Advertisement
ಕಾಯಕಯೋಗಿಗಳಾಗಿರುವ ಇವರದು ವಿಶಿಷ್ಟ ಮತ್ತು ಅನುಕರಣೀಯ ಸೇವೆ. ಸಮಾಜಮುಖೀ ವ್ಯಕ್ತಿತ್ವ. ಅನಾಥರ ಪಾಲನೆ ಮಾಡುತ್ತ ಅನಾಥಪ್ರಜ್ಞೆ ಕಾಡದಂತೆ ಅವರ ವ್ಯಕ್ತಿತ್ವ ರೂಪಿಸುತ್ತಿರುವುದು ಇವರ ಹೆಗ್ಗಳಿಕೆ.
Related Articles
Advertisement
ನಂತರ ಅನಾಥ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೊರಕೊಪ್ಪ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೆಲೆ ನಿಂತರು. ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನದ ಪಕ್ಕದಲ್ಲಿ ಸಣ್ಣದೊಂದು ಕುಟೀರ ನಿರ್ಮಿಸಿಕೊಂಡು ಅನಾಥ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಒದಗಿಸುವ ಕಾಯಕವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ 20ಕ್ಕೂ ಹೆಚ್ಚು ಅನಾಥ ಮಕ್ಕಳನ್ನಿಟ್ಟುಕೊಂಡು ಅವರಿಗೆ ಅಡುಗೆ ಮಾಡುವುದಲ್ಲದೇ ಪ್ರೀತಿ ಮಮತೆಯಿಂದ ನೋಡಿಕೊಳ್ಳುತ್ತಿದ್ದಾರೆ.
ಇದೇ ಅನಾಥ ಕುಟೀರದಲ್ಲಿದ್ದುಕೊಂಡು ಶಿಕ್ಷಣ ಪಡೆದ 10 ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇವರಲ್ಲಿ ನಾಲ್ವರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಇಬ್ಬರು ಎಂಜನೀಯರ್‌ಗಳಾಗಿದ್ದು, ಇಬ್ಬರು ಯೋಧರು ಹಾಗೂ ಇಬ್ಬರು ಖಾಸಗಿ ಉದ್ಯೋಗ ಪಡೆದುಕೊಂಡಿದ್ದಾರೆ.
ಶರಣರ ಜೋಳಿಗೆಯೇ ಆಧಾರಶರಣರು ಆಸುಪಾಸಿನ ಗ್ರಾಮಗಳಿಗೆ ಭೇಟಿ ನೀಡಿ ಭಿಕ್ಷೆ ಬೇಡುವ ಮೂಲಕ ಆಹಾರ ಧಾನ್ಯಗಳನ್ನು, ಬಟ್ಟೆ ಬರೆಗಳನ್ನು, ಹಣವನ್ನು ಸಂಗ್ರಹಿಸಿ, ಅನಾಥ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. 4 ವರ್ಷದಿಂದ 14 ವರ್ಷದ ಮಕ್ಕಳು ಅನಾಥಾಶ್ರಮದಲ್ಲಿದ್ದು, ಅವರಿಗೆ ಎಲ್ಲರ ರೀತಿಯ ಸೌಕರ್ಯ ಒದಗಿಸಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಸ್ನಾನಗೃಹ, ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ನಾನದ ಬಿಸಿನೀರಿಗಾಗಿ ಬಾಯ್ಲರ್, ಬೆಳಕಿಗಾಗಿ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಾರೆ. ಆಶ್ರಮದ ದಿನಚರಿ
ನಿತ್ಯ ಬೆಳಗ್ಗೆ 5.30ಕ್ಕೆ ಮಕ್ಕಳನ್ನು ಎಬ್ಬಿಸಿ 6 ಗಂಟೆಗೆ ಪ್ರಾರ್ಥನೆ, ಯೋಗ, ಧ್ಯಾನ ಮಾಡಿಸುತ್ತಾರೆ. 7 ಗಂಟೆಗೆ ಚಹಾ-ಬಿಸ್ಕೆಟ್, ಸ್ನಾನದ ನಂತರ ಉಪಹಾರ ಮುಗಿಸಿ ಶಾಲೆಗೆ ಹೋಗುವ ವೇಳೆವರೆಗೂ ಓದುವುದು. ನಂತರ ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. ಮಧ್ಯಾಹ್ನ ಶಾಲೆಯಲ್ಲೇ ಬಿಸಿಯೂಟ ಮಾಡುತ್ತಾರೆ. ನಂತರ ಸಂಜೆ ಆಶ್ರಮಕ್ಕೆ ಮರಳಿದ ಮೇಲೆ ಉಪಾಹಾರ (ಚುರಮರಿ, ಚೂಡಾ) ನೀಡುತ್ತಾರೆ. ಸಂಜೆ ವೇಳೆ ವಚನ, ಪ್ರವಚನ, ಧಾರ್ಮಿಕ ನೀತಿಪಾಠ ಮಾಡುತ್ತಾರೆ. ನಂತರ ಶಾಲೆಯ ಚಟುವಟಿಕೆಗಳ ಗೃಹಪಾಠ ಮಾಡುತ್ತಾರೆ. ರಾತ್ರಿ 8-30 ರಿಂದ 9 ರ ವರೆಗೂ ರಾತ್ರಿ ಇಂತಹ ಆಶ್ರಮಗಳಿಗೆ ಧನಸಹಾಯ ಮಾಡಿದರೆ ಅನಾಥ ಮಕ್ಕಳಿಗೆ ಆಸರೆ ಒದಗಿಸಿದಂತಾಗುತ್ತದೆ. ಮನುಷ್ಯ ಜನ್ಮ ಎತ್ತಿದ ಮೇಲೆ ಸಾರ್ಥಕ ಬದುಕು ಸಾಗಿಸಬೇಕೆಂಬ ಮಹಾತ್ಮರ ವಾಣಿಯಂತೆ ಲಿಂಗದೀಕ್ಷೆ, ಸನ್ಯಾಸದೀಕ್ಷೆ ಪಡೆದುಕೊಂಡು ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದೇನೆ. ರಾಮದುರ್ಗ ಶಾಸಕ ಅಶೋಕ ಪಟ್ಟಣ ಸೇರಿದಂತೆ ಅನೇಕ ದಾನಿಗಳು ವೈಯಕ್ತಿಕವಾಗಿ ಧನ ಸಹಾಯ ಮಾಡುತ್ತಿದ್ದಾರೆ ಎನ್ನುತ್ತಾರೆ ಶ್ರೀರೇವಣ ಸಿದ್ದೇಶ್ವರ ಸ್ವಾಮೀಜಿ, ಕೊರಕೊಪ್ಪ. ಈರನಗೌಡ ಪಾಟೀಲ