Advertisement

ಕೊಪಾ ಅಮೆರಿಕ ಫುಟ್ ಬಾಲ್‌ : ಫೈನಲ್‌ಗೆ ನೆಗೆದ ಬ್ರಝಿಲ್‌

10:56 PM Jul 06, 2021 | Team Udayavani |

ರಿಯೋ ಡಿ ಜನೈರೊ : ಲುಕಾಸ್‌ ಪಕ್ವೆಟ ಮೊದಲಾರ್ಧದ 35ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಆತಿಥೇಯ ಬ್ರಝಿಲ್‌ ತಂಡ ಪೆರು ವಿರುದ್ಧದ ಸೆಮಿ ಸೆಣಸಾಟದಲ್ಲಿ ಗೆದ್ದು “ಕೊಪಾ ಅಮೆರಿಕ’ ಫ‌ುಟ್‌ಬಾಲ್‌ ಪಂದ್ಯಾವಳಿಯ
ಫೈನಲ್‌ಗೆ ಲಗ್ಗೆಯಿಟ್ಟಿದೆ.

Advertisement

ಲುಕಾಸ್‌ ಎರಡೂ ಪಂದ್ಯಗಳಲ್ಲಿ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.

ಮರಾಕಾನಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬ್ರಝಿಲ್‌ ಪಡೆ ಆರ್ಜೆಂಟೀನಾ-ಕೊಲಂಬಿಯಾ ನಡುವಿನ ವಿಜೇತ ತಂಡವನ್ನು ಎದುರಿಸಲಿದೆ.

ಕೂಟದ ಆತಿಥ್ಯ ವಹಿಸಿದಾಗಲೆಲ್ಲ ಬ್ರಝಿಲ್‌ ಕೋಪಾ ಅಮೆರಿಕ ಚಾಂಪಿಯನ್‌ ಆಗಿ ಮೂಡಿಬಂದಿದೆ. ಆದ್ದರಿಂದ ಈ ಬಾರಿಯೂ ಬ್ರಝಿಲ್‌ ಮೇಲೆ ಹೆಚ್ಚು ಭರವಸೆ ಇರಿಸಲಾಗಿದೆ.

ಇದನ್ನೂ ಓದಿ : ಪ್ರೇಕ್ಷಕರಿಗೆ ತೆರೆಯಲಿದೆ ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next