Advertisement

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ ಸಂಪನ್ನ

12:06 AM Oct 06, 2022 | Team Udayavani |

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಮಂಗಳವಾರ ಚಂಡಿಕಾಯಾಗ, ನವರಾತ್ರಿ ರಥೋತ್ಸವ ಜರಗಿತು.

Advertisement

ಅರ್ಚಕ ಡಾ| ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿತು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಧಿಕಾರಿ ಕೂರ್ಮಾ ರಾವ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾರ್ಯನಿರ್ವಹಣಾಧಿ ಕಾರಿ ಮಹೇಶ, ಸಮಿತಿ ಸದಸ್ಯರು ಸಂಕಲ್ಪದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ಚಾಲನೆ ನೀಡಿದರು.

ನಾಣ್ಯ ಸಂಗ್ರಹಕ್ಕೆ ಮುಗಿಬಿದ್ದ ಭಕ್ತರು
ಒಳಪೌಳಿಯಲ್ಲಿ ನಡೆದ ರಥೋತ್ಸವಕ್ಕೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿ ದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಅಲಂಕೃತ ಪುಷ್ಪ ರಥದಲ್ಲಿ ಪ್ರದಕ್ಷಿಣೆಯ ಬಳಿಕ ಸಂಪ್ರದಾಯದಂತೆ ರಥದಿಂದ ಎಸೆಯುವ ನಾಣ್ಯವನ್ನು ಸಂಗ್ರಹಿಸಲು ಭಕ್ತರು ಮುಗಿ ಬಿದ್ದರು. ಆ ನಾಣ್ಯವನ್ನು ಮನೆಗೆ ಕೊಂಡೊಯ್ದು ದೇವರ ಕೋಣೆಯಲ್ಲಿಟ್ಟು ಪೂಜಿಸಿದಲ್ಲಿ ಕಲ್ಯಾಣವಾಗುವುದು ಎಂಬುದು ಭಕ್ತರ ನಂಬಿಕೆ.

ಉಪಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next