Advertisement

ಶ್ರಮದಾನದ ಮೂಲಕ ಬಾವಿ ಸಿದ್ಧ

01:05 AM May 21, 2020 | Sriram |

ಉಳ್ಳಾಲ: ಕೊಣಾಜೆ ಗ್ರಾಮದ ಗುರುಮೇರು ಪ್ರದೇಶದ ಯುವಕರ ತಂಡವೊಂದು ಬಾವಿ ಕೊರೆದು ಮಾದರಿಯಾಗಿದೆ. ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ನೂತನ ಬಾವಿಯಿಂದಾಗಿ ಹಲವು ಮನೆಗಳಿಗೆ ನೀರು ದೊರೆಯಲಿದೆ.

Advertisement

ಇದೇ ಯುವಕರ ತಂಡ ಇತ್ತೀಚೆಗೆ ಸ್ವಂತ ದುಡ್ಡಿನಲ್ಲಿ ಗುರುಮೇರು-ಕೊಣಾಜೆ ಅಣ್ಣೆರೆಪಾಲು ಸಂಪರ್ಕ ರಸ್ತೆಯನ್ನು ನಿರ್ಮಿ ಸಿತ್ತು. ಕೊಣಾಜೆ ಗುರುಮೇರು ನಿವಾಸಿಗಳಾದ ದೀಕ್ಷಿತ್‌ ಶೆಟ್ಟಿಗಾರ್‌, ಕಮಲಾಕ್ಷ ಶೆಟ್ಟಿಗಾರ್‌, ಪ್ರಶಾಂತ್‌, ಪ್ರಸಾದ್‌, ಯಶವಂತ್‌, ರಾಜೇಶ್‌, ಚಂದ್ರಶೇಖರ್‌ ಈ ತಂಡದಲ್ಲಿದ್ದಾರೆ. ಏಳು ದಿನ ಸಂಜೆ 4ರಿಂದ ರಾತ್ರಿ 12ರ ವರೆಗೆ ಶ್ರಮದಾನ ನಡೆಸಿದ್ದು, ಒಂಬತ್ತು ಅಡಿ ಸುತ್ತಳತೆಯ 20 ಅಡಿ ಆಳದ ಬಾವಿ ಸಿದ್ಧವಾಗಿದೆ. ಸುಮಾರು ಒಂದೂವರೆ ಅಡಿ ನೀರು ದೊರೆಯುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next