Advertisement

ತೋಟಗಾರಿಕೆ ಮೇಳ ರೈತರಿಗೆ ಸಹಕಾರಿ

03:08 PM Feb 20, 2020 | Naveen |

ಕೊಪ್ಪಳ: ತೋಟಗಾರಿಕೆ ಬೆಳೆಯನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಮೇಳವನ್ನು ಆಯೋಜನೆ ಮಾಡಿದೆ. ಇದರಿಂದ ರೈತರಿಗೆ ತುಂಬ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಹೇಳಿದರು.

Advertisement

ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ತೋಟಗಾರಿಕೆ ಮಾರಾಟ ಮಹಾ ಮಂಡಳಿ, ಜಿಲ್ಲಾ ಹಾಪ್‌ಕಾಮ್ಸ್‌ ಸಹಯೋಗದಲ್ಲಿ ಬುಧವಾರ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗುಣಮಟ್ಟದ ಬೆಳೆಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ತೋಟಗಾರಿಕೆ ಇಲಾಖೆಯಿಂದ ಈ ಮೇಳ ಆಯೋಜಿಸಲಾಗಿದೆ. ಅಲ್ಲದೇ ಯಾವುದೇ ಮಧ್ಯವರ್ತಿಗಳಿಲ್ಲದೇ ಸೂಕ್ತ ಬೆಲೆಯೊಂದಿಗೆ ರೈತರಿಗೆ ನೇರವಾಗಿ ಲಾಭ ದೊರೆಯಲಿದೆ ಎಂದರು.

ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಕುರಿತಾದ ತಾಂತ್ರಿಕ ಮಾಹಿತಿ ಕೈಪಿಡಿಯನ್ನು ಜಿಪಂ ಸಿಇಒ ರಘುನಂದನ್‌ ಮೂರ್ತಿ ಬಿಡುಗಡೆಗೊಳಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ ಅಹ್ಮದ್‌, ಕೇಂದ್ರ ಸ್ಥಾನಿಕ ಸಹಾಯಕ ಮಂಜುನಾಥ ಲಿಂಗಣ್ಣನವರ, ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಗುಡಸಲದ, ಮುನಿರಾಬಾದ್‌ ತರಬೇತಿ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮೇಶ ನಾಯಕ, ವಿಷಯ ತಜ್ಞ ವಾಮನ ಮೂರ್ತಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next