Advertisement

ಏಷ್ಯಾ ಪೆಸಿಫಿಕ್‌ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ಗಳಲ್ಲಿ ಸ್ಥಾನ ಪಡೆದ ‘ಕೂ’ಆಪ್ 

05:07 PM Nov 18, 2021 | Team Udayavani |

ಬೆಂಗಳೂರು: ಆಂಪ್ಲಿಟ್ಯೂಡ್ ರಚಿಸಿದಂತಹ ಉತ್ಪನ್ನ ವರದಿ 2021 ರ ಅನ್ವಯ ಏಷ್ಯಾ ಪೆಸಿಫಿಕ್ (APAC) ಪ್ರದೇಶದ ಭವಿಷ್ಯದ ಜನಪ್ರಿಯ 5 ಉತ್ಪನ್ನಗಳಲ್ಲಿ ಬೆಂಗಳೂರು ಮೂಲದ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ವೇದಿಕೆ ಕೂ ಅಪ್ಲಿಕೇಶನ್ ಸ್ಥಾನ ಪಡೆದಿದೆ.

Advertisement

APAC, US ಮತ್ತು EMEA ವಲಯದಾದ್ಯಂತ ಪ್ರತಿಷ್ಠಿತ ವರದಿಯಲ್ಲಿ ಸ್ಥಾನ ಪಡೆದ ಏಕೈಕ ಸಾಮಾಜಿಕ ಮಾಧ್ಯಮ ಇದಾಗಿದೆ. ಭಾರತದಿಂದ ಉಲ್ಲೇಖಿಸಲ್ಪಟ್ಟ ಕೇವಲ ಎರಡು ಬ್ರಾಂಡ್‌ಗಳಲ್ಲಿ ಕೂ ಕೂಡ ಒಂದಾಗಿದೆ (CoinDCX ಇನ್ನೊಂದು).

ಆಂಪ್ಲಿಟ್ಯೂಡ್‌ನ ಬಿಹೇವಿಯರಲ್ ನಕ್ಷೆಯು, ಡಿಜಿಟಲ್ ಕ್ರಿಯಾಶೀಲತೆ ರೂಪಿಸುವ ಭವಿಷ್ಯದ ಹಾಟೆಸ್ಟ್ ಡಿಜಿಟಲ್ ಉತ್ಪನ್ನಗಳ ಕುರಿತು ಮಾಹಿತಿ ನೀಡುತ್ತದೆ. ವರದಿಯಲ್ಲಿ, ‘ವಿಶಿಷ್ಟ ಪ್ರತ್ಯೇಕತೆಯನ್ನು ಹೊಂದಿರುವ ಸಾಮಾಜಿಕ ಜಾಲತಾಣ ವೇದಿಕೆ ಕೂ ಆ್ಯಪ್ ಭಾರತೀಯ ಬಳಕೆದಾರರನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಲಾಗಿದೆ’ ಎಂದು ವಿವರಿಸಲಾಗಿದೆ. ತಮ್ಮ ಮಾತೃಭಾಷೆಯಲ್ಲಿಯೇ ಮನದಾಳವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುವ ‘ಕೂ’ ವೇದಿಕೆಯು 100 ಕೋಟಿಗೂ ಹೆಚ್ಚು ಬಳಕೆದಾರರ ಆಯ್ಕೆಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ ಎಂದು ವರದಿಯಲ್ಲಿದೆ.

ಜನರು ತಮ್ಮದೇ ಸ್ಥಳೀಯ ಭಾಷೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ಮೇಡ್-ಇನ್-ಇಂಡಿಯಾ ಪ್ಲಾಟ್‌ಫಾರ್ಮ್‌ ಕೂ, ಅಪ್ಲಿಕೇಶನ್ ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು. ನಂತರದ 20 ತಿಂಗಳ ಅಲ್ಪಾವಧಿಯಲ್ಲಿ 1.5 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿರುವುದಲ್ಲದೇ, 9 ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಬಲಿಷ್ಠ ತಂತ್ರಜ್ಞಾನ, ಅನುವಾದದ ಅವಕಾಶ ಮುಂತಾದ ವಿಶಿಷ್ಟ ಆಯ್ಕೆ‌ಗಳನ್ನು ಬಳಕೆದಾರರಿಗೆ ಒದಗಿಸಿದ್ದು, ಮುಂದಿನ ಒಂದು ವರ್ಷದಲ್ಲಿ ಕೂ 10 ಕೋಟಿ ಡೌನ್‌ಲೋಡ್‌ಗಳನ್ನು ದಾಟುವ ನಿರೀಕ್ಷೆಯಿದೆ.

2021 ರ ಉತ್ಪನ್ನ ವರದಿಗೆ ಪ್ರತಿಕ್ರಿಯಿಸಿದ ಕೂ ಸಹ-ಸಂಸ್ಥಾಪಕ ಮತ್ತು ಸಿಇಒ, ಅಪ್ರಮೇಯ ರಾಧಾಕೃಷ್ಣ, “ಈ ಗೌರವಾನ್ವಿತ ಜಾಗತಿಕ ವರದಿಯಲ್ಲಿ ಕೂ ಅಪ್ಲಿಕೇಶನ್ ಅನ್ನು ಗುರುತಿಸಿರುವುದು, APAC ನ ಟಾಪ್ 5 ಹಾಟೆಸ್ಟ್ ಡಿಜಿಟಲ್ ಉತ್ಪನ್ನಗಳಲ್ಲಿ ಕೂ ಒಂದಾಗಿರುವುದು ಹೆಮ್ಮೆಯ ವಿಷಯ. ಭಾರತದಿಂದ ಗುರುತಿಸಿರುವ ಏಕೈಕ ಸಾಮಾಜಿಕ ಮಾಧ್ಯಮ ಆಗಿದ್ದೇವೆ. ಭಾರತದಿಂದ, ವಿಶ್ವಕ್ಕಾಗಿ ನಿರ್ಮಿಸಲಾಗುತ್ತಿರುವ ಬ್ರ್ಯಾಂಡ್‌ ಆದ ನಮಗೆ ಇದೊಂದು ಗಮನಾರ್ಹ ಸಾಧನೆಯಾಗಿದೆ. ಆಂಪ್ಲಿಟ್ಯೂಡ್‌ನ ಈ ವರದಿಯು ಡಿಜಿಟಲ್ ಜಗತ್ತಿನಲ್ಲಿ ಭಾಷಾ ಅಡೆತಡೆಗಳನ್ನು ಅಳಿಸಲು, ಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆಯ ನಡುವೆಯೂ ಜನರು ಪರಸ್ಪರ ಸಂಪರ್ಕಿಸಲು ಇನ್ನಷ್ಟು ಶ್ರಮಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ’ ಎಂದಿದ್ದಾರೆ.

Advertisement

ಆಂಪ್ಲಿಟ್ಯೂಡ್ ಎಂಬುದು ಕ್ಯಾಲಿಫೋರ್ನಿಯಾ ಮೂಲದ ಉತ್ಪನ್ನ ವಿಶ್ಲೇಷಣೆ ಮತ್ತು ಡಿಜಿಟಲ್ ಆಪ್ಟಿಮೈಸೇಶನ್ ಸಂಸ್ಥೆಯಾಗಿದೆ. ಈ ವರದಿಯು ‘ಶೀಘ್ರವಾಗಿ ಬೆಳೆಯುತ್ತಿರುವ ಉತ್ಪನ್ನಗಳನ್ನು’ ಆಯ್ಕೆ ಮಾಡುತ್ತದೆ. ‘ಭವಿಷ್ಯದ ಜನಪ್ರಿಯ ಕಂಪನಿ’ಗಳನ್ನು ಗುರುತಿಸಲು ತಿಂಗಳ ಬಳಕೆದಾರರ ದತ್ತಾಂಶವನ್ನು ಇದು ವಿಶ್ಲೇಷಿಸುತ್ತದೆ. ಅತ್ಯುತ್ತಮ ಡಿಜಿಟಲ್ ಅನುಭವವನ್ನು ಒದಗಿಸುವ ಕಂಪನಿಗಳ ತಿಂಗಳ ಬಳಕೆದಾರರ ಹೆಚ್ಚಳವನ್ನು ಪರಿಗಣಿಸಿ ಆಂಪ್ಲಿಟ್ಯೂಡ್ ವರದಿಗಳನ್ನು ನೀಡುತ್ತದೆ. ಜೂನ್ 2020 ರಿಂದ ಜೂನ್ 2021 ರವರೆಗಿನ ಒಟ್ಟು 13-ತಿಂಗಳ ಅವಧಿಯಲ್ಲಿ ಸಕ್ರಿಯ ಬಳಕೆದಾರರ ಒಟ್ಟು ಸಂಖ್ಯೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಗುರುತಿಸಿ ಕೂ ಅಪ್ಲಿಕೇಶನ್ ಅನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೂ ಬಗ್ಗೆ: ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಗಿದ್ದು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next