Advertisement

ಕೈ ಮುಗಿತೀವಿ, ನಮ್ಮೂರಿಗೆ ಬರಬೇಡ್ರಪ್ಪಾ

05:52 PM Apr 26, 2020 | Naveen |

ಕೊಂಡ್ಲಹಳ್ಳಿ: ಆಂಧ್ರಪ್ರದೇಶದಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು. ಅಲ್ಲಿನ ಜನರು ಗಡಿ ಭಾಗದ ಗ್ರಾಮಗಳಿಗೆ ಆಗಮಿಸುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

Advertisement

ಕೃಷಿ ಪರಿಕರ, ದಿನಸಿ, ತರಕಾರಿ ಮಾರಾಟ, ಖರೀದಿ ಸೇರಿದಂತೆ ಹಲವು ಚಟುವಟಿಕೆಗಳಿಗಾಗಿ ಆಂಧ್ರದವರು ಕರ್ನಾಟಕಕ್ಕೆ, ಇಲ್ಲಿನವರು ಅಲ್ಲಿಗೆ ಭೇಟಿ ನೀಡುವುದು ವಾಡಿಕೆಯಾಗಿತ್ತು. ಆದರೆ ಕೋವಿಡ್‌-19 ವೈರಸ್‌ ಕಾಟ ಎರಡೂ ರಾಜ್ಯಗಳ ಜನರ ನಡುವಿನ ಬಾಂಧವ್ಯಕ್ಕೆ ಅಡ್ಡಿಯನ್ನುಂಟು ಮಾಡಿದೆ. ಆಂಧ್ರಕ್ಕೆ ಹೋದ ಸ್ನೇಹಿತರು ಹಾಗೂ ಸಂಬಂ ಧಿಕರಿಗೆ ಸದ್ಯಕ್ಕೆ ಊರಿಗೆ ಬರಬೇಡಿ ಎಂದು ಗಡಿ ಭಾಗ ಕೊಂಡ್ಲಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಜನರು ಮನವಿ ಮಾಡುತ್ತಿದ್ದಾರೆ.

ಹಿಂದೆಲ್ಲ ಆಂಧ್ರದ ಜನ ಬಂದರೆ ವಾತ್ಸಲ್ಯದಿಂದ ಕಾಣುತ್ತಿದ್ದ ನಮ್ಮವರು, ಈಗ ಅವರನ್ನು ಕಂಡರೂ ಕಾಣದಂತೆ ಮರೆಯಾಗುತ್ತಿದ್ದಾರೆ. ನಿಮಗೆ ಕೈ ಮುಗೀತಿವಿ, ನಮ್ಮೂರಿಗೆ ಬರಬೇಡಿ ಎಂದು ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ. ಆಂಧ್ರದ ಜನರು ದಿನಸಿ ಮತ್ತಿತರ ವಸ್ತುಗಳ ಖರೀದಿಗೆ ಬೆಳಗಾಗುವುದರೊಳಗೆ ಬೈಕ್‌, ಆಟೋ ಇತರೆ ವಾಹನಗಳಲ್ಲಿ ಬರುತ್ತಿರುವುದು ತಲೆನೋವಿಗೆ ಕಾರಣವಾಗಿದೆ. ಆಂಧ್ರದವರು ಈಸಲು ಹೊಸಹಳ್ಳಿ ಸಂಪರ್ಕ ರಸ್ತೆಯಿಂದ ಕೊಂಡ್ಲಹಳ್ಳಿಗೆ ಬರುತ್ತಾರೆ. ನೆರೆ ರಾಜ್ಯದ ಜನರ ಆಗಮನವನ್ನು ತಡೆಗಟ್ಟಲು ಗಡಿ ಭಾಗದಲ್ಲಿನ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯನ್ನು ಬಿಗಿಗೊಳಿಸಿ ಅಲ್ಲಿನವರು ಇಲ್ಲಿಗೆ ಬಾರದಂತೆ ನೋಡಿಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next