Advertisement

ಚುನಾವಣಾ ಸಮಯದಲ್ಲಿ ಕೂ ಅಪ್ಲಿಕೇಶನ್ ನಿಂದ ‘ಸ್ವಯಂಪ್ರೇರಿತ ನೀತಿ ಸಂಹಿತೆ’

04:46 PM Jan 13, 2022 | Team Udayavani |

ಬೆಂಗಳೂರು: ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸುರಕ್ಷಿತ ಸಂವಾದಗಳನ್ನು ನಡೆಸುವತ್ತ ಹೆಜ್ಜೆ ಹಾಕುತ್ತಿರುವ ಕೂ (Koo) ಆ್ಯಪ್ ‘ಸ್ವಯಂಪ್ರೇರಿತ ನೀತಿ ಸಂಹಿತೆ’ಯನ್ನು ಅಳವಡಿಸಿಕೊಂಡಿದೆ.

Advertisement

ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ನಿಂದ ರಚಿಸಲ್ಪಟ್ಟ ಸ್ವಯಂಪ್ರೇರಿತ ನೀತಿ ಸಂಹಿತೆ 2019 ರ ಸಾರ್ವತ್ರಿಕ ಚುನಾವಣೆಗೂ ಮುನ್ನ IAMAI ಭಾರತದ ಚುನಾವಣಾ ಆಯೋಗಕ್ಕೆ ಮೊದಲು ಪ್ರಸ್ತುತಪಡಿಸಿತು. ಚುನಾವಣಾ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ನ್ಯಾಯಯುತ ಮತ್ತು ನೈತಿಕ ಬಳಕೆಯನ್ನು ಈ ನೀತಿ ಸಂಹಿತೆ ಬಯಸುತ್ತದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಫೆಬ್ರವರಿ ಮತ್ತು ಮಾರ್ಚ್ 2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೂ ಮುನ್ನ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳುವ ಮೂಲಕ, ಕೂ ಆ್ಯಪ್ ಬಳಕೆದಾರರಿಗೆ ಸುರಕ್ಷಿತ ಮತ್ತು ನ್ಯಾಯಯುತ ಚುನಾವಣೆಯ ಕುರಿತು ಬದ್ಧತೆಯ ಭರವಸೆ ನೀಡುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ತನ್ನ ಜವಾಬ್ದಾರಿಯನ್ನು ಖಾತ್ರಿಪಡಿಸುತ್ತದೆ.

ಅಪ್ಪಟ ಭಾರತೀಯ ವೇದಿಕೆಯಾದ ಕೂ ಭಾರತೀಯರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತದೆ. ಯಾವುದೇ ರೀತಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಭಾರತದ ಚುನಾವಣಾ ಆಯೋಗವು ನೀಡಿದ ನಿರ್ದೇಶನಗಳನ್ನು ಅನುಸರಿಸುತ್ತದೆ. ಈಕುರಿತು ತನ್ನ ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ಮತ್ತು ಚುನಾವಣೆಯ ಕುರಿತು ಅವರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ.

ಪ್ರಮುಖ ಸಾಮಾಜಿಕ ಮಧ್ಯವರ್ತಿ ವೇದಿಕೆಯಾಗಿ ನಿಗದಿತ ಅವಧಿಯಲ್ಲಿ ನಿಂದನೀಯ ಮತ್ತು ದ್ವೇಷಪೂರಿತ ವಿಷಯದಿಂದ ಬಳಕೆದಾರರನ್ನು ರಕ್ಷಿಸಲು ಕೂ ಕುಂದುಕೊರತೆ ಪರಿಹಾರ ತಂಡವನ್ನು ಹೊಂದಿದೆ. ಜೊತೆಗೆ ಜವಾಬ್ದಾರಿಯುತ ಆನ್‌ಲೈನ್‌ ನಡವಳಿಕೆಯನ್ನು ಬಳಕೆದಾರರಿಗೆ ತಿಳಿಸುತ್ತದೆ. ಬಹುಭಾ‍ಷಾ ವೇದಿಕೆಯಾಗಿರುವ ಕೂ ಬಳಕೆದಾರರಿಗೆ 10 ಭಾಷೆಗಳಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕೂ ಕಂಪ್ಲಾಯನ್ಸ್ ನೀತಿಯನ್ನು ಜಾರಿಗೊಳಿಸಿದ ಮೊದಲ ಭಾರತೀಯ ಸಾಮಾಜಿಕ ವೇದಿಕೆಯಾಗಿದ್ದು, ಚಾಲ್ತಿಯಲ್ಲಿರುವ ನಿಯಂತ್ರಕ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಂಪ್ಲಾಯನ್ಸ್ ನಿಯಮಗಳನ್ನು ನಿಯಮಿತವಾಗಿ ಒದಗಿಸುತ್ತದೆ. ಮತ್ತು ಅಸಮಂಜಸ ವಿಷಯಗಳನ್ನು ಪುರ್ವಭಾವಿಯಾಗಿ ನಿಯಂತ್ರಿಸುತ್ತದೆ.

ಈ ಕುರಿತು ವಿವರಿಸಿದ ಕೂ ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, “ಇಂದು, ಸಾಮಾಜಿಕ ಮಾಧ್ಯಮವು ಜನರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚುನಾವಣಾ ಪ್ರಕ್ರಿಯೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವಲ್ಲಿ ಇದು ಸಹಕಾರಿಯಾಗಬಲ್ಲದು. ಅಲ್ಲದೇ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಭಾವ ಬೀರುತ್ತದೆ. ಪಕ್ಷಪಾತವಿಲ್ಲದ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ, IAMAI ರಚಿಸಿದ ಸ್ವಯಂಪ್ರೇರಿತ ನೀತಿ ಸಂಹಿತೆಯನ್ನು ಕೂ ಅನೂಚಾನವಾಗಿ ಪಾಲಿಸುತ್ತದೆ. ಪ್ರಜಾಪ್ರಭುತ್ವದ ವೈಶಿಷ್ಟ್ಯವಾದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವಲ್ಲಿ ಸಹಕರಿಸುತ್ತದೆ. ನಮ್ಮ ಅತ್ಯುತ್ತಮ ಮತ್ತು ಕುಂದುಕೊರತೆ ಪರಿಹಾರದ ಕಾರ್ಯವಿಧಾನಗಳು ಬಳಕೆದಾರರಿಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಅವರ ಸಮುದಾಯಗಳೊಂದಿಗೆ ಅವರ ಆಯ್ಕೆಯ ಭಾಷೆಯಲ್ಲಿ ಸಂಪರ್ಕ ಸಾಧಿಸಲು ಸುರಕ್ಷಿತ ಆನ್‌ಲೈನ್ ಪರಿಸರವನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ ನಮ್ಮ ಬಳಕೆದಾರರಿಗೆ ಸುರಕ್ಷಿತ ಮತ್ತು ಗಾಢ ಭಾಷಾ ಅನುಭವವನ್ನು ಒದಗಿಸಲು ಉತ್ತಮ ಅವಕಾಶ ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next