Advertisement

ಕಾಂಗ್ರೆಸ್ ಬಿಟ್ಟು ಹೋಗಿರುವ ಎಲ್ಲರನ್ನೂ ವಾಪಸ್ ಕರೆತರಲಾಗುತ್ತದೆ: ಡಿ ಕೆ ಶಿವಕುಮಾರ್

05:08 PM Sep 25, 2021 | Team Udayavani |

ಗಂಗಾವತಿ :ಮಾಜಿ ಸಂಸದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್. ಜಿ. ರಾಮುಲು ಬೆಂಗಳೂರಿನ ನಿವಾಸಕ್ಕೆ   ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ನಿಯೋಗ ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸಿದರು.

Advertisement

ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್ ಜಿ ರಾಮುಲು ಅವರು ಕೊಪ್ಪಳ ರಾಯಚೂರು ಬಳ್ಳಾರಿ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟನೆ ಮಾಡಿ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದರು.

ಅವರು ಆರೋಗ್ಯ ಸಮಸ್ಯೆಯಿಂದ ನಿವೃತ್ತಿಯಾದ ನಂತರ ಪಕ್ಷ ಸಂಘಟನೆ ಕಡಿಮೆಯಾಗಿ ಅಲ್ಲಿ ಬಿಜೆಪಿ ಪಕ್ಷ ತಳವೂರಲು ಕಾರಣವಾಗಿದೆ ಈಗ ಅವರ ಮನವೊಲಿಸಿ ರಾಜಕೀಯಕ್ಕೆ ಮರಳಿ ಕರೆ ತರಲಾಗುತ್ತದೆ ಪಕ್ಷದಿಂದ ದೂರ ಹೋಗಿರುವ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಕರಿಯಣ್ಣ ಸಂಗಟಿ ಸೇರಿದಂತೆ ಅನೇಕ ಹಿರಿಯ  ಮುಖಂಡರನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಯತ್ನ ನಡೆಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಮಾತನಾಡಿ ಕಾಂಗ್ರೆಸ್ ಬಿಟ್ಟು ಹೋಗಿರುವ ಎಲ್ಲರನ್ನೂ ವಾಪಸ್ ಕರೆ ತರಲಾಗುತ್ತದೆ ಈ ನಿಟ್ಟಿನಲ್ಲಿ ಎಚ್ ಜಿ ರಾಮುಲು ಅವರ ಜತೆ ಮಾತನಾಡಲಾಗಿದೆ ಎಂದರು.

ಎಚ್ ಜಿ ರಾಮುಲು ಮಾತನಾಡಿ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದ ಸಂಘಟನೆ ಮಾಡುತ್ತಿದ್ದಾರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾ ಗಬೇಕೆಂಬುದು ಬಹುತೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಅಭಿಪ್ರಾಯವಾಗಿದೆ. ನಾನೂ ಸಹ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತೇನೆ.

Advertisement

ಇದನ್ನೂ ಓದಿ:ರವಿವಾರ ಪಂಜಾಬ್ ನೂತನ ಸಚಿವ ಸಂಪುಟ ರಚನೆ: ಕ್ಯಾಪ್ಟನ್ ಆತ್ಮೀಯರಿಗೆ ಕೊಕ್ ಸಾಧ್ಯತೆ

ತಮ್ಮ ಪುತ್ರ ಶ್ರೀನಾಥ್ ಸೇರಿದಂತೆ ಕಾಂಗ್ರೆಸ್ ನಿಂದ ಹೊರಗೆ ಹೋಗಿರುವ ಎಲ್ಲರೂ ಪುನಃ ಘರ್ ವಾಪಸಿ ಕಾಂಗ್ರೆಸ್ಗೆ ಸೇರ್ಪಡೆಯಾಗಬೇಕು ಈ ದೇಶದ ಜನರ ನಾಡಿ ಬಡಿತ ವಾಗಿರುವ ಕಾಂಗ್ರೆಸ್ ಅವರ ಸಮಸ್ಯೆಗೆ ಸ್ಪಂದಿಸಲಿದೆ ಕಳೆದ ಅರುವತ್ತು ವರ್ಷಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿ ಉಳಿಸಿ ವಿಶ್ವದ ಸ್ಪರ್ಧಾ ಮಟ್ಟಕ್ಕೆ ದೇಶವನ್ನು ತೆಗೆದುಕೊಂಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ .

ಬಿಜೆಪಿ ಎರಡು ಸಾವಿರದ ಹದಿನಾರು ರಿಂದ ದೇಶದಲ್ಲಿ ಅಧಿಕಾರ ಹಿಡಿದು ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ ದೇಶದ ಲಾಭದಾಯಿಕ ಎಲ್ಲಾ ಸಂಸ್ಥೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಿ ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಇದನ್ನು ನಿಲ್ಲಿಸಲು ಜನರು ಕಾಂಗ್ರೆಸ್ಗೆ ಈ ಬಾರಿ ಬೆಂಬಲಿಸಲಿದ್ದಾರೆ ಆದ್ದರಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದರು .

ಎಂಎಲ್ ಸಿಗಳಾದ ಕೆ ಸಿ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ,ಮಾಜಿ ಶಾಸಕರಾದ ಮಧು ಬಂಗಾರಪ್ಪ ಹಾಗೂ ಮಾಜಿ ಎಂಎಲ್ಸಿಗಳಾದ ಎಚ್ ಆರ್ ಶ್ರೀನಾಥ್ ಹಾಗೂ ಕರಿಯಣ್ಣ ಸಂಗಟಿ ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next