Advertisement

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

10:31 AM Nov 28, 2024 | Team Udayavani |

ಮಹಾನಗರ: ಖ್ಯಾತ ಕೊಂಕಣಿ ಚಲನಚಿತ್ರ ನಿರ್ದೇಶಕ ಡಾ| ಕೆ.ರಮೇಶ್‌ ಕಾಮತ್‌ ಅವರ ಕೊಂಕಣಿ ಚಲನಚಿತ್ರ “ಅಂತ್ಯಾರಂಭ’
ನ. 28ರಂದು ಸಂಜೆ 4ಕ್ಕೆ ಮಂಗಳೂರಿನಲ್ಲಿ ಭಾರತ್‌ ಸಿನೆಮಾ-ಭಾರತ್‌ ಮಾಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಈ ಚಲನಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.

Advertisement

ಸಾರಸ್ವತ ಕೊಂಕಣಿ ಭಾಷೆಯಲ್ಲಿ ಈವರೆಗೆ ಬಂದಿರುವ ಚಲನಚಿತ್ರಗಳು ಕೇವಲ ಎಂಟು. ಅದರಲ್ಲಿ ನಾಲ್ಕು ಚಿತ್ರ ಡಾ| ರಮೇಶ್‌
ಕಾಮತ್‌ ಅವರದು. 1980-ಜನಮನ, 2016- ಆವೈಜಾಸಾ, 2019-ಅಪ್ಸರಾಧಾರ ಮತ್ತು ಈಗ 4ನೇ ಕೊಂಕಣಿ ಸಿನೆಮಾ ಅಂತ್ಯಾರಂಭ ತಯಾರಿಸಲಾಗಿದೆ.

ಚಿತ್ರದ ಪ್ರೀಮಿಯರ್‌ ಶೋ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಡಾ| ದಯಾನಂದ ಪೈ ಅಧ್ಯಕ್ಷತೆ ಮತ್ತು ಪ್ರಖ್ಯಾತ ನಟ ಪ್ರಕಾಶ್‌ ಬೆಳವಾಡಿ ಅವರು ಭಾಗವಹಿಸಿದ್ದರು. ಆದಿತ್ಯ ಸಿನೆ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಕಿರಣ್ಮಯಿ ಕಾಮತ್‌ ಈ ಸಿನೆಮಾವನ್ನು
ನಿರ್ಮಿಸಿದ್ದಾರೆ.

“ಅಂತ್ಯಾರಂಭ’ ತತ್ವಾಧಾರಿತ ಕಲಾತ್ಮಕ ಚಿತ್ರ. ಜೀವನದ ವಿವಿಧ ಹಂತದಲ್ಲಿ ಮಾನವನಿಗೆ ಹಲವಾರು ಕಷ್ಟ-ಸಂಕಷ್ಟ ಎದುರಾಗುತ್ತವೆ. ಆ ಕಷ್ಟಕ್ಕೆ ಮಾನವ ಹೆದರಿ ಅದೇ ಜೀವನದ ಅಂತ್ಯ ಎಂದು ಭಾವಿಸುತ್ತಾನೆ. ಆದರೆ ಈ ಸಿನೆಮಾ ಕಥೆಯ ಮೂಲಕ ಜೀವನ ಪಯಣದಲ್ಲಿ ಅಂತ್ಯ ಎಂಬುದೇ ಇಲ್ಲ.

Advertisement

ಅದು ಹೊಸ ಆರಂಭಕ್ಕೆ ನಾಂದಿ ಹಾಡುತ್ತದೆ ಎಂಬ ಬಗ್ಗೆ ಕಥೆಯ ಸಿನೆಮಾ ಇದಾಗಿದೆ ಎಂದು ಪ್ರಕಟನೆ ತಿಳಿಸಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಡಾ| ರಮೇಶ್‌ ಕಾಮತ್‌, ಪ್ರತೀಕ್ಷಾ ಕಾಮತ್‌, ವಿಠೊಭ ಭಂಡಾರ್ಕರ್‌, ಸ್ಟಾನಿ ಆಲ್ವಾರೀಸ್‌, ಉದಯ ಜಾದೂಗಾರ್‌ ಮೊದಲಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next