ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ʼಜೈಲರ್ʼ (Jailer) ಸಿನಿಮಾ ಕಾಲಿವುಡ್‌ನಲ್ಲಿ (Kollywood) ದೊಡ್ಡ ಹಿಟ್ ಆಗಿತ್ತು. 2023ರಲ್ಲಿ ಕಾಲಿವುಡ್ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾಗಳ್ಲಿ ʼಜೈಲರ್ʼ ಕೂಡ ಒಂದು.
ರಜಿನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಮಾಸ್ ಅವತಾರದಲ್ಲಿ ಮಿಂಚಿದ್ದರು. ನಟನೆ, ಪಾತ್ರವರ್ಗ, ಮ್ಯೂಸಿಕ್, ಕಥೆ ಹೀಗೆ ಎಲ್ಲಾ ವಿಭಾಗದಲ್ಲಿ ʼಜೈಲರ್ʼಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಸಿನಿಮಾ ನೋಡಿ ʼತಲೈವಾʼ ಅವರಿಗೆ ಜೈಕಾರ ಹಾಕಿದ್ದರು.
ಇದನ್ನೂ ಓದಿ: Sarigama Viji: ಚಂದನವನದ ಹಿರಿಯ ನಟ ಸರಿಗಮ ವಿಜಿ ವಿಧಿವಶ
ʼಜೈಲರ್ʼ ಹಿಟ್ ಲಿಸ್ಟ್‌ಗೆ ಸೇರಿದ ಕೆಲವೇ ತಿಂಗಳಿನಲ್ಲಿ ಚಿತ್ರದ ಸೀಕ್ವೆಲ್ ಬರಲಿದೆ ಎನ್ನುವ ಮಾತುಗಳು ಕಾಲಿವುಡ್‌ನಲ್ಲಿ ಹರಿದಾಡಿತ್ತು. ಇದೀಗ ಮಕರ ಸಂಕ್ರಾಂತಿ ಹಬ್ಬಕ್ಕೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (Director Nelson Dilipkumar) ‘ಜೈಲರ್ -2ʼ (Jailer 2) ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಅನೌನ್ಸ್ ಮೆಂಟ್‌ಗಾಗಿ ಮಾಸ್ ಟೀಸರ್ ರಿಲೀಸ್ ಮಾಡಿದ್ದಾರೆ.
ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ಗೋವಾದ ಬೀಚ್ ಬದಿಯ ಮನೆಯೊಂದರಲ್ಲಿ ಕೂತು ಸಿನಿಮಾದ ಬಗ್ಗೆ ಮಾತನಾಡುತ್ತ ಇರುತ್ತಾರೆ. ಇದೇ ಸಮಯದಲ್ಲಿ ʼಟೈಗರ್ ಮುತ್ತುವೇಲ್ ಪಾಂಡಿಯನ್ʼ ಫೈಟ್ ಸೀನ್ ಶುರುವಾಗುತ್ತದೆ.
ತನ್ನ ತಂಟೆಗೆ ಬಂದವರನ್ನು ಮಚ್ಚು, ಗನ್, ಬಾಂಬ್‌ನಿಂದ ಉಡೀಸ್ ಮಾಡುವ ರಕ್ತಸಿಕ್ತ ದೃಶ್ಯವನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಎಷ್ಟೇ ಜನ ಬಂದರೂ ತಾನೊಬ್ಬನ್ನೇ ಸಾಕು ಎನ್ನುವ ʼಮುತ್ತುವೇಲ್ ಪಾಂಡಿಯನ್ʼ ಗತ್ತು – ಗರ್ವ ಟೀಸರ್‌ನಲ್ಲಿ ಹೈಲೈಟ್ ಆಗಿದೆ. ರಜಿನಿ ʼಮುತ್ತುವೇಲ್ ಪಾಂಡಿಯನ್ʼ ಆಗಿ ಔಟ್ & ಔಟ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ʼಜೈಲರ್ʼ ನಲ್ಲಿದ್ದ ಮ್ಯೂಸಿಕ್ ಹಾಗೂ ಬಿಜಿಎಂ ʼಜೈಲರ್ -2ʼ ಅನೌನ್ಸ್‌ಮೆಂಟ್ ನಲ್ಲೂ ಹಾಕಲಾಗಿದೆ. ʼಟೈಗರ್ ಕಾ ಹುಕುಂʼ ಎನ್ನುತ್ತಾ ರಜಿನಿ ಮಿಂಚಿದ್ದಾರೆ.
ರಜಿನಿಕಾಂತ್ ಅವರನ್ನು ನೋಡಿ ಫ್ಯಾನ್ಸ್‌ಗಳು ಥ್ರಿಲ್ ಆಗಿದ್ದಾರೆ. ಅನೌನ್ಸ್ ಮೆಂಟ್ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಚಿತ್ರಕ್ಕೆ ಬಂಡವಾಳ ಹಾಕಲಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.
ʼಜೈಲರ್ʼ ನಲ್ಲಿ ಶಿವರಾಜಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಮುಂತಾದ ದಿಗ್ಗಜ ನಟರು ಕಾಣಿಸಿಕೊಂಡಿದ್ದರು. ಸೀಕ್ವೆಲ್‌ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಸದ್ಯ ರಜಿನಿಕಾಂತ್ ʼವೆಟ್ಟೈಯನ್ʼ ಬಳಿ ಲೋಕೇಶ್ ಕನಕರಾಜ್ ಅವರ ʼಕೂಲಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ʼಜೈಲರ್ -2ʼ ಸೆಟ್ಟೇರುವ ಸಾಧ್ಯತೆಯಿದೆ.