Advertisement

ಹೂವಿನ ದರ ಕುಸಿತ; ತೋಟಕ್ಕೆ  ಕುರಿ ಬಿಟ್ಟ ರೈತ

08:30 PM Apr 20, 2021 | Team Udayavani |

ಕೊಪ್ಪಳ: ಕೋವಿಡ್‌ ಆರ್ಭಟ, ನೀರಿನ ಕೊರತೆಯ ಮಧ್ಯೆಯೂ ಬೇಸಿಗೆಯಲ್ಲಿ ಕಷ್ಟಪಟ್ಟು ಹೂವು ಬೆಳೆದಿದ್ದ ರೈತನೋರ್ವ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕುರಿ ಹಿಂಡು ಬಿಟ್ಟು ಹೂವು ಮೇಯಿಸಿದ ಘಟನೆ ಸೋಮವಾರ ನಡೆದಿದೆ.

Advertisement

ತಾಲೂಕಿನ ಬಹದ್ದೂಬಂಡಿಯ ಪಾಯಣ್ಣ ಎಂಬ ರೈತನೇ ವೇದನೆಯಿಂದಲೇ ಹುಲುಸಾಗಿ ಬೆಳೆದ ಹೂವಿನ ಹೊಲಕ್ಕೆ ಕುರಿ ಬಿಟ್ಟು ಮೇಯಿಸಿದ ವ್ಯಕ್ತಿ. ಹಲವು ಸಂಕಷ್ಟಗಳ ಮಧ್ಯೆಯೂ ರೈತನು ಹೂವು ಬೆಳೆದಿದ್ದಾನೆ. ಒಂದೆಡೆ ನೀರಿನ ಕೊರತೆಯಾದರೆ, ಇನ್ನೊಂದೆಡೆ ರೋಗ ಬಾಧೆಯು ರೈತರನ್ನು ಕಾಡುತ್ತಿರುತ್ತವೆ. ಈ ಮಧ್ಯೆಯೂ ರೈತರು ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬಹದ್ದೂರಬಂಡಿ ಗ್ರಾಮದ ರೈತ ಪಾಯಣ್ಣ ಒಂದು ಎಕರೆಯಲ್ಲಿ ಗಲಾಟೆ ಹೂವಿನ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ಹೂವಿಗೆ ಕೆಜಿಗೆ 20 ರೂ. ಮಾತ್ರ ಇದೆ. ಈ ದರಕ್ಕೆ ಮಾರಾಟ ಮಾಡಿದರೆ ಹೂವು ಕಟಾವು ಮಾಡಿದ ಕೂಲಿಯು ಕೊಡಲು ಕಷ್ಟವಾಗುತ್ತಿದೆ. ಪಾಯಣ್ಣ ಅವರು 40 ಸಾವಿರ ರೂ. ವ್ಯಯಿಸಿದ್ದು ಹೂ ಕಟಾವು ಮಾಡಿದಷ್ಟು ಸಹ ಆದಾಯ ಬರುತ್ತಿಲ್ಲ. ಕೋವಿಡ್‌  ಎರಡನೇ ಅಲೆ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಗಲಾಟೆ ಹೂವಿನದರ ಕುಸಿತವಾಗಿದೆ. ಇದರಿಂದಾಗಿ ನಾವು ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.

ಇದು ಕೇವಲ ಹೂವಿನ ರೈತನದ್ದಷ್ಟೆ ಸಮಸ್ಯೆಯಲ್ಲ. ಟೊಮ್ಯಾಟೊ, ಬಾಳೆ ಸೇರಿದಂತೆ ಹಲವು ತರಕಾರಿ ಬೆಳೆಗಳ ಬೆಲೆಯೂ ಕುಸಿತ ಕಂಡಿದೆ. ಈಗ ಕೋವಿಡ್‌  ಆರ್ಭಟಕ್ಕೆ ಸಭೆ, ಸಮಾರಂಭಗಳಿಗೆ ಬ್ರೇಕ್‌ ಬಿದ್ದ ಹಿನ್ನೆಲೆಯಲ್ಲಿ ಹೂವುಗಳ ಮಾರಾಟ ಸಂಪೂರ್ಣ ನೆಲಕಚ್ಚಿ ರೈತ ಸಂಕಷ್ಟ ಎದುರಿಸುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next