ಕೊಪ್ಪಳ: ಮೃತ ಪಿಎಸ್ಐ ಪರಶುರಾಮ ಅವರ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂ. ವಿಶೇಷ ನೆರವು ನೀಡಲಾಗುವುದು ಎಂದು ಸೋಮನಾಳದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪರಶುರಾಮ ಒಬ್ಬ ಪ್ರಾಮಾಣಿಕ ಅಧಿಕಾರಿ. ಅವರ ಕುಟುಂಬಕ್ಕೆ ವಿಶೇಷ ಪರಿಹಾರ ನೀಡಲು ಸರ್ಕಾರದಿಂದ ನಿರ್ಧಾರ ಮಾಡಲಾಗಿದೆ ಎಂದರು.
ಈಗಾಗಲೇ ಮೃತ ದೇಹದ ಪೋಸ್ಟ್ ಮಾರ್ಟಮ್ ಮಾಡಿ ವರದಿ ನಿರೀಕ್ಷಿಸಲಾಗಿದೆ ಮಾತ್ರವಲ್ಲದೇ ಮೃತದೇಹದ ಸ್ಯಾಂಪಲ್ ಸಂಗ್ರಹ ಮಾಡಿ ಅದರ ವರದಿಗೆ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.
ಮುಂದುವೆರೆದು ಮಾತನಾಡಿ, ಸರ್ಕಾರದ ಪರವಾಗಿ ನಾನು ವಿಷಾದ ವ್ಯಕ್ತಪಡಿಸುವೆ. ಇದು ಆಗಬಾರದಿತ್ತು, ನನಗೆ ನೋವಾಗಿದೆ. ನನ್ನ ಇಲಾಖೆಯಲ್ಲಿ ಹೀಗಾಗಿದ್ದು ನೋವು ಆಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುವೆ ಎಂದರು.
ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿರುವೆ. ಪರಶುರಾಮ ಅವರನ್ನು ವಾಪಾಸ್ ತರಲು ಆಗಲ್ಲ. ಕುಟುಂಬಕ್ಕೆ ಸಾಂತ್ವಾನ ಹೇಳುವುದು ನಮ್ಮ ಕರ್ತವ್ಯ. ಪರಶುರಾಮ ಅವರ ಕುಟುಂಬದ ಜವಾಬ್ದಾರಿ ಹೊತ್ತಿರುವ ಮಾಹಿತಿ ಅವರ ಕುಟುಂಬ ಹೇಳಿದೆ. ಪರಶುರಾಮ ಅಗಲಿಕೆ ಇಡೀ ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಹೇಳಿದರು.
ಆ ಕುಟುಂಬ ಬೀದಿಗೆ ತಳ್ಳುವಂತೆ ಮಾಡಿದೆ. ದಲಿತ ಸಮುದಾಯದ ಹುಡುಗ ಕಠಿಣ ಪರಿಶ್ರಮ ಪಟ್ಟು ಸರ್ಕಾರದ ನೌಕರಿ ಪಡೆದಿದ್ದ. ಆತನ ಸಾವು ಆ ಕುಟುಂಬ ಹಾಗೂ ಸರ್ಕಾರಕ್ಕೂ ತುಂಬಾ ನಷ್ಟವಾಗಿದೆ. ಸರ್ಕಾರ ಮೃತ ಪಿಎಸ್ಐ ಪತ್ನಿಗೆ ಇಲಾಖೆಯಲ್ಲಿ ತತಕ್ಷಣ ನೌಕರಿ ಕೊಡುವೆವು ಎಂದು ಭರವಸೆ ನೀಡಿದ್ದಾರೆ.
ಮೃತ ಪಿಎಸ್ಐ ಪತ್ನಿ ಜೆಸ್ಕಾಂ ಅಥವಾ ರಾಯಚೂರು ಕೃಷಿ ವಿವಿ ಹುದ್ದೆ ಕೇಳಿದ್ದಾರೆ. ಸಿಎಂ ಜೊತೆ ಮಾತನಾಡುವೆ, ಅವರಿಗೆ ಹುದ್ದೆ ಕೊಡಲು ಸಾಧ್ಯವಿದ್ದರೆ ಆ ಕೇಡರ್ ನಲ್ಲಿ ಕೊಡುವೆ. ನಮ್ಮ ಇಲಾಖೆಯಲ್ಲಿ ಕೇಡರ್ ಆಧಾರದ ಮೇಲೆ ಅವರಿಗೆ ನೌಕರಿ ಕೊಡುವೆವು ಎಂದು ಹೇಳಿದರು.
ಸರ್ಕಾರದಿಂದ ಆ ಕುಟುಂಬಕ್ಕೆ ಸಹಾಯ ಹಸ್ತ ಕೊಡಲಾಗುವುದು. ಸರ್ಕಾರ 50 ಲಕ್ಷ ರೂ. ವಿಶೇಷ ಹಣ ಕೊಡುವೆವು. ನಾನು ಬೆಂಗಳೂರಿಗೆ ಹೋದ ತಕ್ಷಣ ಈ ಕೆಲಸ ಮಾಡಲಿದ್ದೇವೆ. ಒಬ್ಬ ಯುವಕ ನೌಕರಿ ಸೇರಿ ಸಣ್ಣ ವಯಸ್ಸಿನಲ್ಲಿ ಸಾವು ಸಂಭವಿಸಿದ್ದು ನೋವು ತರಿಸಿದೆ ಎಂದರು.
ಮುಂದುವೆರೆದು ಮಾತನಾಡಿ, ಆತ ಇದ್ದಿದ್ದರೆ ಮುಂದೆ ಎಸ್ಪಿ ಆಗುತ್ತಿದ್ದ. ಮೃತ ಪಿಎಸ್ಐ ಕುಟುಂಬ ಯಾದಗಿರಿ ಶಾಸಕ ಹಾಗೂ ಪುತ್ರನ ಬಗ್ಗೆ ಆಪಾದನೆ ಮಾಡಿದ್ದಾರೆ. ನಾವು ತನಿಖೆಗೆ ಆದೇಶ ಮಾಡಿದ್ದೇವೆ. ತನಿಖೆ ವೇಳೆ ಯಾರು ಅಪರಾಧಿಗಳು ಎನ್ನುವುದು ಗೊತ್ತಾಗಲಿದೆ. ತನಿಖಾ ವರದಿಯಲ್ಲಿ ಗೊತ್ತಾದರೆ ಎಲ್ಲರಿಗೂ ಶಿಕ್ಷೆ ಆಗುತ್ತದೆ ಎಂದು ಹೇಳಿದರು.
ನಮ್ಮ ಹಂತದಲ್ಲಿ ನಾವು ಹಣ ಪಡೆದು ವರ್ಗಾವಣೆ ಮಾಡಲ್ಲ. ಪ್ರತಿ ವರ್ಷ ವರ್ಗಾವಣೆ ಆಗುತ್ತದೆ. ನಾವು ಎರಡು ವರ್ಷ ಯಾರೂ ವರ್ಗಾವಣೆ ಮಾಡಲ್ಲ. ವರ್ಗಾವಣೆ ಅವಧಿ ಪೂರ್ವ ಆದರೆ ಕೆಎಟಿ ಅರ್ಜಿ ಸಲ್ಲಿಸಬಹುದು. ವಿರೋಧ ಪಕ್ಷದವರು ಹೇಳಿದ್ದನ್ನು ನಾನು ಕೇಳಲು ತಯಾರಿಲ್ಲ ಎಂದರು.
ಸಿಬಿಐಗೆ ಕೊಡುವ ಅರ್ಹತೆ ಈ ಪ್ರಕರಣದಲ್ಲಿ ಇಲ್ಲ. ನಾವು ಆ ಕುಟುಂಬಕ್ಕೆ ನ್ಯಾಯ ಕೊಡುತ್ತೇವೆ. ಈ ಪಿಎಸ್ಐ ವರ್ಗಾವಣೆ ಐಜಿ ಹಂತದಲ್ಲಿ ಆಗಿರುತ್ತದೆ. ಸಿಓಡಿ ತನಿಖೆಯಲ್ಲಿ ಅವಧಿ ಪೂರ್ವ ಯಾಕೆ ಗೊತ್ತಾಗಲಿದೆ. ಸಿಓಡಿ ತನಿಖೆಗೆ ವಿಪಕ್ಷದವರ ಆಕ್ಷೇಪ ವಿಚಾರವಾಗಿ ಹಿಂದೆ ಅವರೇ ಗೃಹಮಂತ್ರಿ ಇದ್ದಾಗ ಸಿಓಡಿ ಏನಾಗಿದೆ ಎಂದು ಪ್ರಶ್ನಿಸಿದರು.
ವರ್ಗಾವಣೆ ಎನ್ನುವುದು ಒಂದು ದಂಧೆ ಆಗಿದೆ ಎಂದ ಬಸವರಾಜ ರಾಯರಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ವಯಕ್ತಿಕ ಹೇಳಿಕೆ, ಅವರು ಯಾರು ವರ್ಗಾವಣೆ ಮಾಡಿದ್ದಾರೆ ಅವರ ಹೆಸರು ಹೇಳಲಿ. ಹಿಂದೆ ಬಿಜೆಪಿ ನಾಯಕರು ಚೋರ್ ಬಚಾವೋ ಸಂಸ್ಥೆ ಎಂದು ಅವರೇ ಸದನದಲ್ಲಿ ಹೇಳಿದ್ದಾರೆ. ಅವರು ಹೇಳಿದ್ದು ಆನ್ ರೆಕಾರ್ಡ್ ನಲ್ಲಿ ಇದೆ ಎಂದ ಅವರು, ಅಶೋಕ್, ಬೊಮ್ಮಾಯಿ ಸರ್ಕಾರದಲ್ಲಿದ್ದಾಗ ಸಿಓಡಿ ಏನಾಗಿದ್ದವು.. ಈಗ ಸಿಓಡಿ ಕೆಟ್ಟೋಗಿವೆಯಾ ? ಛಲವಾದಿ ನಾರಾಯಣಸ್ವಾಮಿ ಈಗಷ್ಟೇ ವಿಪಕ್ಷ ನಾಯಕರಾಗಿದ್ದಾರೆ ಅವರು ಎಲ್ಲವನ್ನು ತಿಳಿದುಕೊಳ್ಳಲಿ ಎಂದು ಹೇಳಿದರು.
ರಾಜ್ಯಪಾಲರು ಸಿಎಂಗೆ ನೋಟಿಸ್ ಕೊಟ್ಟ ವಿಚಾರವಾಗಿ ಮಾತನಾಡಿ, ನಾವು ಸಂಪುಟದಲ್ಲಿ ನಿರ್ಧಾರ ಮಾಡಿದ್ದೇವೆ. ನೋಟಿಸ್ ಕೊಟ್ಟಿದ್ದು ತಪ್ಪು.. ನೋಟಿಸ್ ವಾಪಾಸ್ ಪಡೆಯರಿ ಎಂದಿದ್ದೇವೆ ಎಂದು ಹೇಳಿದರು.
ಅವರು ಸರ್ಕಾರಕ್ಕೆ ಸಲಹೆ ನೀಡಲು ಕಾನೂನಿನಲ್ಲಿ ಅವಕಾಶ ಇದೆ. ನಮ್ಮ ನಿರ್ಣಯ ರಾಜ್ಯಪಾಲರಿಗೆ ಕಳಿಸಿದ್ದೇವೆ. ನಾವು ಕೊಟ್ಟ ಸಲಹೆ ಅವರಿಗೆ ತಲುಪಿದೆ. ಈ ವಿಚಾರಕ್ಕೆ ಸಿಎಂ ರಾಜಿನಾಮೆ ಅಗತ್ಯ ಇಲ್ಲ. ಒಂದು ವೇಳೆ ರಾಜ್ಯಪಾಲರು ಅನುಮತಿ ಕೊಟ್ಟರೆ ಮುಂದೆ ನಾವು ಹೋರಾಟ ಮಾಡುವೆವು ಎಂದರು.