Advertisement

ಯಲಾ ಕುನ್ನಿ: ಕೋಮಲ್‌ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

01:27 PM Mar 11, 2023 | Team Udayavani |

ನಟ ಕೋಮಲ್‌ ಕುಮಾರ್‌ ಮತ್ತೆ ನಟನೆಗೆ ವಾಪಾಸ್‌ ಆಗಿರುವುದು ನಿಮಗೆ ಗೊತ್ತೇ ಇದೆ. ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ಬಿಝಿಯಾಗಿರುವ ಕೋಮಲ್‌ ಅವರ ಹೊಸ ಚಿತ್ರದ ಟೈಟಲ್‌ ಅನೌನ್ಸ್‌ ಆಗಿದೆ.

Advertisement

ಚಿತ್ರಕ್ಕೆ “ಯಲಾ ಕುನ್ನಿ’ ಎಂದು ಟೈಟಲ್‌ ಇಡಲಾಗಿದ್ದು, “ಮೇರಾ ನಾಮ್‌ ವಜ್ರಮುನಿ’ ಎಂಬ ಅಡಿಬರಹವಿದೆ. ನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಬೈಗುಳವಾಗಿ ಹೆಚ್ಚು ಬಳಸುತ್ತಿದ್ದ ಸಂಭಾಷಣೆ ಯಲಾ ಕುನ್ನಿ. ಈ ಪದವನ್ನೆ ಚಿತ್ರದ ಶೀರ್ಷಿಕೆಯಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಸೌಭಾಗ್ಯ ಸಿನಿಮಾಸ್‌ ಲಾಂಛನದಲ್ಲಿ ಮಹೇಶ್‌ ಗೌಡ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎನ್‌.ಆರ್‌. ಪ್ರದೀಪ ನಿರ್ದೇಶಿಸುತ್ತಿದ್ದಾರೆ. ಓಂ ಪ್ರಕಾಶ್‌ ರಾವ್‌, ಮುಸ್ಸಂಜೆ ಮಹೇಶ್‌ ಜೊತೆ ಕೆಲಸ ಮಾಡಿರುವ ಅನುಭವ ಪ್ರದೀಪ ಅವರಿಗಿದ್ದು, ಇದು ಅವರ ಚೊಚ್ಚಲ ಸಿನಿಮಾ.

ಇದು 1981ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಹಳ್ಳಿ ಮತ್ತು ದೇವಸ್ಥಾನದ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

ಚಿತ್ರದಲ್ಲಿ ವಜ್ರಮುನಿಯಾಗಿ ಕೋಮಲ್‌ ರೆಟ್ರೋಲುಕ್‌ನಲ್ಲಿ ಕಮಾಲ್‌ ಮಾಡಲಿದ್ದಾರೆ. ಚಿತ್ರದಲ್ಲಿ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್‌ ಅವರ ಕಿರಿಯ ಮಗ ಯತಿರಾಜ್‌ ಹಾಗೂ ಫ್ರೆಂಚ್‌ ಬಿರಿಯಾನಿ ಖ್ಯಾತಿಯ ಮಹಾಂತೇಶ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಚಿತ್ರಕ್ಕೆ ಧರ್ಮ ವಿಶ್‌ ಸಂಗೀತ, ಉದಯ್‌ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್‌ ಕುಮಾರ್‌ ಅವರ ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next