Advertisement
ಕೊಲ್ಲೂರು ಸ್ವಾಗತ ಗೋಪುರದಿಂದ ದಳಿವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟು ಸಹಿತ ವಿವಿಧ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಂಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಕೊಲ್ಲೂರಿನ ಮುಖ್ಯ ರಸ್ತೆ ಈಗ ತುಂಬ ಕಿರಿದಾಗಿದ್ದು, ವಿಶೇಷ ಉತ್ಸವದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
Related Articles
ಕೊಲ್ಲೂರಿನಿಂದ ದಳಿಗೆ ಸಾಗುವ ಹೆದ್ದಾರಿ ಮಾರ್ಗದಲ್ಲಿ ರಸ್ತೆಯನ್ನು ಅಗಲಗೊಳಿಸಲಾಗಿದ್ದರೂ ಕಿರುಸೇತುವೆಯ ಇಕ್ಕೆಲ ಅಗಲ ಕಿರಿದಾಗಿರುವುದರಿಂದ ಸಮಸ್ಯೆಯಾಗಿದೆ. ಕಿರುಸೇತುವೆಯ ನಡುವಿನ ಅಂತರವನ್ನು ಹೆಚ್ಚಿಸದಿದ್ದಲ್ಲಿ ರಸ್ತೆ ಅಗಲೀಕರಣದ ಲಾಭ ಸಿಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ.
Advertisement
15 ಕಿ.ಮೀ ಅಗಲಕ್ಕೆ ಭೂಸ್ವಾಧೀನರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯ ಬಿಂದುವಿನಿಂದ 15 ಮೀ.ನಷ್ಟು ಅಗಲದವರೆಗೆ ಭೂಸ್ವಾಧೀನ ಮಾಡಲಾಗುತ್ತದೆ. ಈ ವ್ಯಾಪ್ತಿಯಲ್ಲಿರುವ ಕಟ್ಟಡಗಳು, ಮುಂಗಟ್ಟುಗಳನ್ನು ತೆರವು ಮಾಡಲಾಗುತ್ತದೆ. 10 ಮೀ. ಅಗಲವನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸಿ 2 ಮೀ. ವ್ಯಾಪ್ತಿಯಲ್ಲಿ ಪಾದಚಾರಿ ರಸ್ತೆ, 1 ಮೀ. ಪ್ರದೇಶದಲ್ಲಿ ಚರಂಡಿ ಹಾಗೂ ವಿದ್ಯುತ್ ಕಂಬ ಅಳವಡಿಸಲಾಗುತ್ತದೆ. ಸಂತ್ರಸ್ತರಿಗೆ ಪರಿಹಾರ: ರಾಷ್ಟ್ರೀಯ ಹೆದ್ದಾರಿಯ ಸನಿಹದ ಕಟ್ಟಡ, ಭೂಮಿ, ತೋಟ,ಹಾಗೂ ಮನೆಗಳನ್ನು ಕಳೆದುಕೊಳ್ಳುವ ಸಂತ್ರಸ್ತರಿಗೆ ಸರಕಾರದ ನಿಯಮದಂತೆ ಪರಿಹಾರ ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೊಡಕು ಪರಿಹಾರ
ಕೊಲ್ಲೂರು-ಬೈಂದೂರು ರಾ.ಹೆದ್ದಾರಿ ದ್ವಿಪಥ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಅನುದಾನ ಒದಗಿಸಿದೆ. ನಿರ್ಮಾಣದ ವೇಳೆ ಎದುರಾಗುವ ತೊಡಕುಗಳನ್ನು ಪರಿಹರಿಸಲಾಗುವುದು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
-ಬಿ.ವೈ. ರಾಘವೇಂದ್ರ, ಸಂಸದ. -ಡಾ| ಸುಧಾಕರ ನಂಬಿಯಾರ್