Advertisement

Koratagere: ಹಲಸಿನ ಮರದಿಂದ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

11:13 AM May 09, 2024 | Team Udayavani |

ಕೊರಟಗೆರೆ: ಹಲಸಿನಕಾಯಿ ಕೀಳಲು ಮರ ಹತ್ತಿದ ಕೂಲಿ ಕಾರ್ಮಿಕ ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಕೋಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹುಳಸೊಪ್ಪಿನಹಳ್ಳಿ ಗ್ರಾಮದ ವೆಂಕಟಶಾಮಯ್ಯ ಮಗನಾದ ಮಧುಸೂಧನ್ ಮೃತ ವ್ಯಕ್ತಿ. ತಾಲೂಕಿನ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಳಾಲ ಸಂದ್ರ ಗ್ರಾಮದ ತೋಟವೊಂದರ ಹಲಸಿನ ಮರದಿಂದ ಕಾಲು ಜಾರಿ ಬಿದ್ದಿದ್ದು ಮೃತಪಟ್ಟಿದ್ದಾರೆ.

ತೋಟದ ಮಾಲೀಕ ಬಸವರಾಜು ಕೂಲಿ ಕಾರ್ಮಿಕನಿಗೆ ಮರ ಹತ್ತಲ್ಲೂ ಬರದೆ ಇದ್ದರೂ ಮರ ಹತ್ತಿಸಿದ್ದನು. ಕಾಲು ಜಾರಿ ಬಿದ್ದ ಕ್ಷಣದಲ್ಲೇ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವುದನ್ನು ಕಂಡು ಮಾಲೀಕ ಯಾರಿಗೂ ವಿಷಯ ತಿಳಿಸದೇ ತನಗೆ ಸಂಬಂಧವೇ ಇಲ್ಲದ ರೀತಿ ತೋಟದ ಮಾಲೀಕ ವರ್ತಿಸಿದ್ದಾನೆ.

ಪ್ರತಿದಿನವೂ ಕೆಲಸಕ್ಕೆ ಬರುವುದಿಲ್ಲ ಎಂದರೂ ಕೂಡಾ ಬಲವಂತವಾಗಿ ಕರೆದುಕೊಂಡು ಹೋಗಿ ಮಧ್ಯಪಾನ ಮಾಡಿಸಿ ತನ್ನ ತೋಟದಲ್ಲಿ ಮಾಲೀಕ  ಕೆಲಸ ಮಾಡಿಸಿಕೊಳ್ಳುತ್ತಿದ್ದ. ಮರ ಹತ್ತಲು ಬರದೆ ಇದ್ದರೂ ಸಹ ಮರ ಹತ್ತಲೂ ತಿಳಿಸಿದ್ದು ಮರದಿಂದ ಕಾಲು ಜಾರಿ ಬಿದ್ದ ಕ್ಷಣವೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೆ.7.45ರ ಸಮಯ ಈ ಘಟನೆ ನಡೆದಿದ್ದು, ಮಧ್ಯಾಹ್ನ ಕಳೆದರೂ ಯಾರಿಗೂ ಮಾಹಿತಿ ನೀಡದೆ ಊರಿನ ಪ್ರಮುಖ ವ್ಯಕ್ತಿಗಳ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಊರಿನ ಜನರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಏನು ಗೊತ್ತಿಲ್ಲದ ಹಾಗೆ ಮಾಲೀಕ ಸ್ಥಳಕ್ಕೆ ಬಂದಿದ್ದನು.

Advertisement

ಕೂಲಿ ಕಾರ್ಮಿಕ ಮಧುಸೂಧನ್ ತನ್ನ ತಾಯಿಯ ಆರೋಗ್ಯ ನೋಡಿಕೊಂಡು ಜೀವನ ಸಾಗಿಸುತ್ತಿದ್ದ. ಆತನ ತಾಯಿ, ಮಗನಿಗೆ ಮದುವೆ ಮಾಡಿ ಸಂತೋಷವನ್ನು ಕಾಣಲು ಕನಸು ಕಟ್ಟಿಕೊಂಡಿದ್ದು ಈಗ ಮಗನ ಸಾವಿನಿಂದ ನೋವು ಅನುಭವಿಸುತ್ತಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಯಿಯಿಂದ ಮಗನನ್ನು ದೂರ ಮಾಡಿರುವುದಲ್ಲದೇ ಆತನ ಮೇಲೆ ಕಳ್ಳತನದ ಆರೋಪ ಕೂಡಾ ಹಾಕಿದ್ದಾನೆ. ಮೃತನಾದ ಬಳಿಕ ಎರಡು ಲಕ್ಷ ಹಣದ ಆಸೆ ತೋರಿಸಿ ತೋಟದ ಮಾಲೀಕನ ಜೊತೆ ಸೇರಿ ಊರಿನ ಮುಖಂಡರಾದ ಸೀನಪ್ಪ, ಜಯರಾಮಯ್ಯ, ಚಂದ್ರು, ಶ್ರೀನಿವಾಸ್, ಮಂಜಣ್ಣ ಎಂಬವರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದು ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರತಿದಿನ ಮಧುಸೂಧನ್ ತನ್ನ ತೋಟದ ಕೆಲಸಕ್ಕೆ ಬರುತ್ತಿದ್ದ. ನನಗೆ ಹೊರಗಡೆ ತಿಂಡಿ ತಿನ್ನುವ ಅಭ್ಯಾಸವಿಲ್ಲ. ತೋಟಕ್ಕೆ ನೀರು ಬಿಡುವಂತೆ ತಿಳಿಸಿ ಮನೆಗೆ ತೆರಳಿದೆ. ಕೆಲಸಗಾರನಿಗೂ ತಿಂಡಿ ತಂದಾಗ ಅಷ್ಟೋತ್ತಿಗಾಗಲೇ ಆತ ಮರದಡಿ ಬಿದ್ದದ್ದ. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದೇನೆ. ಸ್ವಲ್ಪ ಸಮಯದ ನಂತರವೇ ಈ ಘಟನೆ ಬಗ್ಗೆ ಗೊತ್ತಾಗಿರುವುದು. ನಾನು ಯಾವ ಹಲಸಿನಕಾಯಿ ಕೀಳುವುದಕ್ಕೂ ಹೇಳಿಲ್ಲಾ, ನನಗೆ ಮೊಟ್ಟ ಮೊದಲು ಆರೋಗ್ಯವೇ ಸರಿ ಇಲ್ಲಾ. – ಬಸವರಾಜು , ತೋಟದ ಮಾಲೀಕ

ನನ್ನ ಪತಿ ಸಹ ಮುಂಚೆಯೇ ನಿಧನರಾಗಿದ್ದರು. ಒಬ್ಬನೇ ಮಗನೆಂದು ಬಹಳ ಪ್ರೀತಿಯಿಂದ ಸಾಕಿದ್ದೇ. ನನ್ನ ಮಗ ಕೆಲಸಕ್ಕೆ ಬರುವುದಿಲ್ಲ ಎಂದರೂ ಈ ತೋಟದ ಮಾಲೀಕ ಬಸವರಾಜು ಬಿಡದೇ ಕರೆದುಕೊಂಡು ಹೋಗುತ್ತಿದ್ದ. ನನಗೆ ಕಣ್ಣಿನ ಸಮಸ್ಯೆ ಬೇರೆ ಇತ್ತು. ಇವತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದನು. ನನಗೆ ಇನ್ಯಾರು ದಿಕ್ಕು. – ರಂಗಮ್ಮ, ಕೂಲಿ ಕಾರ್ಮಿಕನ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next