Advertisement

Konkani- Saraswat : ಕೊಂಕಣಿ, ಸಾರಸ್ವತ ವಾಣಿಜ್ಯೋದ್ಯಮಿಗಳ ಸಮಾವೇಶ ಯಶಸ್ವಿ

01:02 AM Oct 11, 2023 | Team Udayavani |

ಬೆಂಗಳೂರು: ಕೊಂಕಣಿ ಹಾಗೂ ಸಾರಸ್ವತ ಸಮುದಾಯದಲ್ಲಿ ಹೊಸ ಉದ್ಯಮಿಗಳ ಸೃಷ್ಟಿ ಹಾಗೂ ಉತ್ತೇಜನ ನೀಡಲು ಬೆಂಗಳೂರಿನಲ್ಲಿ ನಡೆದ ವಾಣಿಜ್ಯೋದ್ಯಮಿಗಳ ಎರಡು ದಿನಗಳ ಸಮಾವೇಶಕ್ಕೆ ಸೆಂಚುರಿ ಗ್ರೂಪ್‌ನ ಡಾ| ಪಿ. ದಯಾನಂದ ಪೈ ಚಾಲನೆ ನೀಡಿದರು.

Advertisement

ಅವರು ಮಾತನಾಡಿ, ಸಂಸ್ಥೆಯನ್ನು ಆರ್ಥಿಕವಾಗಿ ಸುದೃಢವಾಗಿ ಬೆಳೆಸಲು ಮತ್ತು ಉದ್ಯಮದಲ್ಲಿ ನಾವೀನ್ಯತೆಯನ್ನು ಕಾಪಾಡಿಕೊಂಡು ಮುನ್ನಡೆ ಸುವುದಕ್ಕೆ ಹೆಚ್ಚು ಒತ್ತು ನೀಡಬೇಕು. ಉದ್ಯಮ ಎಂಬುದು ನಿಂತ ನೀರಲ್ಲ, ಅದು ಸದಾ ಬೆಳೆಯುತ್ತಿರುತ್ತದೆ. ಅದಕ್ಕೆ ಪೂರಕವಾಗಿ ನಮ್ಮ ಯೋಜನೆಯನ್ನು ರೂಪಿಸಿ ಅಳವಡಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದು ನುಡಿದರು.

ಯುಕೆ ಆ್ಯಂಡ್‌ ಕಂಪನಿಯ ಸ್ಥಾಪಕ ಕೆ. ಉಲ್ಲಾಸ್‌ ಕಾಮತ್‌ ಮಾತನಾಡಿ, ಆವಿಷ್ಕಾರ, ಸಹಯೋಗ ಮತ್ತು ವ್ಯಾಪಾರ ಶ್ರೇಷ್ಠತೆಯನ್ನು ಬೆಳೆಸುವುದು ಇಂದಿನ ಆವಶ್ಯಕತೆಯಾಗಿದೆ. ಕೊಂಕಣಿ ಹಾಗೂ ಸಾರಸ್ವತ ಯುವ ಸಮುದಾಯವು ಉದ್ಯೋಗ ಅರಸಿ ಹೋಗುವ ಬದಲು ಅವರೇ ಕಂಪನಿ ಹುಟ್ಟು ಹಾಕಿ ಉದ್ಯೋಗ ಸೃಷ್ಟಿಸುವಂತಾಗಬೇಕು. ಹಿರಿಯರು ಸ್ಥಾಪಿಸಿದ ಕಂಪೆನಿಯನ್ನು ಮುಂದಿನ ಪೀಳಿಗೆ ಯಶಸ್ವಿಯಾಗಿ ಕೊಂಡೊಯ್ಯುವಂತಾಗುವುದೇ ಸಮಾವೇಶದ ಮೂಲ ಉದ್ದೇಶ ಎಂದು ಹೇಳಿದರು.

ಮಣಿಪಾಲ್‌ ಗ್ಲೋಬಲ್‌ ಎಜು ಕೇಷನ್‌ನ ಟಿ.ವಿ. ಮೋಹನ್‌ದಾಸ್‌ ಪೈ, ಸುಸ್ಥಿರ ಬೆಳವಣಿಗೆ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯ ಪ್ರಾಮು ಖ್ಯತೆಯನ್ನು ವಿವರಿಸಿದರು. ಸಾರಸ್ವತ್‌ ಚೇಂಬರ್‌, ವಿಶ್ವ ಕೊಂಕಣಿ ಕೇಂದ್ರ, ಯುಕೆ ಆ್ಯಂಡ್‌ ಕೋ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.

43 ಉದ್ಯಮಿಗಳಿಗೆ ಪುರಸ್ಕಾರ
ಔದ್ಯೋಗಿಕ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ 43 ಯಶಸ್ವಿ ವಾಣಿಜ್ಯೋದ್ಯಮಿಗಳಿಗೆ ಉದ್ಯಮ ಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಕರ್ತ ರಾಹುಲ್‌ ಲಾಡ್‌, ಯೂತ್‌ ಆಫ್‌ ಜಿಎಸ್‌ಐ ಹಾಗೂ ಮುಂಬಯಿಯ ಜಿಎಸ್‌ಬಿ ಸೇವಾ ಮಂಡಲ್‌ಗೆ ವಿಶೇಷ ಪುರಸ್ಕಾರ ನೀಡಲಾಯಿತು.

Advertisement

ಉಪನ್ಯಾಸ, ಮಾಹಿತಿ
ಕುಟುಂಬ ವ್ಯವಹಾರದಲ್ಲಿ ಸಂಪ್ರದಾಯಗಳ ಸಮತೋಲನ ಮತ್ತು ಆಕಾಂಕ್ಷೆಗಳ ಹೆಚ್ಚುಸುವಿಕೆ ಎಂಬ ವಿಚಾರದ ಕುರಿತು ಟಾಟಾ ಪ್ರಾಜೆಕ್ಟ್‌ನ ವ್ಯವಸ್ಥಾಪಕ ನಿರ್ದೇಶಕ ವಿನಾಯಕ್‌ ಪೈ, ಕೌಟುಂಬಿಕ ಉದ್ಯಮದಲ್ಲಿ ವೃತ್ತಿಪರತೆ ಎಂಬ ವಿಚಾರದ ಕುರಿತು ರಿಲಯೆನ್ಸ್‌ ರಿಟೈಲ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ರಾಜೇಂದ್ರ ಕಾಮತ್‌ ಉಪನ್ಯಾಸ ನೀಡಿದರು. 3 ವನ್‌4 ಕ್ಯಾಪಿಟಲ್‌ನ ಸಂಸ್ಥಾಪಕ ಪ್ರಣವ್‌ ಪೈ, ಆಭರಣ ಟೆ„ಮ್‌ಲೆಸ್‌ ಜುವೆಲರಿಯ ಡಾ| ಪ್ರತಾಪ್‌ ಕಾಮತ್‌, 99 ಗೇಮ್ಸ್‌ನ ರೋಹಿತ್‌ ಭಟ್‌ ಮಾಹಿತಿ ನೀಡಿದರು. ಯುಕೆ ಆ್ಯಂಡ್‌ ಕೋ ಸಹ-ಸಂಸ್ಥಾಪಕ‌ ಸಿದಾರ್ಥ್ ಪೈ, ಪ್ಯಾನಲ್‌ ಡಿಸ್ಕಷನ್‌ ನಿರ್ವಹಿಸಿದ್ದು, ಇದರಲ್ಲಿ ಸೆಂಚುರಿ ಗ್ರೂಪ್‌ನ ರವೀಂದ್ರ ಪೈ, ಆಭರಣ ಟೈಮ್‌ಲೆಸ್‌ ಜುವೆಲರಿಯ ಡಾ| ಪ್ರತಾಪ್‌ ಕಾಮತ್‌, ಎಕ್ಸ್‌ಪರ್ಟ್‌ ಸಮೂಹ ಶಿಕ್ಷಣ ತಾಂತ್ರಿಕ ವಿಭಾಗದ ನಿರ್ದೇಶಕ ಅಂಕುಶ್‌ ಎನ್‌. ನಾಯಕ್‌, ಹ್ಯಾಂಗೋ ಐಸ್‌ ಕ್ರೀಮ್ಸ್‌ನ ಸಂಕೀಣ್‌ì ಪೈ, ಶ್ರೀನಿವಾಸ್‌ ಪೈ ಭಾಗವಹಿಸಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಜಿ. ನಂದಗೋಪಾಲ್‌ ಶೆಣೆ„ ಹಾಗೂ ಸಾರಸ್ವತ್‌ ಚೇಂಬರ್‌ನ ಸ್ಥಾಪಕ ನಿರ್ದೇಶಕ ಸಿದಾರ್ಥ್ ಸಿನಕರ್‌ ಸ್ವಾಗತಿಸಿದರು. ಸಾರಸ್ವತ್‌ ಚೇಂಬರ್‌ನ ನಿರ್ದೇಶಕ ಪ್ರವೀಣ್‌ ಕಾಕೊಡೆ ವಂದಿಸಿದರು. ಮಂಗಳೂರು ಗಣೇಶ್‌ ಬೀಡೀಸ್‌ನ ಡಾ| ಎಂ. ಜಗನ್ನಾಥ ಶೆಣೆ„, ಪ್ರಚೇತಾಸ್‌ ಕ್ಯಾಪಿಟಲ್‌ ಪ್ರೈವೇಟ್‌ ಲಿಮಿಟೆಡ್‌ನ‌ ಪ್ರವೀಣ್‌ ಕಡ್ಲೆ, ಬಾಲಾಜಿ ಭಟ್‌, ಅನುಪಮ್‌ ನಾಯಕ್‌ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹುಬ್ಬಳ್ಳಿ, ಗೋವಾ, ಕೇರಳ, ಮುಂಬಯಿ ಸೇರಿದಂತೆ ದೇಶದ ವಿವಿಧ ಭಾಗದ ಕೊಂಕಣಿ ಹಾಗೂ ಸಾರಸ್ವತ ಸಮುದಾಯದಿಂದ 500ಕ್ಕೂ ಅಧಿಕ ವಾಣಿಜ್ಯೋದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next