ಉಡುಪಿ: ಕೊರಂಗ್ರಪಾಡಿಯ ಕೆಮ್ತೂರುವಿನ ಎರಡು ಮನೆಗಳಲ್ಲಿ ಲಕ್ಷಾಂತರ ರೂ. ಕಳ್ಳತನ ನಡೆದಿದೆ.
ಜ.13ರಂದು ಸ್ಥಳೀಯ ನಿವಾಸಿ ಅಮಿತಾ ಜೆ. ಸುವರ್ಣ ಅವರು ಮಧ್ಯಾಹ್ನ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ವಿದ್ಯುತ್ ಮೀಟರ್‌ನ ಬಾಕ್ಸ್ ಒಳಗಡೆ ಇಟ್ಟು ತೆರಳಿದ್ದರು.
ಕಾರ್ಯಕ್ರಮ ಮಗಿಸಿ ಚಿನ್ನವನ್ನು ಕಪಾಟಿನ ಒಳಗೆ ಇಡಲು ಹೋದಾಗ ಒಳಗಿದ್ದ 1,27,000ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವುದು ತಿಳಿದುಬಂತು. ಅಮಿತಾ ಅವರ ಮನೆಯ ಮೀಟರ್ ಬಾಕ್ಸ್‌ನಲ್ಲಿಯೇ ನೆರೆಮನೆಯ ಸಂಬಂಧಿ ಶ್ವೇತಾ ಎಸ್. ಸಾಲ್ಯಾನ್ ತನ್ನ ಮನೆಯ ಕೀ ಇಟ್ಟು ಹೊರಗೆ ಹೋಗಿದ್ದರು.
ಅಮಿತಾ ಅವರ ಮನೆಗೆ ನುಗ್ಗಿದ ಕಳ್ಳರು ಶ್ವೇತಾ ಅವರ ಮನೆಗೂ ನುಗ್ಗಿ 1,13,500 ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಳವು ಪ್ರಕರಣ ದಾಖಲಾಗಿದೆ.