Advertisement
30 ವರ್ಷಗಳ ಹಿಂದಿನ ಸೇತುವೆಕೊಲ್ಲೂರು- ಜಡ್ಕಲ್- ಕಮಲಶಿಲೆ -ಧರ್ಮಸ್ಥಳ ನಡುವಿನ ಸಂಪರ್ಕ ಕೊಂಡಿಯಾಗಿರುವ ರಾಜ್ಯ ಹೆದ್ದಾರಿಯೆಂದು ಪರಿಗಣಿಸಲ್ಪಟ್ಟಿರುವ ಈ ಮಾರ್ಗದಲ್ಲಿ ದಿನಂಪ್ರತಿ ನೂರಾರು ಘನ ಹಾಗೂ ಲಘು ವಾಹನಗಳು ಸಂಚರಿಸುತ್ತವೆ. ಕೊಲ್ಲೂರಿನಿಂದ ಹಳ್ಳಿಹೊಳೆಗೆ ಸನಿಹದ ಮಾರ್ಗವಾಗಿರುವುದರಿಂದ ಕಮಲಶಿಲೆ ದೇಗುಲಕ್ಕೆ ತೆರಳುವ ಯಾತ್ರಾರ್ಥಿಗಳು ಕೊಲ್ಲೂರು ಕ್ಷೇತ್ರ ದರ್ಶನ ಮುಗಿಸಿ ಈ ಮಾರ್ಗವಾಗಿ ಸಾಗುತ್ತಾರೆ.
ಜಡ್ಕಲ್ ಗ್ರಾಮಸ್ಥರು ಬಹಳಷ್ಟು ವರುಷಗಳಿಂದ ಸಳ್ಕೊàಡು ಹಾಗೂ ಗಂಗೆಕೊಡ್ಲುವಿನಲ್ಲಿರುವ ಶಿಥಿಲಗೊಂಡ ದುರ್ಬಲ ಸೇತುವೆಯನ್ನು ಬದಲಿಸಿ ನೂತನ ಸೇತುವೆ ನಿರ್ಮಿಸುವಂತೆ ಇಲಾಖೆ ಗಮನ ಸೆಳೆಯಲು ಗ್ರಾಮಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ್ದರು. ಕಳೆದ 7 ತಿಂಗಳ ಹಿಂದೆ ಜಡ್ಕಲ್ ಗ್ರಾ.ಪಂ. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿಲಾಗಿತ್ತು. ಆದರೆ ಈವರೆಗೆ ಸರಕಾರದ ಮುಂದೆ ಸೇತುವೆ ನಿರ್ಮಾಣದ ಪ್ರಸ್ತಾವನೆ ತಲುಪದಿರುವುದು ಗ್ರಾಮಸ್ಥರಲ್ಲಿ ನಿರಾಸೆ ಉಂಟುಮಾಡಿದೆ. ಘನ ವಾಹನಗಳು ಸಾಗುತ್ತಿರುವ ಈ ಸೇತುವೆ ಬದಲಿಸದಿದ್ದಲ್ಲಿ ಮುಂದಿನ ದಿನ ದುರಂತ ಕಟ್ಟಿಟ್ಟ ಬುತ್ತಿ.
Related Articles
Advertisement
ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಶಿಥಿಲಗೊಂಡ 2 ಸೇತುವೆಗಳ ಪುನರ್ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
– ಪಾರ್ವತಿ ಬೆಳಾರಿ, ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್ ಬಹಳಷ್ಟು ವರ್ಷಗಳಿಂದ ಬೇಡಿಕೆ
ಬಹಳಷ್ಟು ವರ್ಷಗಳಿಂದ ಶಿಥಿಲಗೊಂಡ ಸೇತುವೆಗಳ ಬದಲಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಲಾಗಿದ್ದರೂ ಬೇಡಿಕೆ ಈಡೇರದಿರುವುದು ದುರಾದೃಷ್ಟಕರ.
– ಚಂದ್ರ ಪೂಜಾರಿ, ಸಳ್ಕೋಡು -ಡಾ| ಸುಧಾಕರ ನಂಬಿಯಾರ್