Advertisement

ನಾಟಕ ಪ್ರದರ್ಶಿಸಿ ಕೋವಿಡ್ ಜಾಗೃತಿ

01:26 PM Apr 15, 2020 | Naveen |

ಕೂಡ್ಲಿಗಿ: ಕೋವಿಡ್  ವೈರಸ್‌ ರೋಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿ ಸಾವಿಗೆ ಶರಣಾಗಿ ನೋಡಬೇಕು ಎನ್ನುವ ಕೋವಿಡ್ ರೋಗ ಹರಡುವಿಕೆಯನ್ನು ತಡಗಟ್ಟಲು ಪ್ರಸ್ತುತ ಈ ಕಿರು ನಾಟಕ ಅವಶ್ಯಕ ಎಂದು ಡಿವೈಎಸ್‌ಪಿ ಶಿವಕುಮಾರ್‌ ಹೇಳಿದರು.

Advertisement

ಅವರು ತಮಟೆ ಬಾರಿಸಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೋವಿಡ್ ವೈರಾಸ್‌ ನಿಯಂತ್ರಿಸಲು ಪಟ್ಟಣದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹಗಲು ವೇಷ ಧರಿಸಿದವರ ಶ್ರಮ ಮೆಚ್ಚುವಂತಹದ್ದು. ಜನರಲ್ಲಿ ಭಯ ಬೀಳಿಸುವ ಮೂಲಕ ಪ್ರತಿ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಕೋವಿಡ್ ಮಹಾಮಾರಿ ನಿಯಂತ್ರಿಸಲು ಹಗಲು ವೇಷಗಾರರಿಂದ ಕಿರು ನಾಟಕ ನೋಡಿದ ಜನರು ಕೂಡಲೇ ದಯವಿಟ್ಟು ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಜನ ಅರ್ಥಮಾಡಿಕೊಂಡು ನಮಗಾಗಿ ಪೊಲೀಸ್‌ ಇಲಾಖೆ ಕಷ್ಟಪಡುತ್ತಿದೆ. ಆದ ಕಾರಣ ಇದು ನಮ್ಮ ಜವಾಬ್ದಾರಿ ಎಂದು ಮನಗಂಡು ಮನೆಯಲ್ಲಿಯೇ ಇರಬೇಕು ಎಂದು ನುಡಿದರು.

ನಂತರ ಸಿಪಿಐ ಪಂಪನಗೌಡ ಮಾತನಾಡುತ್ತಾ ಜನರಲ್ಲಿ ವೈರಸ್‌ ಯಾರು ಮನೆಯಿಂದ ಹೊರಗಡೆ ಬಂದವರಿಗೆ ಮೊದಲ ಮೃತ್ಯುಯಾಗಿ ಸ್ಪರ್ಶಿಸುವ ಶಕ್ತಿ ಇದೆ. ಭಯಾನಕ ರೋಗಕ್ಕೆ ತುತ್ತಾಗಿ ನರಳುವ ಯಾತನೆಯಿಂದ ಕೈಬಿಟ್ಟು ಈಗಾಲಾದರೂ ಕಿರು ನಾಟಕದಿಂದ ಬದಲಾಗಿ ಹಾಗೆಯೇ ಸ್ಥಳೀಯ ರಂಗ ಕಲಾವಿದರಾಗಿ ಹಗಲು ವೇಷದಾರಿಗಳು ತಮ್ಮ ನಟನೆಯಲ್ಲಿ ಕರಗತ ಮಾಡಿಕೊಂಡು ಪಟ್ಟಣದ ಪ್ರತಿ ವಾರ್ಡ್ ಗಳಲ್ಲಿ ಸಂಚಾರಿಸುತ್ತಾ ಪಾತ್ರದಾರಿಗಳಲ್ಲಿ ಒಬ್ಬ ಯಮನು ಇನ್ನೊಬ್ಬ ಕೋವಿಡ್ ವೈರಸ್‌, ಮತ್ತೊಬ್ಬ ಚಿತ್ರಗುಪ್ತ ಸಂಭಾಷಣೆ ಮಾಡುತ್ತಾ ಸ್ಯಾನಿಟೈಸರ್‌ ಬಳಸಿ ಕೈ ಶುಚಿ ಮಾಡಿಕೊಳ್ಳಬೇಕು ಎಂದು ಜನರಲ್ಲಿ ಅರಿವು ಮೂಡಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ರೋಗದಿಂದ ದೂರವಿರೋಣ ಎಂದರು. ತಿಮ್ಮಣ್ಣ ಚಾಗನೂರು ಮಾತನಾಡಿ ರೋಗಕ್ಕೆ ಕಡಿವಾಣ ಹಾಕಬೇಕಾದರೆ ನಮ್ಮ ಜನ ಅಲೆದಾಟ ಕಡಿಮೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಕಾವಲಿಶಿವಪ್ಪ, ಕಾಂಗ್ರೆಸ್‌ ಮುಖಂಡ ಉಮೇಶ, ಕೋಗಳಿ ಮಂಜುನಾಥ ಮತ್ತು ಪೊಲೀಸ್‌ ಸಿಬ್ಬಂದಿ ಹಾಗೂ ಹಗಲು ವೇಷಗಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next