Advertisement

ತನ್ನ ಲೋಗೊ ಬದಲಾಯಿಸಿದ ‘ಕೂ’ ಆ್ಯಪ್  

07:53 PM May 14, 2021 | Team Udayavani |

ಇತ್ತೀಚೆಗಷ್ಟೇ ಜನಪ್ರಿಯತೆಗೆ ಬಂದ  ಸಾಮಾಜಿಕ ಜಾಲತಾಣವಾದ ಕೂ ಆ್ಯಪ್​ ತನ್ನ ಲೊಗೊವನ್ನು ಬದಲಾಯಿಸಿದೆ.

Advertisement

ಹೌದು, ಬೆಂಗಳೂರು ಮೂಲದ ಈ ಕೂ ಆ್ಯಪ್ ತನ್ನ ಲೋಗೊವನ್ನು ಬದವಾಣೆ ಮಾಡಿರುವುದಾಗಿ ನಿನ್ನೆ(ಗುರುವಾರ, ಮೇ.13) ತಿಳಿಸಿದೆ.

ಇದನ್ನೂ ಓದಿ : ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ, ಇಬ್ಬರು ಸಾವು, ಮೂವರು ಗಂಭೀರ

ಲೊಗೊ ಉದ್ಘಾಟಿಸಿ ಮಾತನಾಡಿದ​ ಆರ್ಟ್​​ ಆಫ್​ ಲಿವಿಂಗ್​​ ಸಂಸ್ಥಾಪಕರಾದ ರವಿಶಂಕರ್,​ ಸಾಮಾಜಿಕ ಸಂಪರ್ಕ ಮತ್ತು ಮಾಹಿತಿ ಹರಿವು ಸುಸಂಸ್ಕೃತ ಸಮಾಜದ ಚಿಹ್ನೆಗಳಲ್ಲಿ ಒಂದಾಗಿದೆ. ಕೂ ಆ್ಯಪ್​ ದೇಶ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಸುಲಭದಲ್ಲಿ ಸಂಪರ್ಕಿಸುತ್ತಿದೆ ಎಂದು ಹೇಳಿದ್ದಾರೆ.

ಆತ್ಮ ನಿರ್ಭರ ಭಾರತದ ಕನಸಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಮತ್ತು ಟ್ವಿಟರ್‌ಗೆ ಪರ್ಯಾಯವಾಗಿ ಈ ದೇಸೀ ಆ್ಯಪ್ ಕೂ ನನ್ನು ಕಳೆದ ಮಾರ್ಚ್ ನಲ್ಲಿ ಪರಿಚಯಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ತಮ್ಮ ಮಾಸಿಕ ‘ಮನದ ಮಾತು’ ಕಾರ್ಯಕ್ರಮದಲ್ಲಿ ಕನ್ನಡಿಗರೇ ರೂಪಿಸಿದ ಸಾಮಾಜಿಕ ಮಾಧ್ಯಮ ‘ಕೂ’ ಬಗ್ಗೆ ಉಲ್ಲೇಖಿಸಿರುವುದು ವಿಶೇಷ.

Advertisement

ಹನ್ನೊಂದೇ ತಿಂಗಳಲ್ಲಿ ಬಹುಭಾಷೆಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಪಡೆದು ಜನ ಪ್ರೀತಿ ಗಳಿಸಿದೆ.

ಇದನ್ನೂ ಓದಿ : ಕೋಲಾರದ ಮಾಲೂರಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ: ಅಶ್ವತ್ಥನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next