Advertisement

ಕೊಳ್ಳೇಗಾಲ ಶಾಸಕ ಮಹೇಶ್‌ ಶೀಘ್ರವೇ ಬಿಜೆಪಿಗೆ?

06:37 PM Dec 03, 2020 | Suhan S |

ಚಾಮರಾಜನಗರ: ಬಿಎಸ್‌ಪಿಯಿಂದ ಉಚ್ಚಾಟಿತರಾಗಿ ರುವ ಕೊಳ್ಳೇಗಾಲ ಮೀಸಲುವಿಧಾನಸಭಾ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

Advertisement

ಪ್ರಸಕ್ತ ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಯಾಗಿಲ್ಲ ಎಂಬುದೊಂದನ್ನು ಹೊರತುಪಡಿಸಿದರೆ,ಅವರ ನಡೆ ನುಡಿ ವರ್ತನೆಗಳೆಲ್ಲವೂ ಬಿಜೆಪಿಯ ಪರವಾಗಿಯೇ ಇವೆ. ಇನ್ನೇನಿದ್ದರೂ ಪಕ್ಷದ ಬಾವುಟಹಿಡಿದು ಪಕ್ಷ ಸೇರುವುದೊಂದೇ ಬಾಕಿಉಳಿದಿರುವುದು. ಆದರೆ ಅದಕ್ಕೆ ಮಹೂರ್ತ ಇನ್ನೂ ನಿಗದಿಯಾಗಿಲ್ಲವಷ್ಟೇ.

ಸಂಚಲನ: 2018ರ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎನ್‌. ಮಹೇಶ್‌ಗೆದ್ದು ಬಂದು ಮೊದಲ ಬಾರಿಗೆ ವಿಧಾನಸೌಧ ಪ್ರವೇಶ ಮಾಡಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿ ಮಹತ್ವದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಪಡೆದಿದ್ದರು.

ಆ ಸಂದರ್ಭದಲ್ಲಿ ಓಪನ್‌ ಬುಕ್‌ ಎಕ್ಸಾಮ್‌ ಮಾಡುವಚಿಂತನೆಯಿದೆ ಎಂಬ ಕ್ರಾಂತಿಕಾರಕ ಹೇಳಿಕೆಯನ್ನೂ ನೀಡಿ ಸಂಚಲನ ಮೂಡಿಸಿದ್ದರು.

ರಾಜೀನಾಮೆ: ರಾಷ್ಟ್ರಮಟ್ಟದಲ್ಲಿ ಬಿಎಸ್‌ಪಿ, ಕಾಂಗ್ರೆಸ್‌ ಜೊತೆ ಮೈತ್ರಿಕಡಿದುಕೊಂಡಕಾರಣ, ಆ ಪಕ್ಷದ ಮೈತ್ರಿ ಇರುವ ಸರ್ಕಾರದಲ್ಲಿರುವುದು ಬೇಡ. ಆದ್ದರಿಂದಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಎಸ್‌ಪಿಅಧಿನಾಯಕಿ ಮಾಯಾವತಿ ಅವರು ಸೂಚನೆ ನೀಡಿದ ಕಾರಣ ಸಚಿವ ಸ್ಥಾನಕ್ಕೆ ಮಹೇಶ್‌ ರಾಜೀನಾಮೆ ನೀಡಬೇಕಾಗಿ ಬಂತು.

Advertisement

ಬಿಎಸ್ಪಿಯಿಂದ ಉಚ್ಚಾಟಿತ: 2019ರ ಜುಲೈ 23ರಂದು ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭದಲ್ಲಿ,ಜೆಡಿಎಸ್‌ ಪರ ಮತ ನೀಡುವಂತೆ ಎನ್‌.ಮಹೇಶ್‌ಗೆಮಾಯಾವತಿ ಟ್ವೀಟ್‌ ಮಾಡಿ ನಿರ್ದೇಶನ ನೀಡಿದ್ದರು.ಆದರೆ ಎನ್‌. ಮಹೇಶ್‌ ಅವರು ಸದನಕ್ಕೆ ಗೈರು ಹಾಜರಾಗಿದ್ದರು. ನನಗೆ ಟ್ವಿಟರ್‌ ನೋಡಲುಬರುವುದಿಲ್ಲ. ಹಾಗಾಗಿ ವಿಷಯ ತಿಳಿಯಲಿಲ್ಲ. ನಾನು ಧ್ಯಾನಕೇಂದ್ರವೊಂದರಲ್ಲಿದ್ದೆ. ಮೊಬೈಲ್‌ ನೆಟ್‌ವರ್ಕ್‌ ಕೂಡ ಸಿಗಲಿಲ್ಲ! ಎಂದು ಆಗ ಮಹೇಶ್‌ ಸ್ಪಷ್ಟೀಕರಣ ನೀಡಿದ್ದರು. ತಮ್ಮ ಆದೇಶ ಉಲ್ಲಂ ಸಿದ ಕಾರಣ ಎನ್‌. ಮಹೇಶ್‌ ಅವರನ್ನು ಬಿಎಸ್‌ಪಿಯಿಂದ ಮಾಯಾವತಿ ಉಚ್ಚಾಟಿಸಿದ್ದರು.

ಇದಾದ ಬಳಿಕ ಮಹೇಶ್‌ ಪಕ್ಷೇತರರಾಗಿ ಉಳಿದಿದ್ದರು. ನಾನು ಯಾವುದೇ ಪಕ್ಷ ಸೇರುವುದಿಲ್ಲಸ್ವತಂತ್ರನಾಗೇ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದಿದ್ದರು. ಆದರೆ, ಎನ್‌. ಮಹೇಶ್‌ಅವರ ಹೇಳಿಕೆಗಳು, ವರ್ತನೆಗಳು ಬಿಜೆಪಿಗೆ ಪೂರಕವಾಗುವಂತೆ ಇದ್ದವು. ಸಚಿವ ರಮೇಶ್‌ಜಾರಕಿಹೊಳಿ ಅವರು ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದಾಗ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಎನ್‌. ಮಹೇಶ್‌ ಅವರು ಸಹಕಾರನೀಡಿದ್ದಾರೆಎಂದುಬಹಿರಂಗವಾಗೇ ಹೇಳಿಕೆ ನೀಡಿದ್ದರು.

ಸರ್ಕಾರಕ್ಕೆ ಸಹಕಾರ: ಮೊನ್ನೆ ಮೊನ್ನೆ ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗ್ರಾಮಸ್ವರಾಜ್ಯ ಕಾರ್ಯಕ್ರಮಕ್ಕೆ ಕೊಳ್ಳೇಗಾಲಕ್ಕೆ ಬಂದಿದ್ದಾಗಶಾಸಕ ಎನ್‌. ಮಹೇಶ್‌ ಅವರು ಯಾವಾಗ ಬಿಜೆಪಿಗೆ ಸೇರುತ್ತಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ,ಅರ್ಥಪೂರ್ಣವಾಗಿ ನಸುನಕ್ಕು ವಿಜಯೇಂದ್ರ ಅವರು, ಇದರಲ್ಲಿ ಮುಜುಗರ ಇಲ್ಲ, ಮುಚ್ಚುಮರೆ ಇಲ್ಲ. ಎನ್‌. ಮಹೇಶ್‌ ಅವರು ಬಿಜೆಪಿ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದಾರೆ. ಅವರು ಪಕ್ಷಕ್ಕೆ ಯಾವಾಗ ಬರಬೇಕೆಂಬ ಬಗ್ಗೆ ಅವರೇ ನಿರ್ಧರಿಸಬೇಕು ಎಂದಿದ್ದರು. ಇದಕ್ಕೂ ಮುಂಚೆ ಎನ್‌. ಮಹೇಶ್‌ ಅವರುಪ್ರವಾಸಿ ಮಂದಿರಕ್ಕೆ ತೆರಳಿ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಹಾರ ಹಾಕಿ ಅಭಿನಂದಿಸಿದ್ದರು. ನಂತರ ಗೌಪ್ಯ ಮಾತುಕತೆ ನಡೆಸಿದ್ದರು.

ಇನ್ನೊಂದೆಡೆ, ಕೊಳ್ಳೇಗಾಲ ನಗರಸಭೆಚುನಾವಣೆಯಲ್ಲಿ ಮಹೇಶ್‌ ಬೆಂಬಲಿಗರ ಆಡಳಿತಕ್ಕೆ ಬಿಜೆಪಿ ಸಹಕಾರ ನೀಡಿತ್ತು. ಇತ್ತ, ಮಹೇಶ್‌ ಅವರ ಈ ನಡವಳಿಕೆಗಳಿಂದ ಬಿಎಸ್‌ಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಡಾ. ಅಂಬೇಡ್ಕರ್‌ ಹಾಗೂ ಕಾನ್ಶಿರಾಂ ಅವರ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಮಹೇಶ್‌ ಅವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಅಂಬೇಡ್ಕರ್‌ ಸಿದ್ಧಾಂತ ಹೊಂದಿದ್ದವರು, ತಮ್ಮನ್ನೇ ಮಾರಿಕೊಂಡಿದ್ದಾರೆ.ಅವರ ಗೆಲುವಿಗೆ ಎಚ್‌ಡಿಕೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ಒಕ್ಕಲಿಗರ8 ಸಾವಿರ ಓಟು ಪಡೆದಿದ್ದರು. ಎಚ್‌ಡಿಕೆ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು. 18 ವರ್ಷದಿಂದ ಅವರ ಪರ ದುಡಿದಿದ್ದೆವು. ಇಂಥವರು ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸಮತ ಹಾಕದೇವಂಚಿಸಿದ್ದಾರೆ ಎಂದು ಬಿಎಸ್‌ಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕಜಾಲತಾಣಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಹೇಶ್‌ ವಿರುದ್ಧ ಕಿಡಿಕಾರುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಪಕ್ಷೇತರರಾಗಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಕ್ಷವೊಂದರ ಬೆಂಬಲ ಬೇಕೇಬೇಕು.ಹಾಗಾಗಿ ಬಿಜೆಪಿಗೆ ಆದಷ್ಟು ಶೀಘ್ರ ಸೇರ್ಪಡೆ ಯಾಗುವುದು ಸೂಕ್ತ ಎಂಬ ನಿರ್ಧಾರಕ್ಕೆ ಮಹೇಶ್‌ಬಂದಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ. ಹೀಗಾಗಿ ಶೀಘ್ರವೇ ಎನ್‌. ಮಹೇಶ್‌ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್‌ ಆಗಲಿದೆ.

ನಾನು ಬಿಜೆಪಿ ಸೇರಬೇಕೆಂಬ ಬಗ್ಗೆಇನ್ನೂ ನಿರ್ಧಾರಮಾಡಿಲ್ಲ. ವಿಜಯೇಂದ್ರ ಅವರು ಮೊದಲಬಾರಿಗೆಕೊಳ್ಳೇಗಾಲಕ್ಕೆ ಬಂದಿದ್ದರು. ಅವರಜೊತೆ ಮೂವರುಸಚಿವರು ಸಹಬಂದಿದ್ದರು. ಸಚಿವರು ನನ್ನ ಕ್ಷೇತ್ರಕ್ಕೆಬಂದಾಗಅವರನ್ನುಭೇಟಿಮಾಡುವುದು ಸಂಪ್ರದಾಯ.ಹಾಗಾಗಿಭೇಟಿ ಮಾಡಿದ್ದೆ ಅಷ್ಟೇ. ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದೇನೆ. ಅವರ ಅಭಿಪ್ರಾಯವನ್ನೂ ಪಡೆದುನಿರ್ಧಾರ ಕೈಗೊಳ್ಳುತ್ತೇನೆ. ಎನ್‌.ಮಹೇಶ್‌, ಶಾಸಕ. ಕೊಳ್ಳೇಗಾಲ.

 

ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next