Advertisement
ಬಗೆ ಬಗೆಯ ಪುಷ್ಪಗಳಿಂದ ಕರ್ನಾಟಕ ನಕ್ಷೆ ಸೇರಿದಂತೆ ವಿವಿಧ ಚಿತ್ತಾರಗಳನ್ನು ಹೂವಿನಲ್ಲಿ ಅಲಂಕರಿಸಲಾಗಿದೆ. ರಾಜ್ಯೋತ್ಸವದ ಪ್ರಯುಕ್ತ ರಜೆ ಇದ್ದ ಪ್ರಯುಕ್ತ ಸುತ್ತಲಿನ ಜನತೆ ತಂಡೋಪ ತಂಡವಾಗಿ ಪಂಪಾವನಕ್ಕೆ ಆಗಮಿಸುತ್ತಿವೆ. ಪಂಪಾವನದ ಹೂವಿನಾಲಂಕಾರದ ಚಿತ್ತಾರಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನೋಡುತ್ತಿದ್ದ ಜನ, ಬಿಸಿಲ ನಾಡು ಕೊಪ್ಪಳದಲ್ಲಿ ಫಲಪುಷ್ಪ ಪ್ರದರ್ಶನ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿ ವಿವಿಧ ಔಷಧಿಯ ಸಸ್ಯಗಳನ್ನೂ ಮಾರಾಟಕ್ಕೆ ಇರಲಿಸಲಾಗಿದೆ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಫಲಪುಷ್ಪ ಪ್ರದರ್ಶನದ ನೇತೃತ್ವ ವಹಿಸಿದ್ದಾರೆ.