Advertisement

ಸಪ್ತಪದಿಗೆ ಜಿಲ್ಲಾಡಳಿತದಿಂದ ಬೇಕು ಮುದ್ರೆ

03:35 PM Oct 14, 2021 | Team Udayavani |

ಕೊಪ್ಪಳ: ರಾಜ್ಯ ಸರ್ಕಾರ ಬಡವರಿಗೆ ಮದುವೆಯಆರ್ಥಿಕ ಹೊರೆಯನ್ನು ತಪ್ಪಿಸಲು ಕಳೆದ 2019ರಲ್ಲಿಸಪ್ತಪದಿ ಯೋಜನೆ ಜಾರಿಗೊಳಿಸಿದೆ. ಆದರೆಕೊರೊನಾ ಆರ್ಭಟದಿಂದಾಗಿ ಶುಭಗಳಿಗೆ ಕೂಡಿ ಬಂದಿಲ್ಲ.

Advertisement

ಈಗ ಮತ್ತೆ ಹುಲಿಗೆಮ್ಮ ದೇವಸ್ಥಾನ ಆಡಳಿತಮಂಡಳಿ ಜಿಲ್ಲಾಡಳಿತಕ್ಕೆ ಸಪ್ತಪದಿ ಶುಭ ಕಾರ್ಯಕೈಗೊಳ್ಳಲು ಪತ್ರ ವ್ಯವಹಾರ ನಡೆಸಿದ್ದು,ಜಿಲ್ಲಾಧಿಕಾರಿ ಅವರು ಅದಕ್ಕೆ ಮುದ್ರೆ ಒತ್ತಬೇಕಿದೆ.ಪ್ರಸ್ತುತ ದಿನದಲ್ಲಿ ಪ್ರತಿಯೊಂದು ವಸ್ತುಗಳಬೆಲೆ ಏರಿಕೆಯಾಗಿವೆ. ಬಡ ಹಾಗೂ ಮಧ್ಯಮವರ್ಗದ ಜನರು ಮನೆಯಲ್ಲಿನ ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಲು ನೂರೆಂಟು ಕಷ್ಟಪಡುವಂತಹ ಸಂದರ್ಭಗಳು ಎಲ್ಲರಿಗೂ ಕಾಣುತ್ತದೆ.

ಮನೆಯ ಮಕ್ಕಳಿಗೆ ಮದುವೆ ಮಾಡಬೇಕೆಂದರೆಮನೆ ಯಜಮಾನನು ಸಾಲಸೂಲ ಮಾಡಿಮದುವೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಲಕ್ಷಾಂತರ ಸಾಲದ ಹೊರೆಯುಯಜಮಾನನ ಮೇಲೆ ಬಿದ್ದು ಆತ್ಮಹತ್ಯೆಮಾಡಿಕೊಂಡಂತಹ ಉದಾಹರಣೆ ಎಲ್ಲರಕಣ್ಮುಂದೆ ಇವೆ.

ಇಂತಹ ಪರಿಸ್ಥಿತಿ ಅವಲೋಕಿಸಿರಾಜ್ಯ ಸರ್ಕಾರವು ಬಡ ಜನರ ಆರ್ಥಿಕಹೊರೆ ತಪ್ಪಿಸಲು ಸರಳವಾಗಿ ಸರ್ಕಾರದಸಹಾಯಧನದೊಂದಿಗೆ ಮದುವೆ ಮಾಡಿಕೊಳ್ಳಲು2019ರಲ್ಲಿ ಯಡಿಯೂರಪ್ಪ ಅವರ ಸರ್ಕಾರದಅವಧಿ ಯಲ್ಲಿ ಸಪ್ತಪದಿ ಯೋಜನೆ ಜಾರಿಗೊಳಿಸಿದೆ.

ಈ ಯೋಜನೆಯಡಿ ಜಿಲ್ಲೆಯಲ್ಲಿ ತಾಲೂಕಿನಹುಲಿಗೆಮ್ಮದೇವಿ ದೇವಸ್ಥಾನ ಹಾಗೂ ಕನಕಾಚಲಪತಿದೇವಸ್ಥಾನಗಳು ಆಯ್ಕೆಯಾಗಿವೆ.ಕೋವಿಡ್‌ನಿಂದಾಗಿ ಸಪ್ತಪದಿ ಮುಂದಕ್ಕೆ:ಕೋವಿಡ್‌ ಆರಂಭದ ಪೂರ್ವದಲ್ಲಿ ಹುಲಿಗೆಮ್ಮದೇವಸ್ಥಾನದಿಂದ ಸಪ್ತಪದಿಯಡಿ ವಧು-ವರರಿಗೆಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ಮಾಡಿತ್ತು.

Advertisement

ಇದಕ್ಕೆ ಜಿಲ್ಲಾಡಳಿತವೂಸಮ್ಮತಿಸಿತ್ತು. ಆರಂಭದಲ್ಲಿ 30 ಜೋಡಿಗಳಿಗೆಮದುವೆ ಮಾಡಿಕೊಳ್ಳುವ ಯೋಜನೆ ಮಾಡಿತ್ತು.ಈ ಪೈಕಿ ಅರ್ಜಿ ಆಹ್ವಾನಿಸಿತ್ತು. 7 ಜೋಡಿಗಳನ್ನು ಆಯ್ಕೆ ಮಾಡಿತ್ತು. ಆದರೆ ಕೊರೊನಾಹಿನ್ನೆಲೆಯಲ್ಲಿ ಜನದಟ್ಟಣೆ ಸೇರುವುದನ್ನುತಡೆಯಲು ಎಲ್ಲ ದೇವಸ್ಥಾನ ಬಂದ್‌ಮಾಡಿದ್ದಲ್ಲದೇ ಮದುವೆ ಮುಂದೂಡಿದ್ದರಿಂದ ಸಪ್ತಪದಿಯ ಹೆಜ್ಜೆ ಹಾಕಬೇಕಿದ್ದ ವಧು-ವರರುಜಿಲ್ಲಾಡಳಿತದ ಆಸೆಯನ್ನೇ ಕೈ ಬಿಟ್ಟು ತಮ್ಮಷ್ಟಕ್ಕೆತಾವು ಮನೆಯಲ್ಲೇ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.

ಮತ್ತೆ ಅರ್ಜಿ ಆಹ್ವಾನ: ಕೋವಿಡ್‌ ಪೂರ್ವದಲ್ಲಿಆಯ್ಕೆ ಮಾಡಿದ್ದ ಜೋಡಿಗಳೆಲ್ಲವೂ ಈಗಾಗಲೇ ಮದುವೆಯಾಗಿವೆ. ಹಾಗಾಗಿ ಹಳೇ ಜೋಡಿಗಳ ಪಟ್ಟಿ ಕೈ ಬಿಟ್ಟು ಹೊಸ ಜೋಡಿಗಳಪಟ್ಟಿಯನ್ನು ಹುಲಿಗೆಮ್ಮ ದೇವಿ ದೇವಸ್ಥಾನ ಆಯ್ಕೆ ಮಾಡಬೇಕಿದೆ. ಇದಕ್ಕೆ ಜಿಲ್ಲಾಡಳಿತ ಅಂಕಿತಮುದ್ರೆ ಹಾಕಬೇಕಿದೆ.

ಆ ಬಳಿಕವಷ್ಟೇವಧು-ವರರಿಗಾಗಿ ಅರ್ಜಿ ಆಹ್ವಾನಿಸಿ ಅವರಿಂದದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.ಒಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಸಪ್ತಪದಿಗೆಶುಭಗಳಿಗೆಯೇ ಕೂಡಿ ಬರುತ್ತಿಲ್ಲ.ಕೋವಿಡ್‌-19ನಿಂದಾಗಿ ಹೀಗಾಗಿದೆ. ಸದ್ಯಜಿಲ್ಲೆಯಲ್ಲಿ ಕೋವಿಡ್‌ ಬಹುಪಾಲು ಇಳಿಮುಖದತ್ತಸಾಗಿದೆ. ಜಿಲ್ಲಾಡಳಿತವು ಸಪ್ತಪದಿಗೆ ಸಮ್ಮತಿ ನೀಡಿದರೆ ಮಾತ್ರ ಮದುವೆ ಕಾರ್ಯ ಸಾಂಘವಾಗಿ ನಡೆಯಲಿದೆ.

ದತ್ತು ಕಮ್ಮಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next