Advertisement

ಕೋಳೂರು ಸಾವಿರದ ಸಂಭ್ರಮದ ಸುಗ್ಗಿ ಆಚರಣೆ : ಫಲ್ಖುಣಿಯಲ್ಲಿ ರಾಟವಾಣ ಉತ್ಸವ

08:07 PM May 06, 2023 | Team Udayavani |

ಕೊಟ್ಟಿಗೆಹಾರ: ಫಲ್ಗುಣಿಯ ಕೋಳೂರು ಸಾವಿರದ ರಾಟವಾಣ ಉತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ಸುತ್ತಮುತ್ತಲಿನ 14 ಗ್ರಾಮದ ಸಾವಿರಕ್ಕೂ ಅಧಿಕ ಭಕ್ತರು 14 ಗ್ರಾಮದ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಕೋಳೂರು ಸಾವಿರದ ಭಕ್ತರು ರಾಟವಾಣದ ಮೇಲೆ ಕುಳಿತು ಸುತ್ತುವ ಮೂಲಕ ಪ್ರಸಿದ್ಧವಾದ ರಾಟವಾಣ ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು ದೇವತೆಗಳಿಗೆ ಪೂಜೆ ಸಲ್ಲಿಸಿ,ಹರಕೆ ಒಪ್ಪಿಸಿದ ಬಳಿಕ ಆಯಾ ಗ್ರಾಮದ ದೇವತೆಗಳನ್ನು ಕರೆದೊಯ್ಯಲಾಯಿತು.

ರಾಟವಾಣ ಉತ್ಸವದಂದು ಕೋಳೂರು ಸಾವಿರದ ಗ್ರಾಮಗಳಿಗೆ ಮಳೆ ಬರುತ್ತದೆ ಎಂಬ ಆಗಾಧ ನಂಬಿಕೆ ಜನರಲ್ಲಿದೆ.ಇದೇ 11ರಂದು ಸುಗ್ಗಿ ಉತ್ಸವದ ಒಳ್ಳೆ ಮಾತಿನವರು ಎಂಬ ಸೇವಾಕರ್ತರು ದೇವರಮನೆ ಗ್ರಾಮದಲ್ಲಿರುವ ಶ್ರೀಕಾಲಭೈರವೇಶ್ವರ ಸ್ವಾಮಿಗೆ ಸೊಪ್ಪು ಒಪ್ಪಿಸುವುದರ ಮೂಲಕ 15 ದಿನಗಳ ಸುಗ್ಗಿ ಉತ್ಸವಕ್ಕೆ ತೆರೆ ಬೀಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next