Advertisement

ಕೊರಟಗೆರೆ: ಬಫರ್ ಡ್ಯಾಂನಲ್ಲಿ ಜಮೀನು ಕಳೆದುಕೊಳ್ಳುವ ರೈತರ ಸಭೆ

07:22 PM Jul 31, 2022 | Team Udayavani |

ಕೊರಟಗೆರೆ: ಎತ್ತಿನಹೊಳೆ ನೀರಾವರಿ ಯೋಜನೆ ತುಮಕೂರು ಜಿಲ್ಲೆ ಸೇರಿದಂತೆ ಬರನಾಡಿನ ಏಳು ಜಿಲ್ಲೆಗಳಿಗೆ ಕುಡಿಯುವ ನೀರಿನ ಮಹತ್ವಾಕಾಂಶೆಯ ಯೋಜನೆಯಾಗಿದ್ದು ನಮ್ಮ ತಾಲೂಕಿನಲ್ಲಿ ಡ್ಯಾಂ ನಿರ್ಮಾಣಕ್ಕೆ ಪರ ವಿರೋಧಗಳು ಬರುತ್ತಿದ್ದರೂ ರೈತರ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಅವರು ತಾಲೂಕಿನ ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದ ತಿಮ್ಮಪ್ಪ ದೇವಾಲಯದ ಸಮುದಾಯ ಭವನದಲ್ಲಿ ಬಫರ್ ಡ್ಯಾಂ ನಲ್ಲಿ ಜಮೀನು ಕಳೆದುಕೊಳ್ಳುವ ರೈತರ ಸಭೆ ನಡೆಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರಟಗೆರೆ ತಾಲೂಕಿನ ರೈತರಿಗೆ ದೊಡ್ಡಬಳ್ಳಾಪುರ ತಾಲೂಕುನಲ್ಲಿ ಜಮೀನು ಕಳೆದು ಕೊಳ್ಳುವ ರೈತರಿಗೆ ನೀಡುವ ಪರಿಹಾರವನ್ನು ಸಮಾನ ರೀತಿಯಲ್ಲಿ ನೀಡುವ ನಿಟ್ಟಿನಲ್ಲಿ ಸರಕಾರ ಶ್ರಮ ಪಡದೆ ಬಫರ್ ಡ್ಯಾಂನ್ನು ಸಂಪೂರ್ಣವಾಗಿ ದೊಡ್ಡಬಳ್ಳಾಪುರ ತಾಲೂಕಿಗೆ ಸ್ಥಳಾಂತರಿಸಲು ತಿರ್ಮಾನಿಸಿದೆ. ತುಮಕೂರು ಜಿಲ್ಲೆಯ ಮಂತ್ರಿಗಳಾದ ಮಾಧುಸ್ವಾಮಿ ಮತ್ತು ನಾನು ಇದನ್ನು ಪ್ರಬಲವಾಗಿ ವಿರೋಧಿಸಿದ್ದೇವೆ ಸರ್ಕಾರ ಇನ್ನು ೧೫ ದಿನಗಳ ಕಾಲಾವಕಾಶ ನಮಗೆ ನೀಡಿದೆ ಇಂತಹ ಪರಿಸ್ಥಿತಿಯಲ್ಲಿ ರೈತರ ಅಭಿಪ್ರಾಯ ಪಡೆದುಕೊಳ್ಳಲು ಬಂದಿರುವುದಾಗಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸರ್ಕಾರದ ಕಾಲದಲ್ಲಿ 13500 ಕೋಟಿ ರೂಗಳಲ್ಲಿ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಲಾಯಿತು, ಅಂದು ಕಾಂಗ್ರೆಸ್ ಪಕ್ಷ ಪ್ರನಾಳಿಕೆಯಂತೆ ನಮ್ಮ ಸರ್ಕಾರ ೫ ವರ್ಷಗಳಲ್ಲಿ ೫೮ ಸಾವಿರ ಕೋಟಿ ರೂಗಳನ್ನು ನೀರಾವರಿ ಯೋಜನೆಗಳಿಗೆ ಮಂಜೂರು ಮಾಡಿತು, ನಂತರ ಸಂಮಿಶ್ರ ಸರ್ಕಾರದ ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ನಾನು ಉಪಮುಖ್ಯಮುಂತ್ರಿ ಕಾಲದಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಭೂಮಿ ಕಳೆದು ಕೊಳ್ಳುವ ರೈತರಿಗೆ ಸಮಾನ ಪರಿಹಾರಕ್ಕೆ ನನ್ನ ಅದ್ಯಕ್ಷತೆಯಲ್ಲಿ ತಿರ್ಮಾನಿಸಲಾಯಿತು, ಹೇಮಾವತಿ ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ನನ್ನ ಪಾತ್ರವೂ ಇದ್ದು ನನಗೆ ನೀರಾವರಿ ಯೋಜನೆಗೆ ಇಚ್ಚಾಶಕ್ತಿ ಇಲ್ಲ ಎಂದು ಅದರ ಗಂಧವೇ ತಿಳಿಯದ ಕೆಲವರು ಆರೋಪಿಸಿದ್ದಾರೆ ಅವರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದರು.

ವಿಭಿನ್ನ ಅಭಿಪ್ರಾಯ

ಸಭೆಯಲ್ಲಿ ಬಫರ್ ಡ್ಯಾಂನಲ್ಲಿ ಭೂಮಿ ಕಳೆದು ಕೊಳ್ಳುವ ಬಹುತೇಕ ರೈತರು ಡ್ಯಾಂ ನಿರ್ಮಾಣ ಬೇಡ ನಾವು ಜಮೀನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ ನೀವು ನೀಡುವ ಪರಿಹಾರದ ಹಣ ಕರಗಿ ಹೋಗುತ್ತದೆ ಮುಂದೆ ನಮ್ಮ ಗತಿ ಏನು ಎಂದರು, ಕೆಲವು ರೈತರು ನಮ್ಮ ಅರ್ಧ ಜಮೀನಿಗೆ ಪರಿಹಾರ ನೀಡಿ ಇನ್ನು ಅರ್ಧ ಜಮೀನಿಗೆ ಸಮನಾಗಿ ಇತರ ಕಡೆ ಸಾಗುವಳಿ ಭೂಮಿ ನೀಡಿ ಎಂದು ಬೇಡಿಕೆ ಇಟ್ಟರು, ಅಲ್ಲಿ ಉಪಸ್ಥಿತರಿದ್ದ ರೈತ ಸಂಘಟನೆ ಮುಖಂಡರು ತಾಲೂಕಿನ ರೈತರಿಗೆ ದೊಡ್ಡಬಳ್ಳಾಪುರ ಭೂಮಿ ಬೆಲೆಯಂತೆ ಸಮಾನ ಪರಿಹಾರ ನೀಡಿಸಿ, ನಮ್ಮ ಹಕ್ಕೋತ್ತಾಯವನ್ನು ಸರ್ಕಾರ ಮನ್ನಿಸಿ ಡ್ಯಾಂ ನಿರ್ಮಾಣ ಮಾಡುವಂತೆ ತಿಳಿಸಿದರು.

Advertisement

ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ನಿಮ್ಮ ಅಭಿಪ್ರಾಯ ಸಭೆಯಲ್ಲಿ ತಿಳಿಸುತ್ತೇನೆ, ಉತ್ತರ ಕರ್ನಾಟಕದಲ್ಲಿ ಅಲಮಟ್ಟಿ ಡ್ಯಾಂ ಎತ್ತರ ಗೊಳಿಸಿದ್ದಕ್ಕಾಗಿ ಬಾಗಲಕೋಟೆ ಜಿಲ್ಲೆಯೆ ಮುಳುಗಿಹೋಗಿ ನವಬಾಗಲಕೋಟೆ ನಿರ್ಮಾಣವಾಯಿತು, ಕೆಆರ್‌ಎಸ್ ಡ್ಯಾಂ ನಿರ್ಮಿಸಲು ಹಲವು ರೈತರ ತ್ಯಾಗವೂ ಇದೆ, ನೀವುಗಳು ಸಭೆೆಯಲ್ಲಿ ಪ್ರಸ್ತಾಪಿಸಿದ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗದ ನೀರಾವರಿ ಯೋಜನೆ ತರಲು ಮೊದಲು ಡ್ಯಾಂ ನಿರ್ಮಿಸಿಯೆ ನಡೆದದ್ದು, ಕೆಲವು ಮಹತ್ತರ ಯೋಜನೆ ಹಲವರಿಗೆ ಒಳ್ಳೆಯದಾದರೆ ಕೆಲವರಿಗೆ ತೊಂದರೆಯೂ ಆಗಿದೆ ಇದನ್ನು ಮನಗೊಂಡು ತಿರ್ಮಾನಿಸಿ ಇದರಲ್ಲಿ ರೈತರ ತಿರ್ಮಾನವೂ ಅತ್ಯಂತ ಪ್ರಮುಖವಾಗಿದೆ ಎಂದರು.

ಸಭೆಯಲ್ಲಿ ಹೋರಾಟ ಸಮಿತಿಯ ಚಿಕ್ಕತಿಮ್ಮಯ್ಯ, ಮುಖಂಡರಾದ ವೆಂಕಟೇಶ್, ಕೆಂಪಣ್ಣ, ನಟರಾಜು, ರಾಘವೇಂದ್ರ, ಚಂದ್ರಶೇಖರ, ಪುರುಷೋತ್ತಮ, ಮುದ್ದಪ್ಪ, ರೈತ ಸಂಘಟನೆಯ ಸಬ್ಬೀರ್‌ಪಾಷ, ಸ್ವಾಮಿ, ಭದ್ರಯ್ಯ, ಜಯರಾಮ್ಯ, ತಿರುಪಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವಥನಾರಾಯಣ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next