Advertisement

ಕೊರಟಗೆರೆ; ಬಲಿಜ ಸಂಕಲ್ಪ ಹೋರಾಟ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ

06:57 PM Jan 24, 2023 | Team Udayavani |

ಕೊರಟಗೆರೆ; ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜ.27 ರಂದು ಶುಕ್ರವಾರ ಬೆಂಗಳೂರಿನ ಗಾಂಧಿನಗರದ ಪ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್ ಸಂಕಲ್ಪ ಪ್ರತಿಭಟನೆ ಕಾರ್ಯಕ್ರಮದಲ್ಲಿ ತಾಲೂಕಿನ ಬಲಿಜ ಸಮುದಾಯದ ಪ್ರತಿಯೊಬ್ಬರು ಭಾಗವಹಿಸುವಂತೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್,ಪದ್ಮನಾಭ್ ಮನವಿ ಮಾಡಿದ್ದಾರೆ.

Advertisement

ಅವರು ಕಾಮಧೇನು ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪುರ್ವಭಾವಿ ಸಭೆಯ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಮೊದಲಿನಿಂದ ಬಲಿಜ ಸಮುದಾಯ ಶೇ. 28% ರಷ್ಟು ಇದ್ದ ವೀಸಲಾತಿಯನ್ನು 1994 ರಲ್ಲಿ ಯಾವುದೇ ಸೂಚನೆ ಹಾಗೂ ಸಮಿತಿಯ ವರದಿಯ ಶಿಫಾರಸ್ಸು ಇಲ್ಲದೆ ತೆಗೆದು ರಾಜಕೀಯ ಮತ್ತು ಉದ್ಯೋಗಕ್ಕೆ ಕೇವಲ ಶೇ. 4% ರಷ್ಟು ಮೀಸಲಾತಿ ಇರುವ 3ಎ ಗೆ ಸೇರಿಸಿದ್ದು ಇದನ್ನು ಪ್ರತಿಭಟಿಸಿ ಕಳೆದ 28 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಮೀಸಲಾತಿ ನೀಡದೆ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ, ಸತತ ಹೋರಾಟದ ಫಲವಾಗಿ ಕೇವಲ ವಿದ್ಯಾಬ್ಯಾಸಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ 2ಎ ಮೀಸಲಾತಿ ಸೌಲಭ್ಯ ನೀಡಲಾಗಿದೆ ಅದರೆ ಪೂರ್ಣಪ್ರಮಾಣದ 2ಎ ಮೀಸಲಾತಿಗಾಗಿ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದ ಕಾರಣದಿಂದ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಮ್ ಮತ್ತು ಎಂ.ಆರ್.ಸೀತಾರಾಮ್ ನೇತೃತ್ವದಲ್ಲಿ ಜ.27 ರಂದು ಶುಕ್ರವಾರ ಬೆಂಗಳೂರಿನ ಗಾಂಧಿನಗರದ ಪ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್ ಸಂಕಲ್ಪ ಪ್ರತಿಭಟನೆ ನಡೆಯುತ್ತಿದ್ದು ಪ್ರತಿಯೊಬ್ಬ ಬಲಿಜ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.

ತಾಲೂಕು ಬಲಿಜ ಸಂಘದ ಪತ್ರಿಕಾ ವಕ್ತಾರ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಸುಮಾರು ವರ್ಷಗಳಿಂದ ಬಲಿಜ ಸಮುದಾ ಯದ ಮೀಸಲಾತಿಗಾಗಿ ಹೋರಾಟ ನಡೆಸಲಾಗುತ್ತಿದೆ, ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಗೆ ಸರ್ಕಾರ ಎ.ಬಿ.ಸಿ.ಡಿ.ಎಂಬ ಹೊಸ ಮೀಸಲಾತಿಯ ಸೌಲಭ್ಯವನ್ನು ಕಲ್ಪಿಸಲು ಹೊರಟ್ಟಿದ್ದು ಆದರೆ ಹಿಂದುಳಿದ ದ್ವನಿಯಿಲ್ಲದ ಬಲಿಜ ಜನಾಂಗದ ಕೂಗಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಬಲಿಜ ಸಮುದಾಯ ರಾಜ್ಯದ 54 ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಬಲಿಜ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಜ.27 ರಂದು ಸಂಕಲ್ಪ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಮೀಸಲಾತಿ ಕೂಡುವವರೆಗೂ ಉಗ್ರ ಹೋರಾಟದೊಂದಿಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಅವರು ಬಲಿಜ ಸಮುದಾಯ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕಾಗಿದೆ ಎಂದರು.

ಜಿಲ್ಲಾ ಸಂಘದ ಪ್ರತಿನಿಧಿ ಹಾಗೂ ಮುಖಂಡ ಕೆ.ಎಲ್.ಆನಂದ್ ಮಾತನಾಡಿ 2ಎ ಮೀಸಲಾತಿ ವಿಚಾರದಲ್ಲಿ ಸಮುದಾಯವು ಒಗ್ಗಟ್ಟು ಪ್ರದರ್ಶಿಸಬೇಕು ಎಂದ ಅವರು ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು, ತಪ್ಪಿದಲ್ಲಿ ಉಗ್ರಹೋರಾಟದ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು ಎಂದರೆ ಪ್ರತಿಯೊಬ್ಬರೂ ಜ.27 ರಂದು ನಡೆಯುವ ಸಂಕಲ್ಪ ಸಭೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು

ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್ ಮಾಹಿತಿ ನೀಡಿ 27 ರಂದು ಸಂಕಲ್ಪಯಾತ್ರೆಯಲ್ಲಿ ಬಾಗವಹಿಸುವ ಸಮುದಾಯದವರಿಗೆ ಕೊರಟಗೆರೆ ಯಿಂದ ವಾಹನದ ವ್ಯವಸ್ಥೆಮಾಡಲಾಗುತ್ತಿದ್ದು ಜ.25 ರಂದು ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಸಂಘದ ಖಜಾಂಜಿ ವೆಂಕಟೇಶ್, ಕಾರ್ಯದರ್ಶಿ ನವೀನ್‌ಕುಮಾರ್, ಸಹ ಕಾರ್ಯದರ್ಶಿ ಪ್ರೇಂಡ್ಸ್ ಗ್ರೂಪ್ ರವಿಕುಮಾರ್, ಯುವ ಬಲಿಜ ಸಂಘದ ಅಧ್ಯಕ್ಷ ಸಂಜಯ್, ಸಂಘದ ನಿರ್ದೇಶ ಕರುಗಳಾದ ಬೆನಕಾ ವೆಂಕಟೇಶ್, ಕೆ.ಬಿ.ಲೋಕೇಶ್, ದೇವರಾಜು, ಅಕ್ಕಿರಾಂಪುರ ಮಂಜುನಾಥ್, ಎಸ್.ಆರ್.ಟೈಲರ್ ಶ್ರೀನಿವಾಸ್, ವೆಂಕಟಾಚಲಿ, ದಯಾನಂದ್, ಡೈರಿ ಶ್ರೀನಿವಾಸ್, ಹನುಮೇನಹಳ್ಳಿ ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next