಮೃತೆ ಲಕ್ಷ್ಮಮ್ಮ ಪ್ರತಿ ದಿನದಂತೆ ಸಂಜೆ ಮನೆಗೆ ವಾಪಸ್ ಬರದೇ ಇದ್ದ ಕಾರಣ ಪೋಷಕರು ಹುಡುಕಾಡಿದ್ದಾರೆ ಈ ವೇಳೆ ಕುರಿಗಳು ಮಾತ್ರ ಅಕ್ಕಿ ರಾಂಪುರ ಕೆರೆಯ ಏರಿ ಮೇಲೆ ಇದ್ದು ಲಕ್ಷ್ಮಮ್ಮ ನ ಚಪ್ಪಲಿಗಳು ಮಾತ್ರ ನೀರಿನ ದಡದಲ್ಲಿ ಬಿದ್ದಿತ್ತು, ಮನೆಯವರು ಜಮೀನಿನಲ್ಲಿ ಸೇರಿದಂತೆ ಹಲವೆಡೆ ಹುಡುಕಾಡಿ ರಾತ್ರಿಯಾದ ಕಾರಣ ನಾಳೆ ನೋಡುವ ಎಂದು ಮನೆಗೆ ವಾಪಸ್ಸಾಗಿದ್ದಾರೆ.
ಆದರೆ ಸೋಮವಾರ ಬೆಳಗ್ಗೆ ಚಪ್ಪಲಿ ಪತ್ತೆಯಾದ ಕೆರೆಯಲ್ಲೇ ಲಕ್ಷ್ಮಮ್ಮ ಹೆಣವಾಗಿ ಪತ್ತೆಯಾಗಿದ್ದಾಳೆ.
ಈ ಸಂಬಂಧ ಕೋಟಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
Related Articles
ಇದನ್ನೂ ಓದಿ : ನಗರದಲ್ಲಿ ನೆರೆ ಹಾವಳಿ ತಡೆಗೆ ಕ್ರಮ; 30 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ