Advertisement
ಕೊಂಕಣಿ ಭವನ ನಿರ್ಮಾಣಕ್ಕೆ ಮಂಗ ಳೂರಿನ ಉರ್ವಸ್ಟೋರ್‌ನಲ್ಲಿ ಅಂಬೇಡ್ಕರ್ ಭವನದ ಸಮೀಪ 35 ಸೆಂಟ್ಸ್ ಸರಕಾರಿ ಜಾಗ ಮಂಜೂರಾಗಿದ್ದು, ಅಲ್ಲಿ ಭವನ ನಿರ್ಮಾಣಕ್ಕಾಗಿ ಗಿಡಗಂಟಿಗಳನ್ನು ಕಡಿದು ಸ್ವತ್ಛಗೊಳಿಸುವ ಕಾಮಗಾರಿ ನಡೆದಿದೆ. ಈ ಯೋಜನೆಗೆ 5 ಕೋಟಿ ರೂ. ಅನು ದಾನ ರಾಜ್ಯ ಸರಕಾರದಿಂದ 2019ರಲ್ಲಿಯೇ ಮಂಜೂರಾಗಿದ್ದು, ಈ ಪೈಕಿ 3 ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಗಳ ಅನುಮತಿ ಈಗಾಗಲೇ ಲಭಿಸಿದೆ.
ಕೊಂಕಣಿ ಭವನ ಕಟ್ಟಡವು ನೆಲ ಮಹಡಿ ಮತ್ತು ಎರಡು ಮಹಡಿಗಳನ್ನು ಹೊಂದಿರುತ್ತದೆ. ನೆಲ ಮಹಡಿಯಲ್ಲಿ ವಾಹನ ಪಾರ್ಕಿಂಗ್, 1ನೇ ಮಾಳಿಗೆಯಲ್ಲಿ ಅಕಾಡೆಮಿಯ ಕಚೇರಿ ಮತ್ತು ಗ್ರಂಥಾಲಯ, 2ನೇ ಮಾಳಿಗೆಯಲ್ಲಿ ಸಭಾಂಗಣ ಮತ್ತು ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಇರುತ್ತದೆ. ಮ್ಯೂಸಿ ಯಂನಲ್ಲಿ 42 ಕೊಂಕಣಿ ಸಮುದಾಯಗಳ ವಿವಿಧ ಸಂಸ್ಕೃತಿಗೆ ಸಂಬಂಧಿಸಿದ ಹಾಗೂ ಬಳಕೆಯ ವಸ್ತುಗಳನ್ನು ಇರಿಸಲಾಗುತ್ತದೆ. ಕಟ್ಟಡದ ಒಟ್ಟು ವಿಸ್ತೀರ್ಣ 4735 ಚದರ ಅಡಿ (1435.16 ಚ. ಮೀ.). ಶೀಘ್ರದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರಿಂದ ಕೊಂಕಣಿ ಭವನ ನಿರ್ಮಾಣದ ಶಿಲಾನ್ಯಾಸವನ್ನು ನೇರವೇರಿಸಲಾಗುವುದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ್ ಪೈ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕೊಂಕಣಿ ಭವನ ನಿರ್ಮಾಣ ಯೋಜನೆ ಸಾಕಾರಗೊಳ್ಳಲು ಸಚಿವರಾದ ವಿ. ಸುನಿಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ, ಸಿ.ಟಿ. ರವಿ, ಜಿಲ್ಲೆಯ ಇತರ ಜನಪ್ರತಿನಿಧಿಗಳು ಸಹಕರಿಸಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿಯೇ ಈ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸುವ ಉದ್ದೇಶ ಹೊಂದಿದ್ದೇನೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
Related Articles
ನಾವು ಆಧಿಕಾರಕ್ಕೆ ಬಂದಾಗ ಅಕಾಡೆಮಿಗೆ 25 ವರ್ಷಗಳಾಗಿದ್ದು, ಇದೀಗ 27 ವರ್ಷಗಳಾಗಿವೆ. ಅಕಾಡೆಮಿಯ ಕಚೇರಿ ಈಗಲೂ ಬಾಡಿಗೆ ಕಟ್ಟಡದಲ್ಲಿದೆ. ಅಲ್ಲಿ ಸೀಮಿತ ಸ್ಥಳಾವಕಾಶದಲ್ಲಿ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟ ಸಾಧ್ಯ. ಹೊಸ ಕಟ್ಟಡದಲ್ಲಿ ವಿಶಾಲವಾದ ಸಭಾಂಗಣ ಇದ್ದು, ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ. ಕೊಂಕಣಿ ಭವನ ನಿರ್ಮಾಣ ಆಗುವುದರೊಂದಿಗೆ ಕೊಂಕಣಿಯ 42 ಜಾತಿ- ಸಮುದಾಯಗಳ ಕನಸು ನನಸಾಗಲಿದೆ.
– ಡಾ| ಜಗದೀಶ್ ಪೈ, ಕೊಂಕಣಿ ಅಕಾಡೆಮಿ ಅಧ್ಯಕ್ಷರು
Advertisement
– ಹಿಲರಿ ಕ್ರಾಸ್ತಾ