Advertisement
ಕೊರಟಗೆರೆ ಪಟ್ಟಣದ ಹೊಸಬಡಾವಣೆಯ ಸದಾಶಿವಯ್ಯ ಎಂಬಾತನ ಫ್ಯಾಕ್ಟರಿಯಲ್ಲಿ ಬೆಂಕಿಯ ಶಾಖ ಮತ್ತು ವಿದ್ಯುತ್ ಸ್ಪರ್ಶದಿಂದ ಸೋಮವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ.
Related Articles
Advertisement
ಪ್ಯಾಕ್ಟರಿಗೆ ಕಾರ್ಮಿಕ ನೀರಿಕ್ಷಕ ಮತ್ತು ಮಧುಗಿರಿ ವಲಯ ಅಧಿಕಾರಿ ಭೇಟಿ ನೀಡಿ ನೊಟೀಸ್ ಜಾರಿ ಮಾಡಿದ್ದಾರೆ. ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್‌ಐ ಚೇತನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪರವಾನಗಿ ಮತ್ತು ಭದ್ರತೆಯೇ ಇಲ್ಲದೇ ಮನೆಯಲ್ಲಿಯೇ ಪ್ಯಾಕ್ಟರಿ ಮಾಡಿರುವ ಮಾಲೀಕನ ವಿರುದ್ದ ಕ್ರಮ ಕೈಗೊಂಡು ನೀಡಿರುವ ಲೇಸೆನ್ಸ್ ರದ್ದು ಮಾಡಬೇಕಿದೆ.
ಪರವಾನಗಿ ಅವಧಿಯೇ ಮುಕ್ತಾಯ: ಶ್ರೀಕಂಠೇಶ್ವರ ಎಂಟರ್‌ಪ್ರೈಸಸ್ ಮಾಲಕ ಸದಾಶಿವಯ್ಯ ಪ.ಪಂ.ನಿಂದ ಪಡೆದಿರುವ ಉದ್ದಿಮೆ ಪರವಾನಗಿ ಪತ್ರದ ಅವಧಿಯು 2024ರ ಮಾ.31ಕ್ಕೆ ಮುಕ್ತಾಯ. ಕಾರ್ಮಿಕ ಮತ್ತು ಆಹಾರ ಇಲಾಖೆಯಿಂದ ಪರವಾನಗಿ ಪಡೆದ ದಾಖಲೆಗಳೇ ಲಭ್ಯವಿಲ್ಲ. ಅಗ್ನಿಶಾಮಕ ಮತ್ತು ಬೆಸ್ಕಾಂ ಇಲಾಖೆಯ ಪರವಾನಗಿ ಜೊತೆ ಮುನ್ನೆಚ್ಚರಿಕೆ ಕ್ರಮದ ನಾಮಫಲಕಗಳೇ ಇಲ್ಲ. 3ನೇ ಸಲ ಅವಘಡ ನಡೆದರೂ ಮಾಲಕನ ನಿರ್ಲಕ್ಷವೇ ಮತ್ತೊಂದು ದುರ್ಘಟನೆಗೆ ಕಾರಣ.
ಕಾರ್ಮಿಕರ ಜೀವದ ಜೊತೆ ಚೆಲ್ಲಾಟ: ವಾಸಕ್ಕೆ ಕಟ್ಟಿಸಿದ ಮನೆಯಲ್ಲಿಯೇ ಅವೈಜ್ಞಾನಿಕವಾಗಿ ಪುಣ್ಯಕೋಟಿ ಪ್ಯಾಕ್ಟರಿ ಸ್ಥಾಪನೆ ಮಾಡಲಾಗಿದೆ. ಫ್ಯಾಕ್ಟರಿಯಲ್ಲಿ ಪ್ರತಿನಿತ್ಯ 8 ಜನ ಮಹಿಳೆಯರು ಮತ್ತು 4 ಜನ ಪುರುಷ ಕಾರ್ಮಿಕರು ಕೆಲಸ ಮಾಡ್ತಾರೇ. ಕಾರ್ಮಿಕರಿಗೆ ಸಂಬಳ, ಕೆಲಸದ ಅವಧಿ, ಇಎಸ್‌ಐ, ಪಿಎಫ್‌ನ ಅರಿವಿನ ಜೊತೆ ಭದ್ರತೆಯೇ ಯಕ್ಷಪ್ರಶ್ನೆ. ತಡರಾತ್ರಿ 11 ಗಂಟೆ ತನಕ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಮಾಲೀಕನ ದಬ್ಬಾಳಿಕೆಗೆ ಅಧಿಕಾರಿಗಳ ಕಡಿವಾಣವೇ ಇಲ್ಲದಂತಿದೆ.
ಕಾರ್ಮಿಕ, ಅಹಾರ ಮತ್ತು ಪಪಂ ಪರವಾನಗಿ ಪಡೆದು ಪುಣ್ಯಕೋಟಿ ಪ್ಯಾಕ್ಟರಿ ಪ್ರಾರಂಭ ಮಾಡಿದ್ದೇನೆ. ಪ್ರತಿನಿತ್ಯ 3 ರಿಂದ 4 ಜನ ದಿನಗೂಲಿ ಕೆಲಸಗಾರರು ಮುಂಜಾನೇ ಬಂದು ಸಂಜೆ ಹೋಗ್ತಾರೇ. ನನ್ನ ಮನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಓರ್ವನಿಗೆ ಗಾಯವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ನಾನೇ ಸೇರಿಸಿದ್ದೇನೆ. – ಸದಾಶಿವಯ್ಯ. ಪ್ಯಾಕ್ಟರಿ ಮಾಲೀಕ. ಕೊರಟಗೆರೆ
ಪುಣ್ಯಕೋಟಿ ಪ್ಯಾಕ್ಟರಿಗೆ ಉಪವಿಭಾಗ ಅಧಿಕಾರಿ ಜೊತೆ ಭೇಟಿ ನೀಡಿ ಕಾರ್ಮಿಕರಿಂದ ಮಾಹಿತಿ ಪಡೆಯಲಾಗಿದೆ. ಕಾರ್ಮಿಕರಿಗೆ ಭದ್ರತೆ ನೀಡುವುದು ಮಾಲೀಕನ ಕರ್ತವ್ಯ. ಪ್ರಕರಣ ತನಿಖೆಯ ಹಂತದಲ್ಲಿದ್ದು ಗಾಯಾಳು ಹೇಳಿಕೆ ಪಡೆಯಬೇಕಿದೆ. ಮಾಲೀಕನಿಗೆ ಕಾರ್ಮಿಕರ ಸಂಬಳ ಮತ್ತು ನಾಮಫಲಕದ ಮಾಹಿತಿಗೆ ನೊಟೀಸ್ ಜಾರಿ ಮಾಡಲಾಗಿದೆ. – ಶ್ರೀಕಾಂತ್. ಕಾರ್ಮಿಕ ನಿರೀಕ್ಷಕ, ಕೊರಟಗೆರೆ