Advertisement

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

12:52 PM Oct 04, 2024 | Team Udayavani |

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರು ಹಿಂದೆ ನಮ್ಮದೆ ಸರ್ಕಾರದಲ್ಲಿ ಸಮೀಕ್ಷೆ ಮಾಡಿಸಿದ ಸಾಮಾಜಿಕ, ಆರ್ಥಿಕ ಗಣತಿ ವರದಿ ಜಾರಿ ಮಾಡಲಿ. ಇದೇ ವಾರದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನವೆಂಬರ್ 01 ರಂದು ಅನುಷ್ಠಾನ ಮಾಡಲಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

Advertisement

ಕೊಪ್ಪಳ ತಾಲೂಕಿನ ಗಿಣಗೇರಾ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಅನವಶ್ಯಕ ವಿಚಾರ ಚರ್ಚೆ ಆಗುತ್ತಿವೆ. ಅವೆಲ್ಲ ನಿಲ್ಲಬೇಕು. ಕರ್ನಾಟಕ ಸಂಸ್ಕಾರ ಸಾಮಾಜಿಕ ನ್ಯಾಯ ಇರುವಂತಹ ಪ್ರದೇಶ. ಬಸವೇಶ್ವರ ನಡೆದಾಡುವ ನೆಲವಿದು ಎಂದರು.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಚರ್ಚೆ ಮಾಡಿರುವೆ. 2013-18 ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಎಲ್ಲ ಧರ್ಮ, ಜಾತಿಗಳು ಒಳಗೊಂಡ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದ ಸಮೀಕ್ಷೆ ಮಾಡಿಸಿದೆ. ಆ ಸಮೀಕ್ಷೆಗೆ 165 ಕೋಟಿ ಕೊಟ್ಟು ಸರ್ವೆ ಮಾಡಿಸಿದೆ. ಕಾಂತರಾಜ ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದಾರೆ. ಆಗ ಸಿಎಂಗೆ ಕೊನೆಯ ಅವಧಿಯಲ್ಲಿ ವರದಿ ತಲುಪಲಿಲ್ಲ. ಕುಮಾರಸ್ವಾಮಿ ಸಿಎಂ ಆದಾಗಲೂ ಬಿಡುಗಡೆ ಮಾಡಲಿಲ್ಲ. ಬೊಮ್ಮಾಯಿ ಸರ್ಕಾರ ವರದಿ ಬಿಡುಗಡೆ ಮಾಡಲಿಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕವಾಗಿದ್ದ ಜಯಪ್ರಕಾಶ್ ಹೆಗಡೆ ಅವಧಿ ಹೆಚ್ಚು ಮಾಡಿದೆವು. ಅವರು ಸಾಮಾಜಿಕ ಗಣತಿ ವರದಿಯನ್ನು 2024ರ ಫೆ.29 ಕ್ಕೆ ಸರ್ಕಾರಕ್ಕೆ ತಲುಪಿದೆ. ವರದಿ ಕೊಟ್ಟು ಎಂಟು ತಿಂಗಳಾಗಿದೆ.  ಸಿಎಂ ಸಿದ್ದರಾಮಯ್ಯ ಅವರು ವರದಿ ಬಗ್ಗೆ ಯೋಚನೆ ಮಾಡುವೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡಲು ಒತ್ತಾಯ ಮಾಡುವೆ ಎಂದರು.

ಬಡವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಳಜಿಯಿದೆ. ಮುಂದಿನ ವಾರವೇ ಸಂಪುಟದಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡಲು ಒತ್ತಾಯ ಮಾಡಿರುವೆ. ವರದಿ ಒಪ್ಪಿ ಅನುಷ್ಠಾನಗೊಳಿಸಲು ಮನವಿ ಮಾಡಿದ್ದೇನೆ. ಆ ಸಮೀಕ್ಷಾ ವರದಿ ನವೆಂಬರ್ 01 ರಿಂದ ಜಾರಿ ಮಾಡಬೇಕು. ನಾನು ಸಿಎಂ ಆರ್ಥಿಕ ಸಲಹೆಗಾರನಾಗಿ ಒತ್ತಾಯ ಮಾಡಿದ್ದೇನೆ. ಮುಂದಿನ ಬಜೆಟ್ ನಲ್ಲಿ ಈ ವರದಿ ಅನುಸಾರ ಯೋಜನೆ ರೂಪಿಸಲು ಅನುಕೂಲವಾಗಲಿದೆ. ಸಿಂಧನೂರಿನ ಕಾರ್ಯಕ್ರಮದಲ್ಲೇ ಸಿಎಂ ವರದಿ ಜಾರಿ ಮಾಡುವುದಾಗಿ ಘೋಷಣೆ ಮಾಡಲು ಒತ್ತಾಯ ಮಾಡುತ್ತೇನೆ ಎಂದು ರಾಯರಡ್ಡಿ ಹೇಳಿದರು.

ರಾಜ್ಯದಲ್ಲಿ ಯಾವ ಜಾತಿ ಏಷ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಈಗ ಶೇ.50 ಮೀಸಲಾತಿಯಿದೆ. ಇದನ್ನು ಶೇ.75ರ ವರೆಗೂ ಮೀಸಲಾತಿ ಕೊಡಲು ಸಾಧ್ಯವಿದೆ. ಸೌಲಭ್ಯ ವಂಚಿತ ಬೇರೆ ಹಿಂದುಳಿದ ವರ್ಗಕ್ಕೆ ಆ ಮೀಸಲಾತಿ ಕೊಡಲು ಅವಕಾಶವಿದೆ. ಒಳ ಮೀಸಲಾತಿ, ಉಪ ಪಂಗಡಕ್ಕೆ ಕೊಡಲು ಅವಕಾಶವಿದೆ.  ವರದಿಯಲ್ಲಿ ತಪ್ಪು ಮಾಡಿದ್ದರೆ ಸರಿಪಡಿಸಲು ಅವಕಾಶ ಇದೆ. ಜನತೆಗೆ ಅನುಕೂಲ ಆಗಲು ವರದಿ ಜಾರಿ ಮಾಡಲಿ ಎಂದರು.

Advertisement

ಮೂರುವರೆ ವರ್ಷ ಸಿದ್ದು ಸಿಎಂ

ಮುಡಾ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಸಿಎಂ ಇದರಲ್ಲಿ ಭಾಗಿಯಾಗಿಲ್ಲ, ಅವರಿಗೆ ಶಿಕ್ಷೆ ಆಗಲ್ಲ. ಹೈಕೋರ್ಟ್ ಪ್ರಾಶಿಕ್ಯೂಶನ್ ಗೆ ಅನುಮತಿ ಕೊಟ್ಟಿಲ್ಲ, ಪ್ರಾಥಮಿಕ ತನಿಖೆ ಮಾಡಲು ಹೇಳಿದೆ. ಮೂರುವರೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಕೇಂದ್ರ ಸರ್ಕಾರವೂ ಜಾತಿ ಗಣತಿ, ಆರ್ಥಿಕ ಗಣತಿ ಮಾಡಲಿ. ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಹಾಗೂ ಶಾಸಕಾಂಗ ನಾವು ಹೇಳಬೇಕು. ಅವರೇ ಸಿಎಂ ಆಗಿ ಮುಂದುವರೆಯಲು ಒತ್ತಾಯಿಸುತ್ತೇವೆ. ಅವರು ಒಂದು ವರ್ಷ ಅವಕಾಶ ಕೊಡಿ ಅಭಿವೃದ್ಧಿ ಮಾಡಿ ತೋರಿಸುವೆ ಎಂದಿದ್ದಾರೆ ಎಂದು ರಾಯರಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next