ಬೆಳ್ತಂಗಡಿ: ನೆರಿಯಾ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷ ಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ.
ಸ್ಥಳೀಯರು ಹೇಳುವಂತೆ ಸೋಮವಾರ ರಾತ್ರಿ 5 ಕೆ.ಜಿ.ಗೂ ಅಧಿಕ ಅಡಕೆ ತೋಟಕ್ಕೆ ಬಳಸುವ ಮೈಲುಸುತ್ತು ದ್ರಾವಣ ಬಳಸಿರುವ ಶಂಕೆ ವ್ಯಕ್ತಪಡಿಸಿದ್ದು 2 ಕಿ.ಮೀ. ದೂರ. ಮೀನುಗಳು ಸಾವನ್ನಪ್ಪಿವೆ.
ಇದೇ ನೀರನ್ನು ಕುಡಿದು ನವಿಲು ಸಾವನ್ನಪ್ಪಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊರೊನಾ ಭೀತಿಯಿಂದ ನಲುಗಿರುವ ನಡುವೆಯೇ ಮನೆಯಿಂದ ಹೊರಗೆ ಬರಲಾಗದ ಮಂದಿ ವಿಷ ಪದಾರ್ಥ ಬಳಸಿ ನದಿ ಮೀನು ಹಿಡಿಯಲು ಮುಂದಾಗುವ ಮೂಲಕ ಅಮಾನುಷ ವರ್ತನೆ ತೋರುತಗತಿದ್ದಾರೆ.
ಕೊಲ್ನ ನದಿಯಲ್ಲಿ ಹೊರ ಪ್ರದೇಶದಿಂದ ಬಂದ ಮಂದಿ ವಿದ್ಯುತ್ ಬಳಸಿ ಮೀನು ಹಿಡಿಯುತ್ತಿರುವ ಆರೋಪವೂ ಕೇಳಿ ಬಂದಿದೆ.
ಇದೇ ನೀರನ್ನು ಸುತ್ತ ಮುತ್ತ ಅಣಿಯೂರು, ಪಿಲಿಕಳ, ನೆರಿಯಾ ಉಂಬಾಜೆ ಸುತ್ತ ಮುತ್ತ ಮಂದಿ ಇದೇ ನೀರನ್ನು ಅವಲಂಬಿಸಿದ್ದಾರೆ.
ಈ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಆರೋಪಿಗಳ ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.