Advertisement

Missing Case ಕೊಲ್ಲೂರು: ವಿವಾಹಿತ ಮಹಿಳೆ ನಾಪತ್ತೆ

11:13 PM Feb 02, 2024 | Team Udayavani |

ಕೊಲ್ಲೂರು: ವಂಡ್ಸೆ ನಿವಾಸಿ ಆಫ್ಸಾನಾ (23) ಜ. 30ರಿಂದ ಕಾಣೆಯಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೋವಾದಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್‌ ರೆಹಮಾನ್‌ ಅವರ ಪತ್ನಿ ಆಫ್ಸಾನಾ ವಂಡ್ಸೆಯಲ್ಲಿ ಪತಿಯ ತಾಯಿ ಹಾಗೂ ಅಕ್ಕನೊಂದಿಗೆ ವಾಸವಾಗಿದ್ದರು.

ಜ. 30ರಂದು ರಾತ್ರಿ ಮಲಗಿದ್ದವರು ಜ. 31ರಂದು ಬೆಳಗ್ಗೆ 10 ಗಂಟೆಯಾದರೂ ಹೊರಗೆ ಬಾರದ ಕಾರಣ ನೋಡಿದಾಗ ಆಫ್ಸಾನಾ ಅಲ್ಲಿರಲಿಲ್ಲ. ತತ್‌ಕ್ಷಣ ಆಕೆಯ ಪತಿ ಅಬ್ದುಲ್‌ ರೆಹಮಾನ್‌ ಹಾಗೂ ಸಂಬಂಧಿ ಕರಿಗೆ ಕರೆ ಮಾಡಿ ವಿಚಾರಿಸಿದಾಗ ಅವರ ಮನೆಗೆ ಹೋಗಿಲ್ಲವೆಂದು ಖಾತ್ರಿಯಾಯಿತು. ಕೊಠಡಿಯನ್ನು ಪರಿಶೀಲಿಸಿದಾಗ ನನ್ನನ್ನು ಹುಡುಕಬೇಡಿ, ನಾನು ತುಂಬಾ ದೂರ ಹೋಗುತ್ತಿದ್ದೇನೆ ಎಂದು ಬರೆದ ಕಾಗದ ಸಿಕ್ಕಿದೆ. ಕೊಲ್ಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next