ಕೊಪ್ಪಳ: ತಾಲೂಕಿನ ಬೂದಗುಂಪಾ ಗ್ರಾಪಂ ವ್ಯಾಪ್ತಿಯ ಜಬ್ಬಲಗುಡ್ಡ ಗ್ರಾಮದ ಬಳಿಯ ಕುಮಾರರಾಮನ ಗುಡ್ಡದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ಬೂದಗುಂಪ ಗ್ರಾಪಂ ವತಿಯಿಂದ ಪಾರಂಪಾರಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನದ ಅಂಗವಾಗಿ ನಡೆದ ಸ್ವಚ್ಛತಾ ಶ್ರಮದಾನಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ
ನೀಡಿದರು.
ಬಳಿಕ ಮಾತನಾಡಿದ ಅವರು, ಐತಿಹಾಸಿಕ ಸ್ಥಳಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅವುಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ. ಪ್ಲಾಸ್ಟಿಕ್ ಬಳಕೆಯಿಂದ ಐತಿಹಾಸಿಕ ಸ್ಥಳಗಳಿಗೆ ಧಕ್ಕೆಯಾಗದಂತೆ ಸುರಕ್ಷಾ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್, ಪೇಪರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಕುವುದು ಹಾಗೂ ಕ್ರಮವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಸ್ಮಾರಕಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ “ನಮ್ಮ ನಡಿಗೆ ಪರಂಪರೆಯ ಕಡೆಗೆ’ ಎಂಬ ಘೋಷವ್ಯಾಕದೊಂದಿಗೆ ಸ್ಮಾರಕಗಳ ಸ್ವಚ್ಛತೆ, ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದ್ದು ಒಳ್ಳೆಯ ಕೆಲಸವಾಗಿದೆ. ಇದೊಂದು ಉತ್ತಮ ಕಾರ್ಯವಾಗಿದೆ. ಸ್ಥಳೀಯ ಜನರಿಗೆ ಹಾಗೂ ಯುವ ಪೀಳಿಗೆಗೆ ಸ್ಮಾರಕಗಳು, ದೇವಾಲಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಿ, ಸ್ಮಾರಕಗಳು, ದೇವಾಲಯಗಳ ಸಂರಕ್ಷಣೆ ಮಾಡಲು ಸಹಕಾರ ನೀಡಬೇಕಾಗಿದೆ ಎಂದರು.
ಐಎಎಸ್ ಅಧಿಕಾರಿ ಶಿಲ್ಪಾ ಶರ್ಮಾ, ಮಲ್ಲಿರ್ಕಾಜುನ್ ತೊದಲಬಾಗಿ, ಪ್ರವಾಸೋದ್ಯಮ ಇಲಾಖೆ ಸಹಾಯಕ
ನಿರ್ದೇಶಕ ಡಿ. ನಾಗರಾಜ್, ತಹಶೀಲ್ದಾರ್ ವೀಠಲ್ ಚೌಗಲ್, ತಾಪಂ ಇಒ ದುಂಡಪ್ಪ ತೂರಾದಿ, ಸಹಾಯಕ ನಿರ್ದೇಶಕರ
ಮಹೇರ, ತಾಲೂಕು ಯೋಜನಾಧಿಕಾರಿ ರಾಜಾಸಾಬ್ ನದಾಫ್, ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಗುತ್ತೂರ, ಪಿಡಿಇ ಲಕ್ಷ್ಮೀದೇವಿ, ಗ್ರಾಪಂ ಸದಸ್ಯರು, ಶಾಲಾ ಮಕ್ಕಳು ಶಿಕ್ಷಕರು, ನರೇಗಾ, ಸಂಜೀವಿನಿ ಯೋಜನೆಯಗಳ ಸಮಾಲೋಚಕರು, ಸಯೋಜಕರು ಸೇರಿದಂತೆ ಇತರರಿದ್ದರು.