Advertisement

ಕೋವಿಡ್ ಸೋಂಕಿಗೆ ಮಹಿಳೆ ಬಲಿ! ಕೊಪ್ಪಳದಲ್ಲಿ ಮಹಾಮಾರಿಗೆ 6ನೇ ಸಾವು

05:07 PM Jul 11, 2020 | sudhir |

ಕೊಪ್ಪಳ: ಕೊಪ್ಪಳದಲ್ಲಿ ಕೋವಿಡ್ ಸಾವಿನ ರಣಕೇಕೆ ಮುಂದುವರೆಸಿದ್ದು, ಶನಿವಾರ 60 ವರ್ಷದ ಮಹಿಳೆ ಸೋಂಕಿನಿಂದ ಸಾವನ್ನಪ್ಪಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ. ಇದು ನಿಜಕ್ಕೂ ಜಿಲ್ಲೆಯ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

Advertisement

ಜಿಲ್ಲೆಯ ಕಾರಟಗಿಯ 60 ವರ್ಷದ ಮಹಿಳೆಯು ಸೋಂಕಿನಿಂದ ಬಳಲಿ ಜು.10 ರಂದು ರಾತ್ರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಶನಿವಾರ ಬೆಳಗ್ಗೆ 11.15ಕ್ಕೆ ಮೃತಪಟ್ಟಿದ್ದಾಳೆ. ಈ ಮಹಿಳೆ ಸಾರಿ ಕೇಸ್ ನಡಿ ಆಸ್ಪತ್ರೆಗೆ ದಾಖಲಾಗಿದ್ದಳು. ಡಯಾಬಿಟಿಸ್ ಸೇರಿದಂತೆ ಸೋಂಕಿನ ಲಕ್ಷಣದಿಂದ ಬಳಲುತ್ತಿದ್ದಳು. ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಜಿಲ್ಲಾಡಳಿತ ಸಂಜೆ ಈ ವಿಷಯ ಪ್ರಕಟ ಮಾಡಿದೆ.

ಜಿಲ್ಲೆಯಲ್ಲಿ ಈ ಮಹಿಳೆ ಸೇರಿದಂತೆ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ‌, ಇತ್ತೀಚೆಗೆ ಕೋವಿಡ್ ಸೋಂಕಿನಿಂದಾಗಿ 5 ಜನ ಮೃತ ಪಟ್ಟಿದ್ದರು. ಅದರಲ್ಲೂ ಕೇವಲ ಮೂರು ದಿನದಲ್ಲಿ ನಾಲ್ವರ ಸಾವು ಸಂಭವಿಸಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next