Advertisement

ಕೃಷಿ ಕಾರ್ಮಿಕರಿಗೆ ಕನಿಷ್ಟ ವೇತನ ನೀಡಿ

06:36 PM Apr 10, 2021 | Team Udayavani |

ಕೊಪ್ಪಳ: ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ಕೆಲಸ ನಿರ್ವಹಿಸುವ ಕೃಷಿ ರಂಗದ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿ ಎಐಎಡಬ್ಲೂ ಸಿ ಸಂಘಟನೆಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅ ಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಕೃಷಿ ಸಂಬಂಧಿ ತ ಕೆಲಸಗಳಲ್ಲಿ ತೊಡಗುವವರ ಕನಿಷ್ಠ ವೇತನವನ್ನು ಪರಿಷ್ಕರಿಸಿ 01-04-2020 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಕೃಷಿ ರಂಗದಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರಿಗೆ ರೂ.424.80 ಕನಿಷ್ಠ ವೇತನ ಜಾರಿಯಾಗಿದೆ. ಕೇಂದ್ರ ಸರ್ಕಾರವು ಗ್ರಾಮೀಣಾ ಉದ್ಯೋಗ ಖಾತ್ರಿ ಕಾಯ್ದೆಯಡಿಯಲ್ಲಿ ಕೆಲಸ ಮಾಡುವವರ ಕನಿಷ್ಠ ದಿನಗೂಲಿಯನ್ನು ಪರಿಷ್ಕರಿಸುವ ಆದೇಶ ಹೊರಡಿಸಿದೆ. ಮಾ.15 ರಂದು ಹೊರಡಿಸಲಾದ ಆದೇಶದ ಪ್ರಕಾರ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರ ಕನಿಷ್ಠ ದಿನಗೂಲಿ ಕರ್ನಾಟಕದಲ್ಲಿ ಕೇವಲ ರೂ.289 ಆಗಲಿದೆ. ಈ ಎರಡು ಕೂಲಿ ದರಗಳ ನಡುವೆ ಗಣನೀಯವಾದ ವ್ಯತ್ಯಾಸವಿದೆ. ಇದು ಕಾನೂನಿಗೆ ವಿರುದ್ಧವಾಗಿದೆ. ಉದ್ಯೋಗ ಖಾತ್ರಿ ಕೆಲಸಗಾರರ ವೇತನವು ಕೃಷಿ ಕಾರ್ಮಿಕರಿಗೆ ಅಕುಶಲ ಕೆಲಸಕ್ಕೆ ನೀಡುವ ಕನಿಷ್ಠ ದಿನಗೂಲಿಗಿಂತ ಕಡಿಮೆಯಾಗಿರಬಾರದು. ಈ ನ್ಯೂನತೆ ಸರಿಪಡಿಸಿ ಕೃಷಿ ಕಾರ್ಮಿಕರಿಗೆ ನೀಡುವಷ್ಟು ಕೂಲಿಯನ್ನು ಉದ್ಯೋಗ ಖಾತ್ರಿ ಕೆಲಸಗಾರರಿಗೂ ನೀಡಬೇಕೆಂದು ಒತ್ತಾಯಿಸಿದರು.

ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಗ್ರಾಮೀಣ ಕೂಲಿಕಾರರಿಗೆ ಜೀವನ ದುಸ್ತರವಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಅವರ ಅವಲಂಭನೆ ಹೆಚ್ಚಾಗಿದೆ. ಆದ್ದರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವವರ ಕನಿಷ್ಠ ದಿನಗೂಲಿಯನ್ನು ರೂ. 600 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂದಪ್ಪ ಬರದೂರ, ಸುಂಕಪ್ಪ ಗದಗ, ಉಸ್ಮಾನಸಾಬ ಕರಡಿ, ಕಾಲೆಸಾಬ ಕರಡಿ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next