Advertisement

koppal lok sabha constituency; ಕಳೆದ ಚುನಾವಣೆಯಲ್ಲಿ ನೋಟಾಗೆ 3ನೇ ಸ್ಥಾನ!

12:28 PM Apr 10, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ಕೊಪ್ಪಳ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಕಳೆದ 2014 ಹಾಗೂ 2019ರ ಅವಧಿಯಲ್ಲಿ ಗೆದ್ದ ಹಾಗೂ ಸಮೀಪದ ಪ್ರತಿಸ್ಪರ್ಧಿ ಹೊರತುಪಡಿಸಿದರೆ “ನೋಟಾ’ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಕ್ಷೇತ್ರದಲ್ಲಿ ಶೇ.1ರಷ್ಟು
ಮತದಾರರು ಯಾವ ಅಭ್ಯರ್ಥಿಗಳನ್ನು ಇಷ್ಟಪಡದೇ ತಮ್ಮ ಮತವನ್ನು ನೋಟಾಗೆ ಓಟು ಕೊಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.

Advertisement

ಹೌದು.. ಇದು ಅಚ್ಚರಿಯಾದರೂ ಸತ್ಯದ ಸಂಗತಿ. ಕಳೆದ 14-15 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಹಲವು ಜನರು ಚುನಾವಣೆಯ ವೇಳೆ ತಮ್ಮ ಹಕ್ಕು ಮತವನ್ನೇ ಚಲಾವಣೆ ಮಾಡದೇ ದೂರ ಉಳಿಯುತ್ತಿದ್ದರು. ಇದು ದೇಶದ ತುಂಬೆಲ್ಲಾ ಚರ್ಚೆಯಾಗಿತ್ತು.  ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರು ಸಮಗ್ರ ಚರ್ಚೆ ನಡೆಸಿದ್ದರು. ಭಾರತದ ಪ್ರಜಾತಂತ್ರ
ವ್ಯವಸ್ಥೆಯಲ್ಲಿ ಯಾವು ಮತದಾರನು ಮತದಾನದಿಂದ ದೂರ ಉಳಿಯಬಾರದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯು
ತಮಗೆ ಇಷ್ಟವಿದಲ್ಲದೇ ಇದ್ದರೂ ತಮ್ಮ ಮತವನ್ನುನೋಟಾ (ಮೇಲಿನ ಯಾವುದು ಅಲ್ಲ)ಗೆ ಮತ ಚಲಾವಣೆ ಮಾಡುವ ಅ ಧಿಕಾರವನ್ನು 2013ರ ಸೆ.27ರಂದು ಚುನಾವಣಾ ಆಯೋಗಕ್ಕೆ ಆದೇಶ ಮಾಡಿತು.

ಈ ಆದೇಶದಂತೆ ಚುನಾವಣಾ ಆಯೋಗವು ದೇಶದ ತುಂಬೆಲ್ಲಾ 2014ರಲ್ಲಿ ಇದನ್ನು ಜಾರಿಗೊಳಿಸಿತು. ಮತದಾರರನಿಗೆ ಆಯಾ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮಗೆ ಯಾರೂ ಇಷ್ಟ ಆಗದಿದ್ದರೆ ಅಂಥ ಅಭ್ಯರ್ಥಿ ವಿರುದ್ಧವಾಗಿ ನೋಟಾಗೆ ಮತದಾನ ಮಾಡುವ ಅವಕಾಶ ದೊರೆತು. ನೋಟಾ ಬಟನ್‌ ಮತದಾನದ ಪಟ್ಟಿಯಲ್ಲಿ
ಸೇರ್ಪಡೆಗೊಂಡಿತು. ಚುನಾವಣಾ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಕ್ರಮ ಸಂಖ್ಯೆಯ ಅನುಸಾರ ಕೊನೆಯ ಸ್ಥಾನದಲ್ಲಿ ಈ ನೋಟಾ ಬಟನ್‌ ಗೆ ಸ್ಥಾನ ಕಲ್ಪಿಸಿತು.

ಅದರಂತೆ, 2014ರಲ್ಲಿ ನಡೆದ ಹಾಗೂ 2019ರಲ್ಲಿ ನಡೆದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹತ್ತಾರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದರೂ ಗೆದ್ದ ಅಭ್ಯರ್ಥಿ, ಪರಾಜಿತ ಅಭ್ಯರ್ಥಿ ಬಿಟ್ಟರೆ ಮೂರನೇ ಸ್ಥಾನದಲ್ಲಿ ನೋಟಾಗೆ ಹೆಚ್ಚು ಮತಗಳು ಲಭಿಸಿರುವುದು ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿವೆ.

2014ರ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಸಂಗಣ್ಣ ಕರಡಿ-486383 ಮತ ಪಡೆದು ಗೆದ್ದರೆ, ಬಸವರಾಜ ಹಿಟ್ನಾಳ-453969, ಸೈಯದ್‌ ಆರಿಫ್‌ -9529, ತಿಮ್ಮಪ್ಪ ಉಪ್ಪಾರ-2459, ನಜೀರ ಹುಸೇನ್‌-2129, ಡಿ.ಎಚ್‌.ಪೂಜಾರ-2636, ಭಾರದ್ವಾಜ- 2089, ರಮೇಶ ಕೋಟೆ-1867, ಕೆ.ಎಂ.ರಂಗನಾಥರಡ್ಡಿ-2305, ಶಿವಕುಮಾರ ತೋಂಟಾಪುರ- 3425, ಅಣ್ಣೋಜಿರಾವ್‌-2012, ವಿ ಗೋವಿಂದ-6300, ಗೋವಿಂದರಡ್ಡಿ ಪಚ್ಚರಳ್ಳಿ-2839, ನಾಗಪ್ಪ ಕಾರಟಗಿ-2894, ಬಿ ಮನೋಹರ- 4433, ಸುರೇಶ-8292, ನೋಟಾಗೆ-12,947 ಮತಗಳು ಚಲಾವಣೆಯಾಗಿದ್ದವು.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

Advertisement

ಈ ವೇಳೆ ಸಂಗಣ್ಣ ಕರಡಿ-5,86783 ಮತಗಳನ್ನುಪಡೆದು ಗೆಲುವು ಸಾಧಿಸಿದರೆ, ಕೆ ರಾಜಶೇಖರ ಹಿಟ್ನಾಳ-548386, ಶಿವಪುತ್ರಪ್ಪ ಗುಮಗೇರಾ-9481, ಅನ್ನೋಜಿರಾವ್‌ ಜಿ-5681, ಬಿ. ಬಸಲಿಂಗಪ್ಪ -1609, ಬಂಡಿಮಠ ಶರಣಯ್ಯ-2252, ಹೇಮರಾಜ ವೀರಾಪುರ-1059, ಪ.ಯು.ಗಣೇಶ- 1699, ನಾಗರಾಜ ಕಲಾಲ್‌-4855, ಬಾಲರಾಜ ಯಾದವ್‌-2937, ಮಲ್ಲಿಕಾರ್ಜುನ ಹಡಪದ-
2408, ಸತೀಶರಡ್ಡಿ-3498, ಸುರೇಶಗೌಡ ಮುಂದಿನ ಮನೆ-5158, ಸುರೇಶ ಹೆಚ್‌-3728 ಹಾಗೂ ನೋಟಾಗೆ-10800 ಮತಗಳು
ಚಲಾವಣೆಯಾಗಿದ್ದವು.

10 ಸಾವಿರ ಜನರಿಗೆ ಅಭ್ಯರ್ಥಿಗಳೇ ಇಷ್ಟ ವಿಲ್ಲ..
ಕೊಪ್ಪಳ ಲೋಕ ಸಮರದ ಎರಡು ಅವ ಧಿಯಲ್ಲಿ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳೇ ತಮಗೆ ಇಷ್ಟವಿಲ್ಲ
ಎನ್ನುವ ಸಂದೇಶ ನೀಡುವ ಮೂಲಕ 2014ರಲ್ಲಿ ನೋಟಾಗೆ 12,947 ಮತ ಚಲಾಯಿಸಿದ್ದರೆ, 2019ರಲ್ಲಿ ನೋಟಾಗೆ 10,800 ಜನರು ತಮ್ಮ ಮತ ಚಲಾಯಿಸಿದ್ದರು. ಈ ಎರಡೂ ಅವ ಯಲ್ಲಿ ಗೆದ್ದ ಅಭ್ಯರ್ಥಿ, ಅವರ ಸಮೀಪದ ಅಭ್ಯರ್ಥಿ ಹೊರತು ಪಡಿಸಿದರೆ ಮೂರನೇ ಸ್ಥಾನದಲ್ಲಿ ನೋಟಾ ಸ್ಥಾನ ಇರುವುದು ಎಲ್ಲರ ಗಮನ ಸೆಳೆಯಿತು. ವಿಶೇಷವೆಂದರೆ, ಹತ್ತಾರು ಜನರು ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಸರಾಸರಿ 10 ಸಾವಿರ ಜನರು ತಮಗೆ ಯಾರೂ ಇಷ್ಟವಿಲ್ಲ, ಅವರು ಬೇಡ ಎನ್ನುವಂಥಹ ಸಂದೇಶ ನೀಡಿ ನೋಟಾಗೆ ತಮ್ಮ ಓಟು ಕೊಟ್ಟಿದ್ದಾರೆ. ಎರಡೂ ಚುನಾವಣೆಯಲ್ಲಿ ನೋಟಾ ಸರಾಸರಿ ಶೇ.01 ರಷ್ಟು ಮತ ಪಡೆದಿದೆ.

■ ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next