ಚೆನ್ನೈ: ಕಾಲಿವುಡ್‌ನ ಸೂಪರ್ ಹಿಟ್ ಕಾಂಬಿನೇಷನ್ ಧನುಷ್ – ವೆಟ್ರಿಮಾರನ್ ಮತ್ತೆ ಜತೆಯಾಗುತ್ತಿದ್ದಾರೆ. ಈ ಬಾರಿ ಬಿಗ್ ಪ್ರಾಜೆಕ್ಟ್ ಒಂದರ ಮೂಲಕ ಬರಲಿದ್ದಾರೆ.
ಹಿಟ್ ನಿರ್ದೇಶಕ ವೆಟ್ರಿಮಾರನ್ (Vetrimaaran) ಅವರ ʼವಿಧುತಲೈ -2ʼ ಸಿನಿಮಾ ಇತ್ತೀಚೆಗೆ 25 ದಿನಗಳನ್ನು ಪೂರೈಸಿದೆ. ಅಂದುಕೊಂಡ ಮಟ್ಟಿಗೆ ಚಿತ್ರಕ್ಕೆ ರೆಸ್ಪಾನ್ಸ್ ಸಿಗದೆ ಇದ್ರು ಒಂದಷ್ಟು ಕಡೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ.
ಲಾಂಗ್ ಗ್ಯಾಪ್ ಬಳಿಕ ಸೂರ್ಯ (Suriya) ಅವರೊಂದಿಗಿನ ‘ವಾಡಿವಾಸಲ್’ (Vaadivaasal) ಚಿತ್ರಕ್ಕೆ ವೆಟ್ರಿಮಾರನ್ ಮರು ಚಾಲನೆ ನೀಡಿದ್ದಾರೆ. ಈ ನಡುವೆಯೇ ಧನುಷ್ ಅವರ ಜತೆ 5ನೇ ಬಾರಿಗೆ ಕೈಜೋಡಿಸಿರುವ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: BBK11: ಇಂದು ರಾತ್ರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!
ʼವಿಧುತಲೈ-2ʼ ಚಿತ್ರಕ್ಕೆ ಬಂಡವಾಳ ಹಾಕಿರುವ ಎಲ್ರೆಡ್ ಕುಮಾರ್ ಅವರ ʼಆರ್ ಎಸ್ ಇನ್ಫೋಟೈನ್ಮೆಂಟ್ʼ ಧನುಷ್ (Dhanush) – ವೆಟ್ರಿಮಾರನ್ ಜತೆಗಿನ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದೆ. ಸೂರ್ಯ ಅವರ ‘ವಾಡಿವಾಸಲ್’ ಬಳಿಕ ವೆಟ್ರಿಮಾರನ್ ಧನುಷ್ ಜತೆ ಹೊಸ ಸಿನಿಮಾವನ್ನು ಮಾಡಲಿದ್ದಾರೆ.
ಈ ಹಿಂದೆ ಧನುಷ್ ಜತೆ ವೆಟ್ರಿಮಾರನ್ ʼಪೊಲ್ಲಾದವನ್ʼ, ʼಆಡುಕಾಲಂʼ, ʼವಡಾ ಚೆನ್ನೈʼ, ʼಅಸುರನ್ʼ, ಸಿನಿಮಾಗಳನ್ನು ಮಾಡಿದ್ದರು. ಇದರಲ್ಲಿʼಆಡುಕಲಂʼ ಮತ್ತು ʼಅಸುರನ್ʼನಲ್ಲಿನ ಪಾತ್ರಗಳಿಗಾಗಿ ಧನುಷ್ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದರು.
ಇದೀಗ ಐದನೇ ಬಾರಿಗೆ ಧನುಷ್ – ವೆಟ್ರಿಮಾರನ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಅನೌನ್ಸ್ ಆದ ಬಳಿಕ ಕಾಲಿವುಡ್ ನಲ್ಲಿ ನಾನಾ ರೀತಿಯ ಚರ್ಚೆ ಶುರುವಾಗಿದೆ.
ಧನುಷ್ – ವೆಟ್ರಿಮಾರನ್ ಅವರ ಹೊಸ ಸಿನಿಮಾ ʼಕೆಜಿಎಫ್ʼನ ರಿಯಲ್ ಸ್ಟೋರಿಯನ್ನು ಒಳಗೊಳ್ಳಲಿದೆ ಎನ್ನಲಾಗಿದೆ. ಜೂ.ಎನ್ ಟಿಆರ್ ಕೂಡ ಸಿನಿಮಾದಲ್ಲಿರಬಹುದು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಈ ಹಿಂದೆ ಧನುಷ್ – ಜೂ.ಎನ್ ಟಿರ್ ಅವರನ್ನು ಜತೆಯಾಗಿಸಿಕೊಂಡು ʼವಡಾ ಚೆನ್ನೈ-2ʼ ಮಾಡುವ ಮಾತುಕತೆ ನಡೆದಿತ್ತು. ಆದರೆ ಅದು ಮುಂದುವರೆಯಲಿಲ್ಲ. ಹೀಗಾಗಿ ಈ ಸಿನಿಮಾದಲ್ಲಿ ಜೂ.ಎನ್ ಟಿಆರ್ ಇರಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.
ದುಬಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.