Advertisement

ಕೊಲ್ಲೂರು: ನೀರುಪಾಲಾಗಿದ್ದ ತಿರುವನಂತಪುರದ ಮಹಿಳೆಯ ಮೃತದೇಹ ಪತ್ತೆ

10:26 PM Sep 11, 2022 | Team Udayavani |

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸೆ. 10ರಂದು ಆಗಮಿಸಿ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ತಿರುವನಂತಪುರದ ಮುರುಗನ್‌ ಅವರ ಪತ್ನಿ ಶಾಂತಿ ಶೇಖರನ್‌ (42) ಅವರ ಮೃತದೇಹ ಸೆ. 11ರ ಸಂಜೆ ಅನತಿ ದೂರದಲ್ಲಿ ಪತ್ತೆಯಾಗಿದೆ.

Advertisement

ತಿರುವನಂತಪುರದಿಂದ ಕೊಲ್ಲೂರು ಕ್ಷೇತ್ರ ದರ್ಶನಕ್ಕೆ 14 ಮಂದಿಯ ತಂಡ ಆಗಮಿಸಿತ್ತು. ಅವರು ಸೌಪರ್ಣಿಕಾ ಸ್ನಾನಘಟ್ಟಕ್ಕೆ ತೆರಳಿ ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಶಾಂತಿ ಶೇಖರನ್‌ ಅವರು ಪುತ್ರ ಆದಿತ್ಯ ನದಿಯ ಸೆಳೆತಕ್ಕೆ ಒಳಗಾಗಿ ನೀರು ಪಾಲಾಗುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ನೀರಿಗೆ ಧುಮುಕಿದ್ದರು. ಆಕೆಯ ಪತಿ ಮುರುಗನ್‌ ಕೂಡ ಪುತ್ರನನ್ನು ಕಾಪಾಡಲು ನೀರಿಗೆ ಹಾರಿದ್ದರು. ಆದಿತ್ಯ ಹಾಗೂ ಮುರುಗನ್‌ ಈಜಿ ದಡ ಸೇರಿದರೆ ಶಾಂತಿ ಶೇಖರನ್‌ ನೀರಿನ ಸೆಳೆತಕ್ಕೆ ಸಿಲುಕಿ ನದಿಯಲ್ಲಿ ಕೊಚ್ಚಿ ಹೋಗಿದ್ದರು.

ಅಗ್ನಿಶಾಮಕ ದಳ, ಕೊಲ್ಲೂರು ಪೊಲೀಸರು ಹಾಗೂ ಈಶ್ವರ ಮಲ್ಪೆ ತಂಡದವರು ಶೋಧ ಕಾರ್ಯ ನಡೆಸಿದ್ದು, ರವಿವಾರ ಸಂಜೆ ಸೌಪರ್ಣಿಕಾ ನದಿಯ 1 ಕಿ.ಮೀ. ದೂರ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸೌಪರ್ಣಿಕಾ ನದಿ ತಟಕ್ಕೆ ವಿಶೇಷ ಭದ್ರತೆ ಅಗತ್ಯ
ಮಳೆಗಾಲದಲ್ಲಿ ಪ್ರತೀ ವರ್ಷವೂ ಅವಘಡ ಸಂಭವಿಸುವ ಇಲ್ಲಿ ಭದ್ರತೆಗೆ ಕ್ರಮ ಕೈಗೊಳ್ಳಬೇಕಾಗಿದೆ.ರಾತ್ರಿ ಹೊತ್ತಿನಲ್ಲಿ ಪ್ರಕಾಶಮಾನವಾದ ಬೆಳಕಿನ ವ್ಯವಸ್ಥೆ, ಅಲ್ಲದೇ ಸಿಬಂದಿಯನ್ನು ನೇಮಿಸುವುದು ಸೂಕ್ತ. ಮಳೆಗಾಲದಲ್ಲಿ ಭಕ್ತರು ನೀರಿಗಿಳಿಯದಂತೆ ತಡೆಬೇಲಿ ನಿರ್ಮಿಸಬೇಕೆಂದು ಯಾತ್ರಾರ್ಥಿಗಳು ಆಗ್ರಹಿಸಿದ್ದಾÃ

Advertisement

Udayavani is now on Telegram. Click here to join our channel and stay updated with the latest news.

Next