Advertisement

ಹೊರಬಂತು ‘ಕೋರ’ ಟೀಸರ್‌; ಧ್ರುವ ಸರ್ಜಾ ಸಾಥ್

03:37 PM Nov 13, 2022 | Team Udayavani |

ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದ ಸುನಾಮಿ ಕಿಟ್ಟಿ ಈಗ ನಾಯಕ ನಟನಾಗಿ “ಕೋರ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

Advertisement

“ಒರಟ’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ “ಕೋರ’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದು, ಸದ್ಯ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದೆ. ಇದರ ನಡುವೆಯೇ ನಿಧಾನವಾಗಿ “ಕೋರ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಸಿನಿಮಾದ ಮೊದಲ ಟೀಸರ್‌ ಹೊರತಂದಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ “ಕೋರ’ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ನಟ ಧ್ರುವ ಸರ್ಜಾ, “ಸಿನಿಮಾದ ಟೀಸರ್‌ನಲ್ಲಿ ಪಾಸಿಟಿವ್‌ ವೈಬ್ಸ್ ಕಾಣುತ್ತಿದೆ. ಟೀಸರ್‌ನಲ್ಲಿ ಬ್ಯಾಗ್ರೌಂಡ್‌ ಸ್ಕೋರ್‌, ಸುನಾಮಿ ಕಿಟ್ಟಿ ಸ್ಟಂಟ್ಸ್‌ ಗಮನ ಸೆಳೆಯುತ್ತಿದೆ. ಹಂಡ್ರೆಡ್‌ ಪರ್ಸೆಂಟ್‌ ಈ ಸಿನಿಮಾ ರಿಲೀಸ್‌ ಆದ ಮೇಲೆ ಜನಗಳು ಸುನಾಮಿ ತರ ಥಿಯೇಟರ್‌ಗೆ ಬರುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

“ಟೀಸರ್‌ನಲ್ಲಿ ಯಾವ ರೀತಿ ಮೇಕಿಂಗ್‌, ಕ್ವಾಲಿಟಿ ಇದೆಯೋ ಅದೇ ರೀತಿ ಇಡೀ ಸಿನಿಮಾ ಇದೆ. ಈ ಸಿನಿಮಾದಲ್ಲಿ ಬುಡುಕಟ್ಟು ಜನಾಂಗದ ಕಥೆ ಹೇಳುತ್ತಿದ್ದೇವೆ. ಇಂದು ಬುಡಕಟ್ಟು ಜನರಿಂದಲೇ ಕಾಡು ಉಳಿದಿದೆ. ನಾವೆಲ್ಲರೂ ಆ ಜನಾಂಗದವರನ್ನು ಉಳಿಸುವ ಕೆಲಸ ಮಾಡಬೇಕಾಗಿದೆ. ಬುಡಕಟ್ಟು ಜನರ ಭಾವನೆ, ಆಚಾರ, ವಿಚಾರ, ನೋವು ಎಲ್ಲವೂ ಸಿನಿಮಾದಲ್ಲಿದೆ. ತುಂಬಾ ದೊಡ್ಡ ಮಟ್ಟದಲ್ಲಿ ಆ್ಯಕ್ಷನ್‌ ಪ್ಯಾಕೇಜ್‌ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದೆ’ ಎನ್ನುವುದು ನಿರ್ದೇಶಕ ಶ್ರೀ ಮಾತು.

ನಿರ್ಮಾಪಕರಾದ ಪಿ. ಮೂರ್ತಿ ಮಾತನಾಡಿ, “ಈ ಸಿನಿಮಾದ ನಿರ್ಮಾಣದ ಜೊತೆಗೆ ಮೊದಲ ಬಾರಿಗೆ ಖಳನಟನಾಗಿ ಅಭಿನಯಿಸಿದ್ದೇನೆ. ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಸಾಕಷ್ಟು ಪರಿಶ್ರಮ ಹಾಕಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹೊಸಬರ ತಂಡಕ್ಕೆ ಎಲ್ಲರ ಸಹಕಾರವಿರಲಿ’ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next