Advertisement

ಮಕ್ಕಳಿಲ್ಲವೆಂದು ಕೊರಗದಿರಿ: ಅನಾಥ ಮಗುವಿಗೆ ಅಮ್ಮನಾಗಿ

03:50 AM Mar 22, 2017 | |

ಮದುವೆ ಆಗಿ ಒಂದು ವರ್ಷದೊಳಗೆ ಮಡಿಲಲ್ಲಿ ಮಗು ಇರಬೇಕು. ಇಲ್ಲವೆಂದರೆ, ಈ ಸಮಾಜ ಅಂಥ ಹೆಂಗಸರನ್ನು ಬಂಜೆ ಎಂದು ಕರೆಯೋಕೆ ಶುರು ಮಾಡುತ್ತೆ. ಯಾವಾಗ ಒಂದು ವರ್ಷ ಆದರೂ ಮಕ್ಕಳು ಆಗಲ್ವೋ ಅಂದಿನಿಂದ ಆಸ್ಪತ್ರೆಗಳಿಗೆ ಅಲೆದಾಟ ಶುರುವಾಗುತ್ತೆ. ಆಸ್ಪತ್ರೆಗಳ ಅಲೆದಾಟ ಮುಗಿದ ಮೇಲೂ ಅಂದುಕೊಂಡಂತಹ ಫ‌ಲಿತಾಂಶ ಸಿಗದಿದ್ದರೆ, ಗಂಡನ ಮನೆಯವರಿಗೆ, ಅವಳ ಮೇಲಿನ ಕಾಳಜಿ ಕಡಿಮೆಯಾಗುತ್ತೆ, ಆಗ ಅತ್ತೆ ಮಾವಂದಿರು ತಮ್ಮ ಮಗನಿಗೆ ಬೇರೆ ಮದುವೆ ಮಾಡಲು ಯೋಚನೆ ಮಾಡೋಕೆ ಶುರು ಮಾಡುತ್ತಾರೆ. ಅದಕ್ಕೆ ಇವಳ ಸಮ್ಮತಿ ಅವರಿಗೆ ಬೇಕಾಗಿಲ್ಲ. ಯಾವಾಗ ಮಕ್ಕಳು ಆಗಲಿಲ್ಲವೋ, ಆಗ ಅವಳ ಮಾತಿಗೆ ಕಿಂಚಿತ್ತೂ ಬೆಲೆ ಇರುವುದಿಲ್ಲ. ಇಂತಹ ಬೆಳವಣಿಗೆಗಳು ಮಕ್ಕಳಿಲ್ಲದ ಎಷ್ಟೋ ಹೆಣ್ಣು ಮಕ್ಕಳಿಗೆ ಅನುಭವವಾಗಿರುತ್ತೆ. ಈಗ ಎಷ್ಟೋ ಚಿಕಿತ್ಸೆಗಳು ಬಂದಿವೆ. ಐ.ವಿ.ಎಫ‌… ನಿಂದ ಮಗು ಪಡೆಯಬಹುದಾಗಿದೆ, ಆದರೆ ಅದು ಶ್ರೀಮಂತರಿಗೆ. ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಅದು ಕೈಗೆಟುಕದ ದ್ರಾಕ್ಷಿ. ಇಂಥ ಸಂದರ್ಭದಲ್ಲಿ ಒಂದು ಮಾತು ಹೇಳಬೇಕು ಅನ್ನಿಸುತ್ತದೆ. ಮಕ್ಕಳಿಲ್ಲವೆಂದು ಕೊರಗುತ್ತಾ ಕೂರಬೇಡಿ, ಒಂದು ಅನಾಥ ಮಗುವನ್ನು ದತ್ತು ಪಡೆದು ಆ ಮಗುವಿಗೆ ತಾಯಿಯಾಗಿ ಅದರ ನಲಿವನ್ನು ನೋಡುತ್ತಾ ನಿಮ್ಮ ನೋವನ್ನು ಮರೆಯಿರಿ.  

Advertisement

* ಮಕ್ಕಳಿಲ್ಲವೆಂದು ಕೊರಗುತ್ತಾ ಕೂರಬೇಡಿ. ಸದಾ ಏನಾದರೊಂದು ಕೆಲಸದಲ್ಲಿ ಬ್ಯುಸಿಯಾಗಿರಿ.
* ಸೀರೆಗಳಿಗೆ ಕುಚ್ಚು ಹಾಕಿ ಕೊಡುವುದು, ಹೊಲಿಗೆ ಕಲಿಯುವುದು
* ಸಂಗೀತ, ಪೇಟಿಂಗÕ…, ರೇಖಾಚಿತ್ರ ತರಗತಿಗಳಿಗೆ ಸೇರಿಕೊಳ್ಳಿ
* ಕಥೆ, ಕವಿತೆ ಕಾದಂಬರಿ ಬರೆಯಿರಿ. ನಿಮ್ಮ ಜೀವನದ ಅನುಭವಗಳೇ ಒಂದು ಕಾದಂಬರಿ ಯಾಕಾಗಬಾರದು.
* ಒಂದು ಅನಾಥ ಮಗುವಿಗೆ ತಾಯಿಯಾದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.
* ಅಕ್ಕ ಪಕ್ಕದ ಮನೆಯ ಮಕ್ಕಳಿಗೆ ಟ್ಯೂಷನ… ಹೇಳಿಕೊಡಿ. ಮಕ್ಕಳ ಜೊತೆ ಬೆರೆತರೆ ಮನಸ್ಸಿಗೆ ಖುಷಿ ಆಗುತ್ತದೆ. 

ಚೈತ್ರಾ ವಿ. ಮಾಲವಿ 

Advertisement

Udayavani is now on Telegram. Click here to join our channel and stay updated with the latest news.

Next